ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನ ಕುಮಾರರ ಚರಿತ್ರೆ ೧೩: ಊಟ ತಿಂಡಿ ಮುಂತಾದ್ದೆಲ್ಲಾ ಆದ ಕೂಡಲೆ, ಇತರ ಜಾತಿಯ. ವರ ಮನೆಯಲ್ಲಿ ನೀರ ಕುಡಿಯದ ಬ್ರಾಹ್ಮಣರ ಹುಡುಗನಾದ ಸುಮ ತಿಗೆ ಕಾಸಿದ ಹಾಲನ್ನು ತರಿಸಿ ಅದಕ್ಕೆ ಸಕ್ಕರೆಯನ್ನು ಹಾಕಿ ಅದನ್ನು ಅರಸಿಯು ಕುಡಿಯಪ್ಪಾ ಎಂದು ಸುಮತಿಯ ಕೈಗೆ ಕೊಡಹೋದಳು. ಸುಮತಿ- ತಾಯಿ ನಾನು ಒಲ್ಲೆ ; ನನಗೆ ಬಾಯಾರುವುದಿಲ್ಲ. ಅರಸಿ-ಮಗು, ಅಚ್ಚ ಹಸುವಿನ ಹಾಲು, ನೀರು ಬೆರದಿಲ್ಲ ; ಕೊಡೆಯಾಲದ ಕಲ್ಲುಸಕ್ಕರೆಯನ್ನು ಹುಡಿಮಾಡಿ ಹಾಕಿಸಿದೆ ; ಯಾಲ ಕ್ರಿಯೂ ಕೇಸರಿಯೂ ಬಿದ್ದಿದೆ, ಬಹು ರುಚಿಯಾಗಿರುವುದು, ಕುಡಿಎಂದಳು. ಸುಮತಿ-ಆಗಬಹುದು ತಾಯಿ, ಆದರೆ ನಮ್ಮ ಜೋಯಿಸರು, ಹಸಿವು ಆ ದಾಗ ಅನ್ನಾ ತಿನ್ನ ಬೇಕು, ಬಾಯಾರಿದಾಗ ನೀರ ಕುಡಿಯ ಬೇಕು ಎಂದು ಹೇಳಿಕೊಟ್ಟಿದಾರೆ. ಇದಲ್ಲದೆ ನಮಗೆ ಸುಲಭವಾಗಿ ಸಿಕ್ಕುವುದನ್ನೇ ತಿನ್ನ ಬೇಕು ಕುಡಿಯಬೇಕು, ಎಂದೂ ಹೇಳಿದಾರೆ. ಹಾಗಲ್ಲದಿದ್ದರೆ, ಅಂಥಾ ಒಳ್ಳೇ ಪದಾರ್ಥ ನಮಗೆ ಸಿಕ್ಕದೇ ಹೋದಾಗ ನಮ್ಮ ಮನಸ್ಸಿಗೆ ಏನೋ ಕಿರಿಕಿರಿಯಾಗಿ ಪೇಚಾಡಬೇಕಾಗುವುದಂತೆ. ಹಿಂದಕ್ಕೆ ಋಷಿಗಳೆಲ್ಲಾ ಮಾಡುತಿದ್ದದೂ ಹೀಗೇಯೇ ; ಅವರೆಲ್ಲಾ ಬಹು ಸತ್ಯವಂತರು, ಒಳ್ಳೆಯವರು. - ಈ ಮಾತಿಗೆ ಅರಸು ನಕ್ಕು- ಏನೆಲಾ ಹುಡುಗ, ಖುಷಿಗಳು ಯಾರು, ನೀನು ಬಲ್ಲೆ ಯೋ ? ಎಂದನು. “ ಬುದ್ದಿ, ಬಲ್ಲೆ.” “ ಅವರು ಯಾರು ?” “ ಸ್ವಾಮಿ, ಅರಿಕೆಮಾಡುತೇನೆ. ಒ೦ದಾನೊಂದು ಕಾಲದಲ್ಲಿ ಜನರೆಲ್ಲಾ ಬಹಳ ಕೆಟ್ಟ ವರಾಗಿದ್ದರು ; ಮನಸ್ಸಿಗೆ ಬಂದ ಕೆಲಸವ ನ್ನೆಲ್ಲಾ ಮಾಡುತಿದ್ದರು. ದೊಡ್ಡವರು ಅಹಂಕಾರ ಪಡುತಿದ್ದರು ; ತಿನ್ನು ವುದು, ಮಲಗುವುದು, ಆನಂದವಾಗಿರುವುದು, ಇಷ್ಟು ಹೊರತು ಇನ್ನು ಯಾವ ಕೆಲಸಕ್ಕೂ ಹೋಗುತ್ತಿರಲಿಲ್ಲ. ಬಡವರನ್ನು ಕಂಡರೆ ಲಕ್ಷ್ಯವೇ ಇಲ್ಲ. ಹಸಿದು ಸಾಯುತಿರುವ ಗೋಪಾಳದವರಿಗೆ ಅವರ