ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಿವಳಿಕೆ, ಚಿಕಿತ್ಸೆಯನ್ನು ಜರುಗಿಸುವ ರೀತಿ, ಚಿಕಿತ್ಸಾ ನಂತರದ ಆರೈಕೆ
ಮುಂತಾದವುಗಳ ವಿವರಣೆಯನ್ನೂ ಇಲ್ಲಿ ನೀಡಿದ್ದಾರೆ. ಶಸ್ತ್ರ ಚಿಕಿತ್ಸೆ
ಮಾಡಿಸಿಕೊಳ್ಳುವವರಲ್ಲಿ ಸ್ವಾಭಾವಿಕವಾಗಿ ಉದ್ಭವಿಸುವ ಅನುಮಾನ, ಭಯ ಮತ್ತು
ತಪ್ಪು ಗ್ರಹಿಕೆಗಳನ್ನು ನಿವಾರಿಸುವಲ್ಲಿ ಈ ಪ್ರಸ್ತಾಪಗಳು ಸಹಕಾರಿಯಾಗಬಲ್ಲವು.
ಡಾ| ಚಂದ್ರಪ್ಪಗೌಡರು ನನ್ನ ಸ್ನಾತಕೋತ್ತರ ವಿದ್ಯಾರ್ಥಿಯಾಗಿ, ನಂತರ
ಸಹೋದ್ಯೋಗಿಯಾಗಿಯೂ ಕೆಲಸ ಮಾಡಿದ್ದರು. ಕರ್ನಾಟಕ ಸರ್ಕಾರದ ಆರೋಗ್ಯ
ಇಲಾಖೆಯ ವಿವಿಧ ಹುದ್ದೆಗಳಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ. ಅವರು ಕಾರ್ಯ
ನಿರ್ವಹಿಸಿದೆಡೆಗಳಲ್ಲೆಲ್ಲಾ ದಕ್ಷ ಹಾಗೂ ಜನಪ್ರಿಯ ಶಸ್ತ್ರ ಚಿಕಿತ್ಸಕರಾಗಿದ್ದರೆಂದು
ಕೇಳಿದ್ದೇನೆ. ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವುದಲ್ಲದೆ, ಕಾಯಿಲೆಗಳು ಉದ್ಭವಿಸದಂತೆ
ನೋಡಿಕೊಳ್ಳುವುದು ಮತ್ತು ಉದ್ಭವಿಸಿದಾಗ ಸಕಾಲದಲ್ಲಿ ಚಿಕಿತ್ಸೆ ಮಾಡಿಸಿಕೊಳುವುದರ
ಬಗೆಗೂ ಸರಿಯಾದ ಮಾರ್ಗದರ್ಶನ ಮಾಡುವುದು ವೈದ್ಯನ ಆದ್ಯ ಕರ್ತವ್ಯವೆಂಬ
ತತ್ವದಲ್ಲಿ ನಂಬಿಕೆ ಡಾ| ಗೌಡರಿಗೆ ಇದೆ. ಮೊದಲಿನಿಂದಲೂ ಸಾಹಿತ್ಯದಲ್ಲಿ ಆಸಕ್ತಿ
ಇದ್ದ ಡಾ| ಚಂದ್ರಪ್ಪಗೌಡರು ಈಗಾಗಲೇ ಹಲವಾರು ಜನಪ್ರಿಯ ವೈದ್ಯಕೀಯ
ಲೇಖನ ಮತ್ತು ಪುಸ್ತಕಗಳನ್ನು ಪ್ರಕಟಿಸಿ ಜನರ ಮೆಚ್ಚಿಗೆಗಳಿಸಿದ್ದಾರೆ. ಇದೀಗ
ಅವರು ಬರೆದಿರುವ ಪುಸ್ತಕದಲ್ಲಿ ಹಲವಾರು ಶಸ್ತ್ರ ವೈದ್ಯದ ಕಾಯಿಲೆಗಳ ಬಗೆಗೆ
ಲಭ್ಯವಿರುವ ಪ್ರಚಲಿತ ಜ್ಞಾನ ಮತ್ತು ಅನುಭವಗಳನ್ನು ಯಥಾರ್ಥ ಹಾಗೂ
ವಿಧಿವತ್ತಾಗಿ ವಿವರಿಸಿದ್ದಾರೆ. ವೈಜ್ಞಾನಿಕ ವಿಷಯಗಳನ್ನು ದೇಶೀಯ ಭಾಷೆಗಳಲ್ಲಿ
ಬರೆಯುವುದು ಕಷ್ಟದ ಕೆಲಸವನ್ನುವ ಪ್ರಸ್ತುತ ಸಮಯದಲ್ಲಿ ಡಾ| ಚಂದ್ರಪ್ಪಗೌಡರು
ಶಸ್ತ್ರ ವೈದ್ಯಕೀಯದಂಥ ಜಟಿಲ ವಿಯವನ್ನಾರಿಸಿಕೊಂಡು ಕನ್ನಡದಲ್ಲಿ ಎಲ್ಲರಿಗೂ
ತಿಳಿಯುವ ಹಾಗೆ ಸರಳವಾಗಿ ಬರೆದು, ಕನ್ನಡಭಾಷೆ ಮತ್ತು ಕನ್ನಡರಿಗರಿಗೆ ಉಪಕಾರ
ಮಾಡಿದ್ದಾರೆ. ಇಂತಹ ಪುಸ್ತಕಕ್ಕೆ ಮುನ್ನುಡಿಯ ಈ ನಾಲ್ಕು ಮಾತುಗಳನ್ನು ಬರೆಯುವ
ಅವಕಾಶ ನನಗೆ ದೊರೆತ ಗೌರವವೆಂದೇ ಭಾವಿಸಿ, ಅತ್ಯಂತ ಹರ್ಷದಿಂದ
ಬರೆದಿದ್ದೇನೆ. ಅವರಿಂದ ಇಂತಹ ಲೇಖನ ಮತ್ತು ಪುಸ್ತಕಗಳು ಇನ್ನೂ ಹೆಚ್ಚಾಗಿ
ಬರಲೆಂದು ಆಶಿಸುತ್ತಾ, ಅವರ ಈ ಕಾರ್ಯಕ್ಕೆ ಯಶಸ್ಸು ದೊರೆಯಲೆಂದು ಹಾರೈಸುತ್ತೇನೆ.
ಡಾ| ಎಂ. ಪಿ. ಪೈ