ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೪೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೬ ಸುಮತಿ ಮದನಕುಮಾರರ ಚರಿತ್ರೆ [ಅಧಾಯ ದಾರಿಯಲ್ಲಿ ಮುಗ್ಗುರಿಸಿ ಬಿದ್ದನು. ಭೂಮಿ ಹಳ್ಳದಿಣ್ಣೆ ಯಾಗಿದ್ದದ ರಿಂದಲೋ ಅಥವಾ ಹಿಂದಟ್ಟಿ ಕೊಂಡು ಬರುತಿದ್ದ ಗೂಳಿಗೆ ಭಯ ಪಟ್ಟದ ರಿಂದಲೋ ಅ೦ತು ಹೇಗೋ ಕೆಳಕ್ಕೆ ಬಿದ್ದ ಬಿರಸಿಗೆ ಕೆನ್ನೆ ಮೈಯೆಲ್ಲಾ ತರೆದುಹೋಯಿತು. ಎಡದರದ್ದೆ ಉಳುಕಿತು. ಇವನ ಸಮಿಾಪಕ್ಕೆ ಓಡಿಬರುತಿದ್ದ ಗೂಳಿಯ ರಭಸವನ್ನು ಕಂಡು ಅಲ್ಲಿದ್ದ ಜನರೆಲ್ಲಾ -ಅಯ್ಯೋ, ಹುಡುಗ ಹೋದನಲ್ಲಾ ಎಂದು ಕೂಗಿಕೊಳ್ಳುತಿದ್ದರೇ ಹೊರತು ಯಾರೂ ಆ ಗೂಳಿಯನ್ನು ನಿಲ್ಲಿಸುವುದಕ್ಕೆ ಧೈರ್ಯಮಾಡ ಲಿಲ್ಲ. ಮಂಗರಾಜ ಮೊದಲಾದ ವೀರರೆಲ್ಲಾ ಇವನ ಕಡೆ ತಿರುಗಿ ಕೂಡ ನೋಡದೆ ಓಡಿಹೋದರು, ಕೆಳಕ್ಕೆ ಬಿದ್ದಿದ್ದ ಮದನನಿಗೂ ಗೂಳಿಗೂ ಎರಡುಮೊಳ ಬಿಟ್ಟ ತು. ದೊರೆಮಗನ ಪರಿಣಾಮ ಅಲ್ಲಿಗೆ ಆಯಿತೆಂಬ ದಾಗಿ ಅಲ್ಲಿದ್ದ ಜನರೆಲ್ಲಾ ಹೋ ! ಎಂದು ಕೂಗಿದರು. ಅಲ್ಲಿ ಯಾರೋ ಕೊನೆಗೆ ಮೊಳೆ ಪೆಟ್ಟದ್ದ ಬಾರುಕೋಲನ್ನು ಕೆಡವಿಕೊಂಡು ಹೋಗಿ ರಲು, ಆ ಸಮಯಕ್ಕೆ ಸುಮತಿಯು ಅದನ್ನು ತೆಗೆದುಕೊಂಡು ಧೈಯ್ಯದಿಂದ ಓಡಿಹೋಗಿ ಗೂಳಿಯ ಪಕ್ಕೆಗೆ ತಿವಿದನು, ಆ ಗಳಿಗೆಯಲ್ಲಿಯೇ ಆ ಮಹಾವೃಷಭವು ರೋಷದಿಂದ ಸುಮತಿಯ ಕಡೆ ತಿರುಗಿ ಇವನ ಕಾಲಿನ ಸಂದಿಗೆ ಕೊಂಬನ್ನು ಹಾಕುವುದಕ್ಕೆ ಹೊರಟಿತು. ಮದನನಮೇಲೆ ಬಂದ ಮೃತ್ಯು ಸುಮತಿಯ ಕಡೆಗೆ ತಿರುಗಿತು, ಅಲ್ಲಿ ದೂರದೂರವಾಗಿ ನಿಂತು ನೋಡುತಿದ್ದ ಜನರಲ್ಲಿ ಸುಮತಿಯ ಧೈರವನ್ನು ನೋಡಿ ಹುಟ್ಟಿದ ಮೆಚ್ಚಿಕೆಯೂ ಆಶ್ಚರವೂ, ಇಂಥಾ ಹುಡುಗನ ಪ್ರಾಣವನ್ನು ಗೂಳಿ ಅ ಪಹರಿಸುವುದಲ್ಲಾ ಎಂಬ ವ್ಯಸನದಲ್ಲಿ ಕಲಕಿ ಹೋಯಿತು, ಇನ್ನೇನು ಗತಿ ! ಎಂದು ಜನರೆಲ್ಲರೂ ಕೂಗುವದಕ್ಕೆ ಮೊದಲುಮಾಡಿದರು. ಆ ಸಮಯಕ್ಕೆ ಸರಿಯಾಗಿ ಒಬ್ಬ ಮನುಷ್ಯನು ಗುಂಪಿನೊಳಗಿನಿಂದ ಸಿಡಿಲು ಹೊಡೆದ ಹಾಗೆ ಓಡಿಬಂದು ತನ್ನ ಮುಷ್ಟಿ ಯಿಂದ ಗಟ್ಟಿಯಾಗಿ ಗೂಳಿಯ ಮೂಗಿನಮೇಲೆಯೂ ಅದರ ಸಕ್ಕೆ ಯಮೇಲೆಯೂ ಗುದ್ದಿ ದನು. ಅದಕ್ಕೆ ಇನ್ನೂ ರೋಷಹೆಚ್ಚಿ ಈ ಮನುಷ್ಯನ ಮೇಲೆ ತಿರು' ಗಿತು, ಆದರೆ ಈ ಆ ಪದ್ಬಂಧುವು ಗೂಳಿಯ ಕೈಗೆ ಸಿಕ್ಕದಹಾಗೆ ಅದಕ್ಕೆ ವಿಶೇಷವಾಗಿ ಏಟನ್ನು ಕೊಡುತ್ತಾ, ಅದರ ಬಾಲವನ್ನು ಹಿಡಿದು ಎಳೆ