ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೪೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

0 ) ೧೯] ಸುಮತಿ ಮದನಕುಮಾರರ ಚರಿತ್ರೆ ೨೨೭ ಯುತ್ತಾ, ಅದರ ಸಂಗಡ ಸ್ವಲ್ಪ ದೂರ ಓಡುತ್ತಾ, ಅದು ತಿರುಗಿ ಹರಿಸಿ ಕೊಂಡು ಬಂದರೆ ಸೊಟ್ಟ ಸೊಟ್ಟ ನಾಗಿ ಹೋಗುತ್ತಾ, ಹಳ್ಳದೊಳಕ್ಕೆ ದುಮುಕುತ್ತಾ, ತಿಟ್ಟಿನ ಮೇಲಕ್ಕೆ ಕಡಿದಾದ ಸ್ಪಳದಲ್ಲಿ ಹತ್ತುತ್ತಾ, ಸಮಯ ಸಿಕ್ಕಿದಾಗಲೆಲ್ಲಾ ಮೊನಚಾದ ಕಲ್ಲನ್ನು ಹಿಡಿದು ಅದರ ಅಪಾಯಸ್ಟಳಕ್ಕೂ ಸಸ್ಯೆಗೂ ಮೂತಿಯ ಮೇಲೆಯೂ ಮನಸ್ವಿ ಹೊಡೆ ಯುತ್ತಾ ಬಂದನು. ಗೂಳಿಯು ತನ್ನ ಶತ್ರುವನ್ನು ತೀರಿಸಿಕೊಳ್ಳ ಬೇಕೆಂಬ ಆಕ್ರೋಶದಿಂದ .ಅವನ ಹಿಂದೆ ಹಿಂದೆಯೇ ಹೋಗಿ, ಹಳ್ಳ ಗಳಿಗೆ ಬಿದ್ದು, ದಿಣ್ಣೆಗಳ ಮೇಲೆ ಮುಗ್ಗರಿಸಿ, ಮೈಯೆಲ್ಲಾ ತರೆದು ಹೋದ್ದೂ ಅಲ್ಲದೆ, ಅವನ ಕೈಪೆಟ್ಟಿನಿಂದ ಅಸ್ತಾವಸ್ಥೆಯಾಗಿ ಕೆಳಗೆ ಬಿದ್ದು ಬಿಟ್ಟಿತು ; ಮೇಲಕ್ಕೆ ಏಳಲಾರದೆ ಹೋಯಿತು, ಆಗ ಅಲ್ಲಿದ್ದ ಜನ ರೆಲ್ಲಾ ಸೇರಿ ಆ ಗೂಳಿಗೆ ಹಗ್ಗವನ್ನು ಕಟ್ಟಿ, ಎಳೆದುಕೊಂಡು ಹೋದರು. ಹೀಗೆ ಸುಮತಿಯ ಪ್ರಾಣ ಉಳಿಯಿತು. ಆಗ ಈ ಪ್ರಕಾರ ಆ ಗೂಳಿ ಯನ್ನು ಅಡ್ಡಗಟ್ಟಿ ಪ್ರಾಣದಾನವನ್ನು ಮಾಡಿದ ಪುಣ್ಯಾತ್ಮ ಯಾರೆಂದು ಸಾವಕಾಶವಾಗಿ ನೋಡಿಕೊಳ್ಳಲು, ಅವನು ಸ್ವಲ್ಪ ಹೊತ್ತಿಗೆ ಮುಂಚೆ ಸುಮತಿಯಿಂದ ಯಾಚನೆಯನ್ನು ಇಸುಕೊಂಡಿದ್ದ ಸಿದ್ದಿ ಯವನಾಗಿ ದೃನು, ಸುಮತಿಯು ಮದನ ಸುರಕ್ಷಿತನಾಗಿದ್ದಾನೆಂದು ತಿಳಿದು ಬಹು ಸಂತೋಷದಿಂದ ಆ ಸಿದ್ದಿ ಯವನನ್ನು ಕರೆದುಕೊಂಡು ತಮ್ಮ ತಂದೆ ಇದ್ದ ಗ್ರಾಮಕ್ಕೆ ಹೊರಟು ಹೋದನು. ಅತ್ರ ದೊರೆಮಗನಾದ ಮದನನನ್ನು ಹುಡುಕುವುದಕ್ಕೆ ಬಂದಿದ್ದ ಓಲೆಕಾರರು, ಪೆಟ್ಟು ಏನೂ ಇಲ್ಲದಿದ್ದಾಗ್ಯೂ ಭಯದಿಂದ ಕೆಳಕ್ಕೆ ಬಿದ್ದು ಜ್ಞಾನತಪ್ಪಿ ಹೋಗಿದ್ದ ಮದನನನ್ನು ಎತ್ತಿಕೊಂಡು ಅರಮನೆಗೆ ಹೋದರು. - ಮಗನಿಗೆ ಉಂಟಾದ ಆ ಪಾಯದ ಸಂಗತಿಯನ್ನು ರಾಣೀವಾಸದ ಲ್ಲಿದ್ದ ದೊರೇ ಹೆಂಡತಿಯು ಕೇಳಿ ಗಾಬರಿಯಾಗಿ--ಅಯ್ಯೋ, ನನ್ನ ಕಂದನಿಗೆ ಹೀಗಾಯಿತಲ್ಲಾ ! ಇನ್ನೇನುಗತಿ ಎಂದು ಗಟ್ಟಿಯಾಗಿ ಅಳುತ್ತಾ ಅರಮನೆಯಿಂದ ಈಚೆಗೆ ಬಂದಳು. ಕೂಡಲೆ ಸಮಿಾ ಪದ ಲ್ಲಿದ್ದ ರಾಜಸ್ತ್ರೀಯರೆಲ್ಲಾ ವ್ಯಸನ ಪಡುವವರಂತೆ ಕಣ್ಣಿಗೆ ಸೆರಗನ್ನು