ಪುಟ:ಸಮತಿ ಮದನಕುಮಾರರ ಚರಿತ್ರ.djvu/೩೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

`೨೦ ಸುಮತಿ ಮದನಕುಮಾರರ ಚರಿತ್ರೆ | [ಅಧ್ಯಾಯ ಅನೇಕವಿಧವಾದ ವಂಚಕರಲ್ಲಿಯೂ ನೆಲೆಗೊಂಡಿವೆ ; ಮನಸ್ಸಾಕ್ಷಿಯಾ ಗಿಯೂ ನನಗೆ ತೋರುವುದೇನೆಂದರೆ : ಈ ಬ್ರಾಹ್ಮಣರ ಹುಡುಗನಲ್ಲಿ. ನಿಜವಾದ ಗಾಂಭೀರ ಕ್ಕೂ ಸದ್ಗುಣಕ್ಕೂ ತಕ್ಕ ಬೀಜವಿದೆ. ನಮ್ಮ ಮಗುವಿನಲ್ಲಿ ಅವನ ಪದವಿಗೆ ಸಾಧಾರಣವಾಗಿರಬೇಕಾದ ಗುಣ' ಗಳೇನೋ ಇರಲೇಬೇಕು; ಗುಣದಲ್ಲಿ ಸುಮತಿಗಿಂತಲೂ ನಮ್ಮ ಹುಡು. ಗನು ಯಾವ ಭಾಗದಲ್ಲಿಯೂ ಕಡಮೆಯಲ್ಲವೆನ್ನಿ ಸಿಕೊಳ್ಳಲಿ, ಎನ್ನು ವುದೇ ನನ್ನ ಕೋರಿಕೆ: ಈ ವಿಷಯವಾಗಿ ನನ್ನಲ್ಲಿ ಅತಿಯಾದ ಕುತೂಹಲ. ವೇನಾದರೂ ತೋರಿಬಂದರೆ, ಅದು ನಮ್ಮ ಮದನನ ಅಭಿವೃದ್ದಿಯಲ್ಲಿ ನನಗಿರುವ ಆಸಕ್ತಿಯಿಂದ ಹುಟ್ಟಿದ್ದೇ ಹೊರತು ಮತ್ತೇನೂ ಅಲ್ಲ. ನಮ್ಮಿಬ್ಬರಿಗೂ ಅವನಲ್ಲಿರುವ ಅತಿಪ್ರೀತಿಯಿಂದ ಇದುವರೆಗೆ ಅತಿಯಾಗಿ ಮುದ್ದು ಮಾಡಿಬಿಟ್ಟೆವು. ಅವನಿಗೆ ಸ್ವಲ್ಪ ಯಾತನೆಯೂ ಸ್ವಲ್ಪ ಅಸಮಾ ಧಾನವೂ ಆಗಕೂಡದೆಂಬ ನಮ್ಮ ಅಭಿಲಾಷೆಯಿಂದ ಅವನ ಸ್ವಭಾ ವವು ಅತಿ ನಾಜೂಕಾಯಿತು, ಸಿಡುಕಲು ವಿಪರೀತವಾಯಿತು. ಅವನ ಮರ್ಜಿಯನ್ನು ಅನುಸರಿಸಿ ನಡೆಯಬೇಕೆಂಬ ನಮ್ಮ ಆಶೆಯಿಂದ, ಅವನು ಮನಸ್ಸು ಬಂದ ಹಾಗೆ ಆಡುವ ಐಲಾಟಗಳಿಗೆ ನಾವು ಸಹಕಾರಿ ಗಳಾಗಬೇಕಾಗಿ ಬಂತು. ಅವನಿಗೆ ಯಾವನಿಂದ ಯಾವ ವಿಧವಾದ ತೊಡಕೂ ನಿರ್ಬಂಧವೂ ಇರಕೂಡದೆಂದು ನಾವು ಮಾಡುವ ವಿಶೇಷ ಪ್ರಯತ್ನ ನೇ ಅವನಿಗೆ ಒಂದಕ್ಷರವೂ ಬಾರದೆ ಓರಗೇ ಹುಡುಗರಿ ಗಿಂತಲೂ ಎಷ್ಟೋ ಕೀಳಾಗಿರುವುದಕ್ಕೆ ಕಾರಣವಾಯಿತು. ಇದೆಲ್ಲ. ನನ್ನೂ ಬಾಯಲ್ಲಿ ಆಡದೆ ನನಗೆ ಮಗುವಿನಲ್ಲಿರುವ ಪ್ರೇಮದಿಂದಲೂ, ಅವನ ಕ್ಷೇಮಕ್ಕೆ ಏನಾದರೂ ನಾನು ಮಾಡಿದರೆ ನೀನು ಅಳುತಾ ಕೂತುಕೊಳ್ಳುತೀಯಲ್ಲಾ ಎಂಬ ಯೋಚನೆಯಿಂದಲೂ ನನಗಿದ್ದ ಅಸಮಾಧಾನವನ್ನು ಮುಚ್ಚಿಕೊಂಡಿದ್ದೆ. ಆದರೆ ಅವನ ಪುರೋವೃದ್ದಿ ಯ ಯೋಚನೇಮೇಲೆ ಯಾವ ಅಭಿಮಾನವೂ ಹಾಯಲಾರದೇ ಹೋಯಿತು. ಇದರಿಂದ ನಾನು ಒಂದು ಖಂಡಿತವಾದ ಸಂಕಲ್ಪವನ್ನು ಮಾಡಬೇಕಾಗಿ ಬಂತು. ಇದಕ್ಕೆ ನೀನು ಅಸಮಾಧಾನ ಪಟ್ಟು ಕೊಳ್ಳಕೂಡದು. ಆ ಸಂಕಲ್ಪವೇನೆಂದರೆ, ಈ ಊರಲ್ಲಿರುವ ರಾಮಜೋಯಿಸರು ತಮ್ಮ