ಪುಟ:ಸಮತಿ ಮದನಕುಮಾರರ ಚರಿತ್ರ.djvu/೭೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೦ ಸುಮತಿ ಮದನಕುಮಾರರ ಚರಿತ್ರೆ [ ಅಧ್ಯಾಯ ಸುಮತಿ-ಹವುದು ಜೋಯಿಸರೆ, ನೀವು ಹೇಳುವುದು ನಿಜ. ನಾನು ಬೀದಿಯಲ್ಲಿ ಹೋಗುತಿರುವಾಗ, ರೋಗದಿಂದ ನರಳುತಾ ಒಂದು ಕಾಲು ಮುರಿದುಹೋಗಿ ಕುಂಟಿಕೊಂಡು ಹೋಗುತಿದ್ದ ಒಂದು ಕತ್ತೆ ಯನ್ನು ಕಂಡೆ, ದೊಡ್ಡದಾದ ಒಂದು ಕಟ್ಟಿಗೆಯನ್ನು ಹಿಡಿದು ಒಬ್ಬ ಹುಡುಗನು ಅದನ್ನು ಹೊಡೆದು ಅಟ್ಟಿ ಕೊಂಡು ಹೋಗುತಿದ್ದ. ಅಯ್ಯೋ, ಹಾಗೆ ಹೊಡೆಯಬಾರದು, ಪ್ರಾಣಿಹಿಂಸೆಯನ್ನು ಮಾಡಬಾರದು, ನಿನಗಿಂತಲೂ ಬಲವಾದವನು ನಿನ್ನ ನ್ನು ಹಿಡಿದು ಹೀಗೆ ಹೊಡೆದರೆ ಆಗ ಹೇಗೆ ಇರುವುದು ? ಎಂದೆ. ಅದು ತಮ್ಮ ಮನೇ ಅಗಸರವನ ಕತ್ತೆ ; ತಾನು ಹೊಡೆಯುತ್ತೇನೆ; ನಾನು ಏನಾದರೂ ತಿರುಗಿ ಮಾತಾಡಿದರೆ ಅದೇ ದೊಣ್ಣೆಯಿಂದ ನನ್ನ ನ್ಯೂ ಗಟ್ಟಿ ಸುತೇನೆಂದು, ಆ ಹುಡುಗ ಗದರಿಸಿದನು. ಆಗ ನಾನು-ಆ ಕತ್ತೆ ನಿಮ್ಮ ಅಗಸನದಾಗಲಿ, ನಿಮ್ಮ ಅಪ್ಪನ ದಾಗಲಿ, ನೀನು ಹೊಡೆಯುವುದಕ್ಕೆ ಕಾರಣವಿಲ್ಲ, ದೇವರು ನಮ್ಮನ್ನು ಹೇಗೆ ನಿರ್ಮಾಣಮಾಡಿದನೊ ಅವುಗಳನ್ನೂ ಹಾಗೆಯೇ ನಿರ್ಮಾಣ ಮಾಡಿದ್ದಾನೆ. ನಮ್ಮ ಹಾಗೆಯೇ ಆ ಪ್ರಾಣಿಗಳಿಗೂ ಯಾತನೆಯಾಗು ವುದು. ಆದ್ದರಿಂದ ಅದನ್ನು ಒಂದು ಏಟು ಹೊಡೆದೀಯೇ, ಜೋಕೆ ; ನನ್ನ ನ್ನು ಹೊಡೆಯುವುದಕ್ಕೆ ಬಂದರೆ, ಹಲ್ಲು ಮುರಿದುಬಿಟ್ಟೇನು, ಎಂದು ಹೇಳಿದೆ, ಆಗ ಅವ ನನ್ನ ನ್ನು ಹೊಡೆಯಬೇಕೆಂದು ಬಂದ ; ನಾನು ಒಂದು ಹೊಗತಿ ಮಾಡಿದೆ. ಆ ಏಟು ಅವನ ಭುಜದಮೇಲೆಯೇ ಬಿತ್ತು. ಪುನಃ ಹೊಡೆಯುವುದಕ್ಕೆ ಬಂದ ; ನಾನು ಅವನ ಸೊಂಟಕ್ಕೆ ನುಗ್ಗಿ ಅವನನ್ನು ಕೆಳಕ್ಕೆ ಎತ್ತಿಹಾಕಿ ಮೇಲೆ ಅಗತುಕೊಂಡೆ. ಆಗ ಅವನು --ನಿನ್ನ ದಮ್ಮಯ ಬಿಡು ಎಂದ. ಜೋಯಿಸ- ದುಷ್ಟರಾಗಿರತಕ್ಕವರೆಲ್ಲರೂ ಹೇಡಿಗಳಾಗಿರುವು ದೇನೋ ಲೋಕದಲ್ಲಿ ರೂಢಿಯಾಗಿದೆ. ಆಮೇಲೆ ನೀನು ಏನಮಾಡಿದೆ ? ಸುಮತಿ-ಆಗ ಅವನಿಗೆ ನಾನು ಹೇಳಿದ್ದು ಏನೆಂದರೆ -ಎಲೋ ಹುಡುಗ, ನಿನ್ನ ನ್ನು ನಾನು ಹೊಡೆಯಬೇಕೆಂದಿರಲಿಲ್ಲ; ಗೆ