ಪುಟ:ಸಮತಿ ಮದನಕುಮಾರರ ಚರಿತ್ರ.djvu/೯೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ಚರಿತ್ರ ಅ4 ನಮಗೆ ಅನ್ನವನ್ನು ಹಾಕಿಸು, ನಡೆದ ಸಂಗತಿಯನ್ನೆಲ್ಲಾ ಆಮೇಲೆ ವಿಸ್ತಾರವಾಗಿ ಹೇಳುತ್ತೇನೆ ಎಂದು ನುಡಿದನು, ಆಗ ಬೀರನು-ತಮ್ಮಯ್ಯ, ಮೊದಲು ನಾನೂ ನೀನೂ ಊರ ಬಿಟ್ಟು ಹೊರಡುವಾಗ ನಿನ್ನ ಸಂಪಾದನೆ ನನಗೆ ಬೇಡ, ನನ್ನ ಸಂಪಾ ದನೆ ನಿನಗೆ ಬೇಡವೆಂದು ಒಡಂಬಡಿಕೆಯನ್ನು ಮಾಡಿಕೊಂಡದ್ದು ನಿನಗೆ ಜ್ಞಾಪಕವಿದೆಯೆ ? ಆ ಪ್ರಕಾರ ಈಗಲೂ ನಾವು ನಡೆದುಕೊಳ್ಳಬೇಕಾ ಗಿದೆ. ಆದಕಾರಣ ನಾನು ಸಂಪಾದನೆ ಮಾಡಿದ ತಿಂಡೀಸಾಮಾನು ಗಳನ್ನು ನಿನಗೆ ನಾನು ಸುಮ್ಮನೇ ಕೊಡುವುದಿಲ್ಲ. ಇದನ್ನು ಖಂಡಿತ ವಾಗಿ ತಿಳಿ, ಎಂದು ಹೇಳಿದನು, ಚಿನ್ನ ದ ಅದಿರುಗಳನ್ನೆ ತಂದು ಹಾಕಿಕೊಂಡಿದ್ದ ಮಾರನು ಲಕ್ಷವಿಲ್ಲದೆ-ಅಣ್ಣ, ಹಾಗೇ ಆಗಲಿ. ನೀನು ನಮಗೆ ಹಾಕುವ ಅನ್ನಕ್ಕೆ ಬದಲಾಗಿ ಚಿನ್ನವನ್ನು ತೆಗೆದುಕೊ; ಇದರಮೇಲೆ ನಿನ್ನ ಹಂಗೇನು ? ಎಂದು ಧಿಕ್ಕರಿಸಿ ಮಾತನಾಡಿ ನಿತ್ಯವೂ ಬೀರಾಬೋಯಿ ಮನೆಯಲ್ಲಿ ಊಟಮಾಡುತ್ತಾ, ಆಯಾ ದಿವಸಕ್ಕೆ ತಕ್ಕ ಷ್ಟು ಚಿನ್ನವನ್ನು ಅವನಿಗೆ ವಾರಡಿಯಾಗಿ ಕೊಡುತಾ ಅಲ್ಲಿಯೇ ೧-೨ ತಿಂಗಳು ಇದ್ದು ಆರಯ್ಕೆ ಮಾಡಿಕೊಂಡು ಚೇತರಿಸಿಕೊಂಡನು. ಇವನು ತಂದಿದ್ದ ಚಿನ್ನ ಎಲ್ಲಾ ಮುಗಿದು ಹೋಯಿತು, ಕೈ ಬರಿದಾಯಿತು. ಅಣ್ಣನು ಹಾಕಿದ ೩ ದಿವಸದ ಅನ್ನ ಇವನ ಮೇಲೆ ಬಾಕಿ ನಿಂತಿತು. ಹಣವನ್ನಾಗಲಿ ಚಿನ್ನ ನನ್ನಾ ಗಲಿ ಕೊಡು, ಕೊಡು, ಎಂದು ಬೀರನು ವರಾತುಮಾಡುತಿದ್ದನು. ಆಗ ತಮ್ಮನು ತನ್ನ ಸ್ಥಿತಿಯನ್ನು ನೋಡಿ ಕೊಂಡು ದುಃಖಪಡುತಾ-ಅಯ್ಯೋ, ನನ್ನ ಹಣೆಯಲ್ಲಿ ಹೀಗೆ ಬರೆ ಯಿತು. ನಾನು ಶ್ರಮಪಟ್ಟು ಸಂಪಾದಿಸಿದ ಚಿನ್ನ ದಲ್ಲಿ ವೀಸತೂಕವೂ ನನಗೆ ಇಲ್ಲದಹಾಗಾಯಿತು. ಒಡಹುಟ್ಟಿದ ಅಣ್ಣ ಸಹಿತವಾಗಿ ನನಗೆ ಶತ್ರುವಾದ, ಮೊದಲೆಲ್ಲಾ ನಯವಾಗಿ ಮಾತನಾಡಿಕೊಂಡಿದ್ದು ಇಂಥಾ ಸಮಯದಲ್ಲಿ ಕೆಲಸ ಕೊಟ್ಟ, ತಾನು ೮ ದಿವಸ ನನಗೆ ಅನ್ನ ಹಾಕಿದ. ನನ್ನ ಕಷ್ಟಾರ್ಜನೆಯನ್ನೆಲ್ಲಾ ಕಿತ್ತು ಕೊಂಡು ನನ್ನನ್ನು ಕಾಡಪಾಲು ಮಾಡಿದ, ಇವ ಎಂಥಾ ಅಣ್ಣ ? ದಾಯಾದಿ ಮತ್ಸರವನ್ನು ಹೀಗೆ ತೀರಿಸಿಕೊಂಡ ಅವನೇ ಬದುಕಲಿ, ನಾನು ದೇಶಾಂತರಗತನಾಗಿ ಹೋಗಿ