ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಾಯ್ಟರ್ ೮೯

ವಲಯಗಳಲ್ಲಿ ಗಾಯ್ಟರ್ ಒಂದು ಗಂಭೀರ ಸಾರ್ವಜನಿಕ ಸಮಸ್ಯೆಯಾಗುತ್ತದೆ.ಮುಂದುವರಿದ ದೇಶಗಳ ಇಂಥಾ ಪ್ರದೇಶಗಳಲ್ಲಿ ಜನರು ಸೇವಿಸುವ ಅಡಿಗೆ ಉಪ್ಪು ಅಥವಾ ಕುಡಿಯುವ ನೀರನ್ನು ಕಡ್ಡಾಯವಾಗಿ ಅಯೋಡಿಕರಿಸಿ ಈ ಸಮಸ್ಯೆಯನ್ನು ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಾಗಿದೆ. ಭಾರತದಲ್ಲೂ ಈ ದಿಸೆಯಲ್ಲಿ ಹಲವಾರು ಯೋಜನೆಗಳು ರೂಪುಗೊಂಡು ಕಾರ್ಯಗತವಾಗುತ್ತಿವೆ.ಅವಿನ್ನೂ ವ್ಯಾಪಕವಾಗಿ ಬಳಕೆಗೆ ಬಂದಿಲ್ಲ. ಇತ್ತೀಚಿಗೆ ವರ್ಷಗಳಲ್ಲಿ ಭೂಮಿಯ ಮೇಲ್ಮೈಯಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗುತ್ತಿದೆ. ಭೂಗರ್ಭದ ಆಳದಿಂದ ಕೊಳವೆ ಬಾವಿಗಳನ್ನು ತೋಡಿ ಜನರಿಗೆ ಕುಡಿಯಲು ನೀರು ಒದಗಿಸಲಾಗುತ್ತಿದೆ. ಅಂಥ ಪ್ರದೇಶಗಳಲ್ಲಿ ಕೆಲ ಕಾಲಾನಂತರ ಅಯೋಡಿನ್ ನ ಕೊರತೆಯುಂಟಾಗಬಹುದು. ಈ ದಿಸೆಯಲ್ಲಿ ಶುರುವಿನಿಂದಲೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಗಾಯ್ಟರ್ ಗಳ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿಲ್ಲದಿಲ್ಲ.

                           * * * *