ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೦೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಏನು ಮಾಡಿಯಾರು ? ಇನ್ನು ಗತಿಯೇನು ? ಇವರೆಲ್ಲರೂ ಸತ್ತು ಹೋಗಿರಬೇಕಲ್ಲವೆ ? ಎಂದನು. ಕೂಡಲೆ ಜೋಯಿಸನು-ಕಥೆಯ ನೈ ಲ್ಲಾ ಓದಿದ ಮೇಲೆ ನಿನಗೆ ಗೊತ್ತಾಗುವುದು, ಅದು ಹಾಗಿರಲಿ. ಒಂದು ಮಾತು ಕೇಳುತೇನೆ ಹೇಳು, ಈ ನಾಲ್ಕು ಜನ ನಾವಿಕರೂ ಆದಿಯಿಂದಲೂ ಕಷ್ಟದಲ್ಲಿ ನುರುಗಿದ್ದರು. ಹಾಗಲ್ಲದೆ ಯಾವ ಕೆಲಸ ನನ್ನೂ ಮಾಡುವುದಿಲ್ಲವೆಂದು ದೊರೆಮಕ್ಕಳ ಹಾಗೆ ಸುಮ್ಮನೇ ಕೂತು ಕೊಂಡಿದ್ದರೆ, ಅವರಿಗೆ ಯಾರಾದರೂ ಅಲ್ಲಿ ಬಂದು ಸಹಾಯ ಮಾಡು ವವರಿದ್ದರೆ ? ಎಂದು ಕೇಳಿದನು. ಅದನ್ನು ಕೇಳಿ ಮದನನು-ಯಾವ ಕೆಲಸ ಮಾಡಿಕೊಳ್ಳ ಬೇಕಾಗಿದ್ದರೂ ಅವರೇ ಮಾಡಿಕೊಳ್ಳ ಬೇಕು. ಅವರಿಗೆ ಇನ್ನು ಯಾರು ಗತಿ ಇದ್ದರು ? ಮೊದಲಿನಿಂದ ಅವರು ಕಷ್ಟಕ್ಕೆ ನುರುಗಿದ್ದು ದೇ ಒಳ್ಳೆದಾಯಿತು, ಎಂದು ನುಡಿದನು. (ಕಥೆ ಮುಂದಕ್ಕೆ ಸಾಗಿದ್ದು ಹೇಗೆಂದರೆ) :- ಕಷ್ಟ ಬಂತೆಂದು ಪ್ರಾಣವನ್ನು ಕಳೆದುಕೊಳ್ಳುವುದಕ್ಕಾದೀತೆ ? ಇದ್ದು ದರಲ್ಲಿ ಜೀವಿಸಿಕೊಂಡಿರುವುದಕ್ಕೆ ಯತ್ನಿಸಬೇಕು. ಇದನ್ನು ಯೋಚಿಸಿ ನಾಲ್ವರೂ ರಾತ್ರಿ ಮಲಗಿದ್ದ ಗುಡಿಸಲಿಗೆ ಹೋದರು. ಗುಡಿಸಲೆಲ್ಲಾ ಮರದ ದಿಮ್ಮಿಯನ್ನು ಸೇರಿಸಿಯೇ ಕಟ್ಟಿತ್ತು, ಒಂದೊಂ ದುಕಡೆ ಮಾತ್ರ ಸ್ವಲ್ಪ ಸಂದು ಬಿಟ್ಟಿದ್ದ ಕಾರಣ ತನುವಿನ ಗಾಳಿಯು ಒಳಕ್ಕೆ ನುಗ್ಗಿ ರಾತ್ರೆಯಲ್ಲಿ ಚಳಿಯನ್ನು ಸಹಿಸುವದು ಕಷ್ಟವಾಗಿತ್ತು. ಇದಕ್ಕಾಗಿ ಒಂದು ಉಪಾಯವನ್ನು ಹುಡುಕಿದರು, ಹತ್ತಿರ ಹನ್ನೆ ರಡೇ ಗುಂಡುಗಳು ಇದ್ದವಷ್ಟೆ, ಅವುಗಳನ್ನು ಹನ್ನೆರಡು ಸಾರಿ ಹಾರಿಸಿ ಆ ಕಾಡಿನಲ್ಲಿದ್ದ ಕೆಲವು ಸಾರಂಗಗಳನ್ನು ಕೊಂದರು. ಉದ್ದವಾದ ಕೊಂಬುಳ್ಳ ಈ ಮೃಗವು ಆ ದ್ವೀಪದಲ್ಲಿ ಬೇಕಾದಷ್ಟು ಸಿಕ್ಕುತಿದ್ದವು. ಇವುಗಳನ್ನು ಚಕ್ರವಿಲ್ಲದ ಗಾಡಿಗೆ ಕಟ್ಟ ಮಂಜಿನ ಗಡ್ಡೆ ಯ ಮೇಲೆ ಆ ಉತ್ತರವಲಯದವರು ಸವಾರಿಮಾಡುವುದುಂಟು. ಇವುಗಳನ್ನು ಕೊಂದು ಮಾಂಸವನ್ನು ತೆಗೆದು ಇರಿಸಿಕೊಂಡರು, ಅದರ ಚಕ್ಕಳದಿಂದ ಗುಡಿಸಲಿನಲ್ಲಿದ್ದ ಸಂದುಗಳನ್ನು ಮುಚ್ಚಿದರು. ತನು ವಿಶೇಷವಾಗಿ ಇದ್ದ ಕಾರಣ ಮಾಂಸ ಸ್ವಲ್ಪವೂ ಕೆಡಲಿಲ್ಲ, ಕೆಲವು ದಿವಸಗಳವರೆಗೂ ಆಹಾರಕ್ಕೆ ಅದು ಅನುಕೂಲಿಸಿತು.