ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೪೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ. - ಸುಮತಿ-ನಿಮ್ಮ ಮಾತು ದಿಟ, ನಾಯಿಗಳಲ್ಲಿಯೂ ಈ ಸ್ವಭಾವ ವಿದೆ, ಒಂದು ನಾಯಿಯು ಮತ್ತೊಂದು ಹೊಸ ನಾಯಿಯನ್ನು ನೋಡಿದರೆ ಎರಡೂ ಪರಸ್ಪರ ಹೆದರಿಕೊಂಡಿವೆಯೋ, ಎನ್ನು ವಹಾಗೆ ಬಹಳ ಜಾಗರೂಕತೆಯಿಂದ ಇರುವವು. ಆದರೆ ಒಂದು ಓಡುವುದಕ್ಕೆ ಮೊದಲುಮಾಡಿದರೆ ಇನ್ನೊ೦ದು ಬೊಗಳುತಾ ಅದನ್ನು ಆಗ ಹರಿಸಿ ಕೊಂಡು ಹೋಗುವುದು. - ಜೋಯಿಸ-ಈ ಸ್ವಭಾವ ನಾಯಿಗಳಲ್ಲಿ ಮಾತ್ರವೇ ಇಲ್ಲ. ಇತರ ಜಂತುಗಳಲ್ಲಿಯೂ ಇದೆ. ಆಯುಧವಿಲ್ಲದೆ ಕಾಡುಜನರು ಹುಲಿ ಕರಡಿಗಳನ್ನು ಬರೀ ಕೂಗು ಕೂಗಿ ಓಡಿಸಿದಾರೆ. ಎಂಥಾ ಮೃಗ ವಾಗಲಿ ತಯಾರುಮಾಡಿಕೊಳ್ಳಬೇಕು, ಕಾಡಿನಲ್ಲಿ ಕುದುರೇ ಮರಿಗಳು ಓಡಿಯಾಡುತಿರುವುದನ್ನು ನೋಡಿಲ್ಲವೆ ? ಇವುಗಳನ್ನು ಹಿಡಿದು ಮೇಲೆ ಹತ್ತಿಕೊಂಡು ಸವಾರಿ ಮಾಡುವುದು ಸುಲಭವೆ ? ಮದನ-ಸುಲಭವಲ್ಲ, ಅದರ ಮೇಲೆ ಹತ್ತಿಕೊಳ್ಳುವುದಕ್ಕೆ ಹೋದರೆ ಕೆಳಕ್ಕೆ ಕೆಡವಿಬಿಡುತ್ತೆ. ಜೋಯಿಸ*ನಿನ್ನ ಕುದುರೆಯ ಮೇಲೆ ನೀನು ಕೂತು ಸವಾರಿ ಮಾಡುವುದಿಲ್ಲವೆ ? ಮದನ-ಅದಕ್ಕೆ ಅಭ್ಯಾಸವಾಗಿದೆ. ಜೋಯಿಸ-ಅದಕ್ಕೆ ಪೂರ್ವದಲ್ಲಿ ಅಭ್ಯಾಸವಾಗಿರಲಿಲ್ಲ ಮೊದಲು ಕಾಡಿನಲ್ಲಿ ಪೋಲಿ ತಿರುಗುತಿತ್ತಷ್ಟೆ ? ಅಂಥಾ ಕುದುರೆ ನಿನ್ನ ನ್ನು ಬೆನ್ನ ಮೇಲೆ ಕೂರಿಸಿಕೊಂಡು ತಿರುಗಾಡುವ ಬಗೆ ಹೇಗೆ ? ಮದನ-ಅದಕ್ಕೆ ನಾವು ತಿ೦ಡಿ ಹಾಕುತ್ತೇವೆ, ಜೋಯಿಸ-ಅಷ್ಟೇ ಅಲ್ಲ, ತಾಯಿ ಸಂಗಡ ಅದು ಲಾಯಕ್ಕೆ ಬರುವಂತೆ ಅಭ್ಯಾಸಮಾಡುತೇವೆ ; ಆ ಮೇಲೆ ಅದಕ್ಕೆ ಮಾಲೀಸು ಮಾಡುತೇವೆ, ಅದು ಕ್ರಮೇಣ ಸಾಧುವಾಗುವುದು, ಅದನ್ನು ಗೂಟಕ್ಕೆ ಕಟ್ಟು ತೇವೆ, ಆಮೇಲೆ ಸಬರಾ ಹಾಕುತ್ತೇವೆ. ಕಡಿವಾಣ ಹಾಕುತ್ತೇವೆ. ಹೀಗೆ ಅವುಗಳನ್ನು ಕ್ರಮೇಣ ತಯಾರು ಮಾಡುತ್ತೇವೆ. ಮನುಷ್ಯ. ಹೇಳಿ ಹೇಳಿದ ಹಾಗೆ ಈ ಕರಡಿ ಕೇಳಬೇಕಾದರೆ ಅದಕ್ಕೆ ತಾನೆ ಏಟು