ಪುಟ:ಸಮತಿ ಮದನಕುಮಾರರ ಚರಿತ್ರ.djvu/೩೧೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೯೬ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಕಾಡಗೂಳಿಗಳನ್ನು ಹಿಡಿಯುವರು, ಅವರು ಬಲವಾಗಿ ಉದ್ದವಾಗಿ ರುವ, ಒಂದು ಹಗ್ಗದ ಕೊನೆಗೆ ಜೀರುಗುಣಿಕೆ ಹಾಕಿ ಅದನ್ನು ಕೈಲಿ ಹಿಡಿದುಕೊಂಡಿರುವರು, ಇವರನ್ನು ಕಂಡ ಕೂಡಲೆ ರೋಷದಿಂದ ಗೂಳಿಯು ಮೇಲೆ ಬೀಳುವುದಕ್ಕೆ ಬಂದು ನೆಗೆಯುವುದು, ಆಗ. ಕುದುರೆ ಮೇಲೆ ಕೂತಿರುವ ಮನುಷ್ಯನು ತನ್ನ ಕೈಲಿರುವ ಜೀರು ಗುಣಿಕೆಯನ್ನು ಬಹು ಚಮತ್ಕಾರವಾಗಿ ಎಸೆಯುವನು. ಆ ಹಗ್ಗ ಹೋಗಿ ಗೂಳಿಯ ಕಾಲಿಗೆ ಬೀರಿಕೊಳ್ಳುವುದು ಆ ಕ್ಷಣದಲ್ಲಿಯೇ ಕುದುರೆಯು ಗೂಳಿಯ ಸುತ್ತಲೂ ಪ್ರದಕ್ಷಿಣೆಯಾಗಿ ಅತಿ ವೇಗದಿಂದ ಸುತ್ತುವುದು, ಹಾಗೆಯೇ ಹಗ್ಗವು ಗೂಳಿಯ ಕಾಲಿಗೂ ಮೈಗೂ ಚೆನ್ನಾಗಿ ಸುತ್ತಿಕೊಳ್ಳುವುದು. ಆಗ ಅದರ ಯತ್ನ ತಪ್ಪಿ ಹೋಗಿ ಮೇಲಕ್ಕೆ ಏಳಲಾರದೆ ನೆಲಕ್ಕೆ ಬಿದ್ದು ಬಿಡುವುದು; ಈ ಬೇಟೆಗಾರನು ಕುದುರೆಯ ಮೇಲಿನಿಂದ ಇಳಿದು ಕಠಾರಿಯನ್ನು ಹಿಡಿದು ಆ ಗೂಳಿಯ ಕೊಂಬಿನ ಹಿಂಭಾಗದಲ್ಲಿ ತಿವಿದು ಅದನ್ನು ಕೊಲ್ಲುವನು. ಒ೦ದಾನೊಂದು ಸಮಯದಲ್ಲಿ ಒಂದು ವಿಚಿತ್ರ ನಡೆಯಿತು. ಒಂದು ಊರಿನಲ್ಲಿ ಒಬ್ಬ ಅಪರಾಧಿಯನ್ನು ಸೆರೆಮನೆಗೆ ಹಾಕಿದರು. ಅವನು ಆ ಊರ ದೊರೆಯನ್ನು ಕುರಿತು-ನನಗೆ ಮರಣದಂಡನೆ ಯನ್ನು ಕೊಟ್ಟಾ ಗೂ ಸರಿಯೆ, ಸೆರೆಮನೆಗೆ ಮಾತ್ರ ಹಾಕಿಸ ಕೂಡದು. ನಾನು ಯಾವಾಗಲೂ ರಣದಲ್ಲಿ ಕತ್ತಿ ಹಿಡಿದು ಬಾಳಿದ ವೀರಭಟ. ಅಪಮಾನಕ್ಕೆ ಅಂಜುವೆನು, ಮರಣಕ್ಕೆ ಅಂಜುವುದಿಲ್ಲ. ನನ್ನ ಸಾಮರ್ಥ್ಯವನ್ನು ತೋರಿಸುವ ಒಂದು ವಿಚಿತ್ರವನ್ನು ಮಾಡುವುದಕ್ಕಾ ಗಲಿ ಅಥವಾ ಅದರಲ್ಲಿ ನನ್ನ ಪ್ರಾಣವನ್ನು ಒಪ್ಪಿಸುವುದಕ್ಕಾಗಲಿ ಅ ಪ್ಪಣೆಯಾಗಬೇಕು; ನನಗೆ ಇದಕ್ಕಾಗಿ ನನ್ನ ಕುದುರೆಯನ್ನೂ ಉದ್ದ ವಾದ ಹಗ್ಗವನ್ನೂ ಅಪ್ಪಣೆ ಕೊಡಿಸಬೇಕು, ಇನ್ನೇನೂ ಬೇಡ ಎಂದನು. ದೊರೆಯು ಅದೇ ರೀತಿಯಲ್ಲಿ ಅಪ್ಪಣೆ ಮಾಡಿದನು. ಇವನ ಸಾಹಸವನ್ನು ನೋಡುವುದಕ್ಕಾಗಿ ಒಂದು ದಿನ ಎಲ್ಲರೂ ಸೇರಿ ದರು, ಸಾಹಸಗಾರನು ಕುದುರೆಯ ಮೇಲೆ ಏರಿ ಹೊರಡಲು ಎದುರಿಗೆ ಒಂದು ದೊಡ್ಡ ಗೂಳಿಯು ಅಬ್ಬರಿಸಿಕೊಂಡು ಬಂತು. ಈ ಮನುಷ್ಯನು