ಪುಟ:ಸಮತಿ ಮದನಕುಮಾರರ ಚರಿತ್ರ.djvu/೬೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ಚರಿತ್ರೆ ಟಿವಿ ನಲ್ಲಿ ದೃಢಮಾಡಿಕೊಂಡು ಸಮಿಾಪದಲ್ಲಿ ಅಕಸ್ಮಾತ್ತಾಗಿ ಸಿಕ್ಕಿದ ಒಂದು ಗುಹೆಯೊಳಕ್ಕೆ ಹೋದನು ಈ ರೀತಿಯಲ್ಲಿ ಕಥೆಯನ್ನು ಓದಿ ನಿಲ್ಲಿಸಲು, ಅದರಲ್ಲಿ ಹೇಳಿರುವ ವ್ಯಸನಕರವಾದ ಸಂಗತಿಗೆ ಸುಮತಿಯ ಮನಸ್ಸು ಕರಗಿ,-ಅಯ್ಯೋ ಪ್ರಾಣಿ, ಅಂಥವ ನನಗೆ ಸಿಕ್ಕಿದರೆ, ನನ್ನ ಎಡೇ ಅನ್ನ ವನ್ನು ಅವನಿಗೆ ಇಕ್ಕಿ ನನ್ನ ಪಂಚೆಯನ್ನು ಅವನಿಗೆ ಕೊಡುತಿದ್ದೆ. ಜೋಯಿಸರೆ, ಆ ಸಕ್ರೂರನೆಂಬ ಒಡೆಯನು ಯಾಕೆ ಅಷ್ಟು ಕಾಠಿಣ್ಯವನ್ನು ತೋರಿಸ ಬೇಕು ? ಆ ಜೀತಗಾರನು ಅಷ್ಟು ಕಷ್ಟ ವನ್ನಾ ದರೂ ಪಟ್ಟು ಕೊಂಡು ಯಾಕೆ ಜೀತವನ್ನು ಮಾಡಬೇಕು ? ಇದಕ್ಕೆ ಕಾರಣ ಅಪ್ಪಣೆಯಾಗಲಿ ಎಂದು ಕೇಳಿದನು. ಮದನಕುಮಾರನು-ಸುಮತಿ, ಲೋಕದಲ್ಲಿ ಕೆಲವರು ಐಶ್ವರ ವಂತರಾಗಿ ಹುಟ್ಟುತ್ತಾರೆ, ಅವರು ಇತರರಿಗೆ ಆಜ್ಞೆ ಮಾಡಲೇಬೇಕು. ಕೆಲವರು ಚಾಕರರಾಗಿ ಹುಟ್ಟು ತಾರೆ. ಅವರು ಹೇಳಿದ ಹಾಗೆ ಕೇಳಿ ಕೊಂಡು ಚಾಕರಿ ಮಾಡುತ್ತಾ ಬಿದ್ದಿರಲೇಬೇಕು, ನಮ್ಮ ಅರಮನೆ ಯಲ್ಲಿ ಅನೇಕ ಚಾಕರರಿದಾರೆ, ಅವರೆಲ್ಲಾ ನಮ್ಮ ಗುಲಾಮರಾಗಿರು ವುದಕ್ಕೆ ಹುಟ್ಟಿದವರೆಂದು ನಮ್ಮ ಅಮ್ಮೆಯ್ಯ ಹೇಳಿದರು. ನಾನು ಅವರನ್ನು ಹೊಡೆಯುತೇನೆ ; ಒದೆಯುತೇನೆ ; ಕೋಪಬಂದಾಗ ಕೈಗೆ ಸಿಕ್ಕಿದ್ದನ್ನು ತೆಗೆದುಕೊಂಡು ಅವರ ಮುಖದ ಮೇಲೆ ಎಸೆಯುತ್ತೇನೆ. ಆದರೂ ಅವರು ಎದುರುಮಾತನಾಡುವುದು ಎಂದರೇನು ? ಹೇಳಿದ ಹಾಗೆ ಕೇಳಿಕೊಂಡು ಸತ್ತ ನಾಯಿಯ ಹಾಗೆ ಸುಮ್ಮನೇ ಬಿದ್ದಿರಬೇಕಾ ದದ್ದೇ ಅವರ ಹಣೇಬರಹ. ಜೋಯಿಸ-ಅಯ್ಯಾ ಮಗು, ಅವರು ಚಾಕರರು ಯಾಕೆ ಆದರು ? ಹೇಳು. ಮದನ-ಯಾಕೆಂದರೆ, ನಮ್ಮ ಅಪ್ಪಾಜಿ ಅವರಿಗೆ ತಿಂಗಳ ಸಂಬಳಗಳನ್ನು ಕೊಡುತ್ತಾರೆ, ಇಲ್ಲ ಪಡಿ ಕೊಡುತಾರೆ. ಜೋಯಿಸ- ಹಾಗಾದರೆ ಸಂಬಳವನ್ನು ತೆಗೆದುಕೊಳ್ಳ ತಕ್ಕವರೆ ಲ್ಲರೂ ಚಾಕರರಷ್ಟೆ ?