ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

iv ಹುಡುಗರ ಮನಸ್ಸಿಗೆ ಅಂಟಿದರೆ ಬಾಲಕರ ಜನ್ಮವಿರುವವರೆಗೂ, ಅದೇ ಕ್ರಮವನ್ನೇ ಬುದ್ದಿ ಅನುಸರಿಸುವುದು. ವಿದ್ಯಾಭ್ಯಾಸ ಮಾಡುವ ರೀತಿಯನ್ನು ವಿಧಿವಾಕ್ಕಾಗಿ ಹೇಳದೆ, ಒಳ್ಳಮಾರ್ಗವನ್ನು ಹುಡುಗರು ಗ್ರಹಿಸುವಹಾಗೆ ಕಥಾರೂಪವಾಗಿ ದೊಡ್ಡ ವಿಷಯಗಳನ್ನು ತಿಳಿಸುವುದಕ್ಕೆ ನಮ್ಮ ಹಿತೋಪದೇಶ' ಅಥವಾ • ಪಂಚತಂತ್ರ 'ವನ್ನು ಬಿಟ್ಟರೆ ಬೇರೇ ಯಾವ ಗ್ರಂಥವೂ ನಮ್ಮಲ್ಲಿಲ್ಲ. ಆದರೆ : ಪಂಚತಂತ್ರ'ದಲ್ಲಿ ಮಾತನಾಡಲು ಶಕ್ತಿ ಇಲ್ಲದ ಜಂತುಗಳು ಮಾತನಾಡುವಹಾಗೆ ತೋರಿಸಿರುವ ಕಾರಣ, ಲೋಕದಲ್ಲಿಲ್ಲದ ಸುಳ್ಳನ್ನು ಹೇಳುವುದರ ಮೂಲಕ ನಿಶ್ಚಯವನ್ನು ಬೋಧಿಸಿದಂತಾಗುವುದು. ಇದು ಆಧುನಿಕರ ಮತವಲ್ಲ. ಈ ದೋಷವಿಲ್ಲದೆ ಇಂಗ್ಲಿಷಿನಲ್ಲಿ ಉದ್ದಾ ಮವಾಗಿ ರಚಿಸಲ್ಪಟ್ಟಿರುವ ಒಂದು ಗ್ರಂಥವನ್ನು ಮಾದರಿಯಾಗಿ ಇಟ್ಟು ಕೊಂಡು ಈ ಪುಸ್ತಕವನ್ನು ನಾನು ಬರೆದೆನು. ಈ ಪುಸ್ತಕವನ್ನು ಹೆಂಣು ಗಂಡು ಆದಿಯಾಗಿ ಆಬಾಲವೃದ್ದರೂ ಅವರ ಜನ್ಮದಲ್ಲಿ ಒಂದು ಸಾರಿಯಾದರೂ ಓದಿರಬೇಕೆಂದು ನಾನು ಹೇಳುತೇನೆ, ಹೀಗೆ ಹೇಳುವ ನನ್ನ ಮಾತು ಆತ್ಮಸ್ತುತಿ ಎಂದು ಭಾವಿಸುವವರು ತಮ್ಮ ಅಭಿಪ್ರಾಯ ವನ್ನು ಒಳಹೊಕ್ಕು ಸ್ವಲ್ಪ ದೀರ್ಘವಾಗಿ ಯೋಚಿಸಿದರೆ, ನಾನು ಮಾದರಿಯಾಗಿ ಇಟ್ಟು ಕೊಂಡ ಗ್ರಂಥವನ್ನು ಬರೆದ ಪುಣ್ಯಾತ್ಮನ ಸ್ತೋತ್ರವೇ ಸರಿ ಎಂದು ತೋರದೇ ಇರಲಾರದು, ಬೆಂಗಳೂರು ಎಂ. ಎಸ್. ಪುಟ್ಟಣ್ಣ ವಾಚಕರ ಪ್ರಯೋಜನಾರ್ಥವಾಗಿ ಮೂರನೇಸಾರಿ ಛಾಪಿಸಿದೆ. ಬೆಂಗಳೂರು ! ) ದುಂದುಭಿ ಸ೦ಗಿ ಜೋಷ ಬಗ್ಗೆ | ಎಂ. ಎಸ್. ಪುಟ್ಟಣ್ಣ ೧೦ ಸೋಮವಾರ )