ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹದಿಮೂರನೆಯ ಪ್ರಕರಣ ೬* (wwwಭ» wwwn* ಯಣಮೂರ್ತಿಯು ಒಂದು ದಿನವಾದರೂ ಸಭೆಗೆ ಹೋಗಿ ಕೆಲಸವನ್ನು ಮಾಡಲಿಲ್ಲ ವಾದುದರಿಂದ ಕಕ್ಷಿಗಾರರು ಮತ್ತೊಬ್ಬ ನ್ಯಾಯವಾದಿಯ ಬಳಿಗೆ ಹೋಗಬೇಕಾ ಯಿತು , ಸುಬ್ರಹ್ಮಣ್ಯನು ಓದುವುದನ್ನು ಬಿಟ್ಟು ಮನೆಯಲ್ಲಿಯೇ ಇದ್ದುಕೊಂಡು ತನ್ನೊಂದಿಗೆ ಓದುತ್ತಿದ್ದ ಸೋಮಸುಂದರನೂ ತಾನೂ ನಾರಾಯಣಮೂರ್ತಿಯೊ ಡನೆ ಸತ್ಯವತಿಗೆ ಉಪಚಾರವನ್ನು ಮಾಡುತ್ತಿದ್ದರು. ಸತ್ಯವತಿಗೆ ಸ್ಥಾನವಾದಮೇಲೆ ನಾ ಭಾಯಣಮೂರ್ತಿಯು ವೈದ್ಯನಿಗೆ ತಾನು ಸಂಪಾದಿಸಿದ್ದುದರಲ್ಲಿ ಎರಡುಸಾವಿರ ರೂಪಾಯಿಗಳನ್ನು ಕೊಟ್ಟು ಆತನ್ನ ಸಾಲವನ್ನು ತಾನೆಂದಿಗೂ ತೀರಿಸಿಕೊಳ್ಳಲಾಗಲಾ ರದೆಂದೂ ಬಹುವಂದನೆಗಳನ್ನು ಮಾಡಿದನು. ಅಷ್ಟು ರೋಗವು ಬಂದು ವಾಸಿಯಾದ ಮೇಲೆ ಉತ್ಸವವೂರ್ವಕವಾಗಿ ನಾಮಕರಣವನ್ನು ಮಾಡುವುದಕ್ಕೆ ಮನಸ್ಸಿಲ್ಲದ ಸುಮ್ಮನೆ ಆ ಮಗುವನ್ನು ಮುತ್ತಜ್ಜಿಯ ಹೆಸರಿನಲ್ಲಿ ಶ್ಯಾಮಲಾಂಬೆ, ಎಂದು ಕರೆ ಯುವುದಕ್ಕೆ ಮೊದಲುಮಾಡಿದರು. ಸತ್ಯವತಿಗೆ ದೇಹವು ಸ್ವಸ್ಥವಾದುದರಿಂದ ಆ ಪಟ್ಟಣದ ನಿವಾಸಿಗಳೆಲ್ಲರೂ ತಮ್ಮ ಮನೆಯಲ್ಲಿ ಯಾರಿಗೂ ಪ್ರಾಣಾಪಾಯ ವುಂಟಾಗಿದ್ದು ಬದುಕಿದಂತೆ ಸಂತೋಷ ಪಟ್ಟರು. ಭೂಮಿಯ ಮೇಲೆ ಜನ್ಮವೆತ್ತಿದ ಬಳಿಕ ಪುರುಷರಾದರೂ ಸ್ತ್ರೀಯರಾದರೂ ಸಕಲಜನರಿಂದಲೂ ಹೀಗಲ್ಲವೆ ಹೊಗ ಳಿಸಿಕೊಳ್ಳಬೇಕು ? (Ge€ . ಹದಿಮೂರನೆಯ ಪ್ರಕರಣ. ಸತ್ಯವತಿಗೆ ದೇಹದಲ್ಲಿ ದಿನೇದಿನೇ ರಕ್ತ ವೃದ್ಧಿಯಾಗುತ್ತಾ ಬಲವೂ ಬರ ಲಾರಂಭಿಸಿ, ಆದರೆ ನಾರಾಯಣಮೂರ್ತಿ ಮಾತ್ರ ಹೆಂಡತಿಗೆ ಆಲಸ್ಯವಾದ ದಿನಗಳಲ್ಲಿ ರಾತ್ರಿ ನಿದ್ರೆಯಿಲ್ಲದುದರಿಂದಲೂ ಕೆಲಕಾಲಕ್ಕೆ ಸರಿಯಾಗಿ ಊಟವಿಲ್ಲ ದುದರಿಂದಲೂ ಮುಖ್ಯವಾಗಿ ಮನಸ್ಸಿನೊಳಗಣ ಚಿಂತೆಗಳಿಂದಲೂ ದೇಹವು ದಿನೇ ದಿನೇ ಬಡವಾಗಿ ತಿಂದ ಅನ್ನವು ಅರಗದೆ ಕಾಲುಗಳಲ್ಲಿ ನೋವೂ ಗುಂಡಿಗೆಯಲ್ಲಿ ಶಲೆಯ ಉಂಟಾಗಿ ಶುಷ್ಕವಾಗುತ್ತಾ ಬಂದನು. ಸತ್ಯವತಿಗೆ ರೋಗವು ಎಲ್ಲಿ ಮರುಕಳಿಸೀತೋ ಎಂಬ ಭಯದಿಂದ ಆತನು ತನ್ನ ದೇಹಸ್ಥಿತಿಯನ್ನು ಹೆಂಡತಿ ಯೊಡನೆ ಹೇಳದೆ ಮರೆಮಾಡಿ ಕೊಂಡಿದ್ದನು. ಆದರೆ ಹೇಳದಿದ್ದ ಮಾತ್ರದಿಂದ ರೋಗವು ಅಡಗಿರಲಾರದು. ಹೇಗೂ ಸತ್ಯವತಿಯು ಅದನ್ನು ತಿಳಿದು ಕೊಂಡು