ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೧೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܦܘܘ ಸುಮತಿ ಮದನಕುಮಾರರ ಚರಿತ್ರ [ಅಧ್ಯಾಯ ಇದ್ದರೆ, ಆ ತಪ್ಪು ಅವನದೇ ಹೊರತು ಬೇರೆ ಅಲ್ಲ, ದೊರೆ ಮಕ್ಕಳು, ದೊರೆ ಮಕ್ಕಳು, ಎಂದು ನೀನು ಆಗಾಗ್ಗೆ ಹೇಳುತೀಯಷ್ಟೆ. ಇಂಥಾ ದೊರೆ ಮಕ್ಕಳು ಓದಿ ಬುದ್ದಿವಂತರಾಗುವುದಕ್ಕೆ ಅವರಿಗೆ ಉಪಪತ್ತಿ ಬಹಳವಾಗಿದೆ. ಯಾಕೆಂದರೆ, ಅವರು ಹೊಟ್ಟೆ ಗೋಸ್ಕರ ಕಷ್ಟ ಪಟ್ಟು ಸಂಪಾದನೆ ಮಾಡಬೇಕಾದ ಪ್ರಕೃತವಿಲ್ಲ. ದೊರೆ ಮಕ್ಕಳು ಆ ಕಾಲ ನನ್ನೆಲ್ಲಾ ಓದುವುದರಲ್ಲಿ ಕಳೆದು ಬುದ್ಧಿವಂತರಾದರೆ, ಲೋಕಕ್ಕೆ ಉಪಕಾರವಾಗುವುದು, ಇದನ್ನು ಬಿಟ್ಟು ಬೇಕು ಬೇಕಾದ ಬಟ್ಟೆ ಯನ್ನು ಧರಿಸಿ ಬೇಕಾದ ಒಡವೆಯನ್ನು ಇಟ್ಟು ದೊರೆ ಮಕ್ಕಳು ಮೆರೆಯುವುದ ರಿಂದ ಯಾರಿಗೆ ಯಾವ ಉಪಕಾರವಾದಹಾಗೆ ಆಯಿತು ? ಇಂಥಾ ಡಂಭವನ್ನು ಮಾಡುವುದಕ್ಕೆ ದೊರೆ ಮಕ್ಕಳೇ ಆಗಬೇಕೆ ? ಹಣಗಾರರೆ ಲ್ಲರೂ ಈ ಮೆರತವನ್ನು ಮೆರೆಯಬಹದು, ಇದು ಹಾಗಿರಲಿ, ಕಥೆಯನ್ನು ಓದು ಎಂದನು, ಆಗ ಮದನನು ಕಥೆಯನ್ನು ಓದಿದನು ಒಳ್ಳೆ ಹುಡುಗನ ಕಥೆ ಒಂದು ಹಳ್ಳಿಯಲ್ಲಿ ಒಬ್ಬ ಹುಡುಗನಿದ್ದನು. ನೆರೆ ಊರಿನಲ್ಲಿ ರುವ ತನ್ನ ಚಿಕ್ಕಮ್ಮನನ್ನು ನೋಡಬೇಕೆಂದು ಇವ ಹೊರಟನು. ಇವನ ತಾಯಿ ಮಗನಿಗೆ ಬುತ್ತಿಯನ್ನು ಕಟ್ಟಿ ಕೊಟ್ಟಳು. ಅದನ್ನು ತೆಗೆದು ಕೊಂಡು, ಈ ಹುಡುಗನು ದಾರಿಯಲ್ಲಿ ಹೋಗುತಿರುವಾಗ ಹೊಟ್ಟೆ ಗಿ ಲ್ಲದೆ ಒಣಗಿಕೊಂಡಿದ್ದ ಒಂದು ನಾಯಿಯು ಬಾಲವನ್ನು ಅಳ್ಳಾಡಿಸುತಾ ಇವನ ಮುಂದೆ ಬಂತು, ಈ ಹುಡುಗನು ಅದನ್ನು ನೋಡಿ, ಕನಿಕರ ದಿಂದ ತನ್ನ ಬುತ್ತಿಯಲ್ಲಿದ್ದ ಅನ್ನ ವನ್ನು ಸ್ವಲ್ಪ ತೆಗೆದು ಅದಕ್ಕೆ ಹಾಕಿ ದನು. ಆ ನಾಯಿಯು ಅನ್ನ ವನ್ನು ತಿಂದು ಸಂತೋಷದಿಂದ ಇವನ ಹಿಂದೆಯೇ ಹೊರಟಿತು. ಮುಂದಕ್ಕೆ ಹೋಗಲು ಒಂದು ಕುದುರೆಗೆ ಕಾಲು ಉಳುಕಿ ಹುಲ್ಲು ನೀರು ಇಲ್ಲದೆ ಅದು ಬಿದ್ದಿತ್ತು, ಈ ಬಾಲಕನು ಅದನ್ನು ಕಂಡು, ಅದರ ಮೈ ತಡವರಿಸಿ, ಕಾಲನ್ನು ನೀವಿ, ಕುದುರೆಯನ್ನು ಮೇಲಕ್ಕೆ ಎಬ್ಬಿಸಿ. ನಿಲ್ಲಿಸಿ, ಸ್ವಲ್ಪ ಹುಲ್ಲನ್ನು ತಂದು ಹಾಕಿ, ನೀರನ್ನು ಕುಡಿಸಿದನು.