ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೯೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩] ಸುಮತಿ ಮದನಕುಮಾರರ ಚರಿತ್ರೆ ೧೦೧ ಮೊಳೆ ಹಾಕಿದೆಯೋ ಅಷ್ಟರಲ್ಲಿ ಒಂದನೇ ಮೊಳೆಗೆ ಒಂದು ಕಾಸನ್ನೂ, ಎರಡನೇ ಮೊಳೆಗೆ ಎರಡು ಕಾಸನ್ನೂ, ಮೂರನೇ ಮೊಳೆಗೆ ನಾಲ್ಕು ಕಾಸನ್ನೂ, ನಾಲ್ಕನೇ ಮೊಳೆಗೆ ಎಂಟು ಕಾಸನ್ನೂ, ಐದನೇ ಮೊಳೆಗೆ ಹದಿನಾರು ಕಾಸನ್ನೂ ಈ ಪ್ರಕಾರ ದ್ವಿಗುಣೋತ್ತರ ವೃದ್ಧಿಯಾಗಿ ನನಗೆ ಅಪ್ಪಣೆಯಾಗಲಿ, ನಾನು ಕುದುರೆಯನ್ನು ತಮಗೆ ಒಪ್ಪಿಸುತ್ತೇನೆ, ಎಂದು ಹೇಳಿದನು. ಇದಕ್ಕೆ ದೊರೆಯು-ಈ ವರ್ತಕ ಏನೂ ತಿಳಿದವನಲ್ಲ, ಮೊಳೆಗೆ ಒಂದು ಕಾಸಿನ ಪ್ರಕಾರ ಕೇಳುತ್ತಾನೆ. ಮೊಳೆಯ ಲೆಕ್ಕ ಎಷ್ಟು ತಾನೆ ಆದೀತು ? ಇದರಿಂದ ನಮಗೆ ಆದಾಯವಾಗುವುದೂ ಕುದುರೆಯವನಿಗೆ ನಷ್ಟವಾಗುವುದೂ ಖಂಡಿತ, ಎಂದು ಯೋಚಿಸಿ, ಕುದುರೇ ಸಾಹು. ಕಾರನ ಮೊಳೆ ಲೆಕ್ಕದ ಬೆಲೆಗೆ ಒಪ್ಪಿಕೊಂಡನು, ಆ ಹಣವನ್ನು ಲೆಕ್ಕಾ ಮಾಡಿ ಕೊಡಬೇಕಾಯಿತು. ಈ ಮಧ್ಯೆ ಅರಬ್ಬರವನು-ಮಹಾ ಸ್ವಾಮಿ, ಈ ಲೆಕ್ಕದ ಪ್ರಕಾರ ತಾವು ನನಗೆ ಕೊಡಲೇಬೇಕೆಂದು ಹೇಳುವು ದಿಲ್ಲ. ನಾನು ಮೊದಲು ಕೇಳಿದ ಸಾವಿರ ವರಹ ಅ ಪ್ಪಣೆಯಾದರೆ ಸಾಕಾ ಗಿದೆ, ಎಂದನು, ಆಗ ಅರಸು-ಏನಯ್ಯ, ಮಾತು ಒಂದೋ, ಎರಡೋ? ಕಡಮೆ ಕ್ರಯಕ್ಕೆ ಕೊಡುತ್ತೇನೆಂದು ಒಪ್ಪಿ, ಈಗ ಮೊದಲು ಕೇಳಿದ ಸಾವಿರ ವರಹವನ್ನೇ ಕೊಡೆಂದು ಹೇಳುತೀಯೆ. ಇದು ನ್ಯಾಯವಲ್ಲ ಎಂದನು. ತಾವು ನನಗೆ ಈ ಎರಡರಲ್ಲಿ ಯಾವ ಕ್ರಯವನ್ನು ಕೊಡಿಸಿ ದಾದ್ರೂ ಸರಿಯೆ, ಎಂದು ಕುದುರೆಸಾಹುಕಾರ ಹೇಳಲಾಗಿ, ರಾಜನು ರಾಯಸದವರನ್ನು ಕರೆಯಿಸಿ, ಮೊಳೇಲೆಕ್ಕದ ಪ್ರಕಾರ ಕೊಡಬೇಕಾದ ಹಣವನ್ನು ಲೆಕ್ಕಾ ಮಾಡುವಂತೆ ಹೇಳಿದನು. ರಾಯಸದವರು ಲೆಕ್ಕಾ ಚಾರ ಮಾಡಿ-ಕುದುರೇ ನಾಲ್ಕು ಕಾಲಿನಲ್ಲಿಯೂ ಇರುವ ಒಟ್ಟು ೨೪ ಮೊಳೆಗೆ ೩,೦೦೦ ವರಹದ ವರೆಗೆ ಆಗುತ್ತೆ ; ಒಂದು ಕುದುರೆಗೆ. ಇಷ್ಟೊಂದು ಹಣವನ್ನು ಕೊಟ್ಟ ವರುಂಟೆ ? ಎಂದು ಹೇಳಿದರು, ಆಗ ದೊರೆಯು ಗಾಬರಿಯಾಗಿ, ಲೆಕ್ಕಾಚಾರ ತನಗೆ ತಿಳಿಯದೇ ಇದ್ದದಕ್ಕಾಗಿ ನಾಚಿಕೊಂಡು, ಅರಬ್ಬರವನಿಗೆ ಅವ ಮೊದಲು ಕೇಳಿದಂತೆ ೧,೦೦೦ ವರಹವನ್ನು ಕೊಟ್ಟು ಕುದುರೆಯನ್ನು ಕೊಂಡುಕೊಂಡನು.,