ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಾಯ್ಟರ್ ೮೭


        ವ್ಯಾಪಕವಾಗಿ ಊದಿಕೊಂಡಿದೆಯೇ ಸ್ಥಳೀಯವಾಗಿ ಗೆಡ್ಡೆ ಕಟ್ಟಿಕೊಂಡಿದೆಯೇ
        ಎಂಬುದನ್ನು ವಿವಿಧ ಕೋನಗಳಿಂದ ಸ್ಪರ್ಶಿಸಿ ತಿಳಿದುಕೊಳ್ಳಬಹುದು.ಥೈರಾಯಿಡ್ ನ
        ಊತ ಸರಳ ರೀತಿಯದೇ ಅಥವಾ ವಿಷಮ ರೀತಿಯದೇ ಎಂಬುದನ್ನು 
        ನಿರ್ಧರಿಸುವುದು ಪ್ರಮುಖವಾದ ವಿಷಯ. ರೋಗಿಯ ಮುಖ ಚರ್ಯೆ,
       ತಳಮಳಕಾರಿ ವರ್ತನೆ,ಮುಂಚಾಚಿದ ಬೊಗಸೆಗಣ್ಣುಗಳು,ಏರಿದ ನಾಡಿ ಮಿಡಿತ,
      ಹೃದಯ ಬಡಿತ,ರಕ್ತದೊತ್ತಡ ಮುಂತಾದ ಚಿಹ್ನೆಗಳು ವಿಷಮ ರೀತಿಯ
       ಗಾಯ್ಟರನ್ನು ಗುರುತಿಸಲು ಸಹಕಾರಿಯಾಗುತ್ತವೆ.ಕೆಲವು ತೆರನ ರಕ್ತದ
       ಪರೀಕ್ಷೆಗಳಿಂದ ಥೈರಾಕ್ಸಿನ್ ಮತ್ತು ಅದರ ಕೆಲವು ಹಂತಗಳ ಚೋದನಿಗಳನ್ನು
       ಪತ್ತೇ ಹಚ್ಚುವುದರಿಂದ ಸರಳ ಮತ್ತು ವಿಷಮ ರೀತಿಯ ಗಾಯ್ಟರ್ಗಳನ್ನು
       ಬೇರ್ಪಡಿಸಲು ಸಾಧ್ಯ. ವಿಕಿರಣ ಪಟುತ್ವ ಲಕ್ಷಣವಿರುವ ಅಯೋಡಿನ್ ನನ್ನು
      ಇಂಥ ರೋಗಿಗಳಿಗೆ ನೀಡಿ,ವಿಶೇಷ ತರಹೆಯ ಉಪಕರಣದಿಂದ ಥೈರಾಯಿಡ್
      ಇರುವ ಪ್ರದೇಶವನ್ನು ವೀಕ್ಷಿಸಿದಾಗ(ಸ್ಕ್ಯನಿಂಗ್) ಕಂಡು ಬರುವ ವಿಸಿಷ್ಟ
       ಲಕ್ಷಣಗಳಿಂದ ಸರಳ,ಹಾಗೂ ವಿಷಮ ರೀತಿಯ ಗಾಯ್ಟರುಗಳನ್ನೇ ಅಲ್ಲದೆ,
      ಕ್ಯಾನ್ಸರ್ ಬದಲಾವಣೆಗಳನ್ನು ಸಹ ಪತ್ತೆ ಹಚ್ಚಲು ಸಾದ್ಯವಾಗುತ್ತದೆ.ವಿಶೇಷ
       ಸೌಲಭ್ಯಗಳಿರುವ ಕೆಲವೇ ಆಸ್ಪತ್ರೆಗಳಲ್ಲಿ ಮಾತ್ರ ಇಂಥಾ ಪರೀಕ್ಷೆ ಮಾಡಲು
       ಸಾಧ್ಯ.
     
      ಚಿಕಿತ್ಸಾ ವಿಧಾನಗಳು
      ಸರಳ ರೀತಿಯ ಕೆಲವು ಗಾಯ್ಟರುಗಳು ಬದಲಾದ ಸನ್ನಿವೇಶಗಳಲ್ಲಿ
      ತಮ್ಮಷ್ಟಕ್ಕೇ ಕಿರಿದಾಗಿ ಸಹಜ ಸ್ಥಿತಿಗೆ ಮರುಳಬಹುದಾದ ಬಗೆಗೆ ಮೊದಲೇ
      ಪ್ರಸ್ತಾಪಿಸಿದೆ. ಅವುಗಳಲ್ಲಿ ಕೆಲವು ಗಾತ್ರದಲ್ಲಿ ಹಿರಿದಾದಾಗ ಉಸಿರಾಡಲು ಇಲ್ಲವೆ
      ನುಂಗಲು ಸಹಾ ತೊಂದರೆಯುಂಟು ಮಾಡಬಹುದು. ಈ ತೊಡಕುಗಳ
      ಮುನ್ಸೂಚನೆಗಳು ಪ್ರಕಟವಾಗುವುದರೊಳಗೇ ಅವನ್ನು ಶಸ್ತ್ರಚಿಕಿತ್ಸೆಗೊಳಪಡಿಸ
      ಬೇಕಾಗುತ್ತದೆ. ಮತ್ತೆ ಕೆಲವು ಅಡ್ಡದಿಡ್ಡಿಯಾಗಿ ಬೆಳೆದು ನೋಡಲು
      ಅಸಹ್ಯಕರವೆನಿಸಿದಾಗಲೂ ತೆಗೆದು ಹಾಕಬೇಕಾಗೌತ್ತದೆ. ವಿಷಮ ರೀತಿಯ
      ಬದಲಾವಣೆಯಾಗುವ ಲಕ್ಷಣಗಳು ಪ್ರಕಟವಾದಾಗಲು ಕೆಲವನ್ನು 
     ಶಸ್ತ್ರಚಿಕಿತ್ಸೆಗೊಳಪಡಿಸಬೇಕಾಗುತ್ತದೆ. ಅದೇ ರೀತಿ ಕ್ಯಾನ್ಸರ್ ಬದಲಾವಣೆಯ
     ಅನುಮಾನ ಉಂಟಾದಾಗಲೂ ಶಸ್ತ್ರಚಿಕಿತ್ಸೆ ಅನಿವಾರ್ಯವಾಗಬಹುದು.ಹಿರಿದಾದ
     ಗೆಡ್ಡೆಗಳಲ್ಲಿ ಹಠಾತ್ತಾಗಿ ರಕ್ತಸ್ರಾವವಾಗುವುದುಂಟು.ಆಗ ತುರ್ತು ಶಸ್ತ್ರಚಿಕಿತ್ಸೆ
     ಮಾಡದಿದ್ದರೆ ರೋಗಿ ಉಸಿರು ಕಟ್ಟಿ ಸಾಯಬಹುದು.