ಪುಟ:ಸಮತಿ ಮದನಕುಮಾರರ ಚರಿತ್ರ.djvu/೭೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ಚರಿತ್ರೆ ೫t ಕೆಂಪಗೆ ಮಾಡಿಕೊಂಡು ಗುಡಗುಡನೆ ಬಂತು, ಎಲ್ಲರ ದೃಷ್ಟಿ ಯೂ ಇದರ ಮೇಲೆ ನಾಟಿಹೋಯಿತು, ಆಗಿನ ಆಶ್ಚರ್ಯವನ್ನು ಏನು ಹೇಳೋಣ ! ಅಂಥಾ ಆ ಟೋಪದಿಂದ ಬಂದ ಸಿಂಹವು ಅಪರಾಧಿಯ ಕಾಲಮೇಲೆ ಬಿದ್ದು ಹೊರಳಾಡುತ್ತಾ, ನಯಗರೆಯುತ್ತಾ, ಅತ್ಯಂತ ಪ್ರೀತಿಯನ್ನು ತೋರಿಸಿತು, ಅಲ್ಲಿದ್ದವರೆಲ್ಲಾ ಆಶ್ಚರ್ಯಪಟ್ಟು, ಆ ಮಹಾಮೃಗವು ಹೀಗೆ ಸಾಧುವಾಗುವುದಕ್ಕೆ ಕಾರಣವೇನೆಂದು ಗಟ್ಟಿ ಯಾಗಿ ಕೂಗಿ ಕಯನನ್ನು ಕೇಳಲು, ಅವನು ತನಗೂ ಸಿಂಹಕ್ಕೂ ಪೂರ್ವದಲ್ಲಿ ಆದ ಸ್ನೇಹದ ಕಥೆಯನ್ನು ಹೇಳಿದನು, ಅದನ್ನು ಕೇಳಿ ಅಲ್ಲಿದ್ದವರೆಲ್ಲಾ ಕಾಡುಮೃಗಗಳಿಗೂ ಕೃತಜ್ಞತೆಯೂ ದಯಾರಸವೂ ಉಂಟಲ್ಲಾ ಎಂದು ಬೆರಗಾಗಿ ಕಯನ ಅಪರಾಧವನ್ನು ಕ್ಷಮಿಸುವ ಹಾಗೆ ಮಾಡಿದರು. ೬ ನೆ ಅಧ್ಯಾಯ ಈ ಕಥೆಯನ್ನು ಕೇಳಿ ಮದನ ಕುಮಾರನು-ಈ ಕಥೆ ಬಹು ಚೆನ್ನಾಗಿದೆ, ಸಿಂಹವು ಇಷ್ಟು ಸಾಧುವಾಗಿರುವುದುಂಟೆ ? ಏನಾಶ್ಚರ ! ಸಿಂಹ, ಹುಲಿ ಮೊದಲಾದ ಈ ಕಾಡುಮೃಗಗಳು ಸಿಕ್ಕಿದ್ದನ್ನೆಲ್ಲಾ ಕೊಂದು ತಿನ್ನು ವವು ಎಂದು ಬಲ್ಲೆ. ಇದೇನೋ ಅದ್ಭುತವಾಗಿದೆ, ಎಂದನು. ಆಗ ಉಪಾಧ್ಯಾಯನು-ಹಾಗಲ್ಲ, ಹಸಿವು ಆದಾಗ ಕಾಡು ಮೃಗಗಳು ಸಿಕ್ಕಿದ್ದನ್ನು ಕೊಂದು ತಿನ್ನು ವವು, ಹೊಟ್ಟೆ ತುಂಬಿದ್ದಾಗ ಅವು ಯಾರ ತಂಟೆಗೂ ಹೋಗುವುದಿಲ್ಲ ; ಕಾರಣವಿಲ್ಲದೆ ಯಾವ ಕೇಡನ್ನೂ ಮಾಡುವುದಿಲ್ಲ; ಕೆಲವು ಜನರೂ, ಕೆಲವು ತುಂಟಹುಡುಗರೂ ನಿಷ್ಕಾರಣವಾಗಿ ಪ್ರಾಣಿಗಳನ್ನು ಹಿಂಸಿಸುವರು. ಇಂಥವರಿಗಿಂತಲೂ ಈ ಕಾಡುಮೃಗಗಳೇ ಉತ್ತಮ.