ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೬ ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು

                 ಸಾಮಾನ್ಯ ಪರಿಸ್ಥಿತಿ ಯನ್ನು  ಗಣನೆಗೆ ತೆಗೆದುಕೊಳ್ಳದೆ ಅನುಮಾನವಿದ್ದವರಿಗೆಲ್ಲಾ
                 ಶಸ್ತ್ರಚಿಕಿತ್ಸೆ ನಡೆಸುತ್ತಿದ್ದರೂ ಕೆಲಸಾರಿ ಅನಾಹುತಗಳಿಗೆಡೆ ಮಾಡಿಕೊಡುತ್ತಿತ್ತು;
                 ಅದರ ಅರಿವು ಉಂಟಾಗಲು ಸ್ವಲ್ಪ ಸಮಯ ಹಿಡಿಯಿತು.ಈ ದಿಸೆಯಲ್ಲಿ
                ಇನ್ನೂ ಉತ್ತಮ ಪರಿಣಾಮಗಳನ್ನುಂಟು ಮಾಡುವುದರಲ್ಲಿ ೧೯೦೦ ರಿಂದ
                 ೧೯೦೫ರ ಅವಧಿಯಲ್ಲಿ ಓಶನರ್ ಮತ್ತು ಷೆರೆನ್ (Ochsner & Sherren)   
                 ಎಂಬ ವೈದ್ಯದ್ವಯರು ನಿರೂಪಿಸಿದ "ಕಾದು ನೋಡುವ ಚಿಕಿತ್ಸಾ ವಿಧಾನ"
                 ತುಂಬಾ ಒಳ್ಳೆಯ ಫಲಿತಾಂಶ ನೀಡಿದವು.ಅವರ ಪ್ರಕಾರ ಅಪೆಂಡಿಸೈಟಿಸ್ ನ
                ಮೊದಲ ಲಷಣಗಳು ಕಾಣಿಸಿದ ೧೨ ರಿಂದ ೪೮ ಗಂಟೆಗಳೊಳಗೆ ರೋಗಿ
                ವೈದ್ಯರಲ್ಲಿಗೆ ಬಂದಿದ್ದು,ಉರಿಯೂತ ಅಪೆಂಡಿಕ್ಸ್ ಗೆ  ಮಾತ್ರ ಸೀಮಿತವಾಗಿದ್ದರೆ    
                ತುರ್ತು ಶಸ್ತ್ರಚಿಕಿತ್ಸೆ ಮಾಡಿ ಅಪೆಂಡಿಕ್ಸ್ ನ್ನು ತೆಗೆದು ಹಾಕಬಹುದು.ಆ ಗಡುವಿನ         
                ನಂತರ ಬಂದ ರೋಗಿಗಳಲ್ಲಿ ಉರಿಯೂತದ  ಪರಿಣಾಮಗಳು ಆಪೆಂಡಿಕ್ಸ್ ನ
                ಸುತ್ತಲ ಪರಿಸರಕ್ಕೂ ಹರಡಿ ಮುದ್ದೆಗಟ್ಟಿದ್ದರೆ ಅವರನ್ನು ತತ್ ಕ್ಷಣದ ಶಸ್ತ್ರ
                ಚಿಕಿತ್ಸೆಗೊಳಪಡಿಸಬಾರದು.ಅವರನ್ನು"ಕಾದು ನೋಡುವ ಚಿಕಿತ್ಸಾ ವಿಧಾನ"ಕ್ಕೊಳ
                ಪಡಿಸಬೇಕೆಂಬುದು ಅವರಿಬ್ಬರ ಅಭಿಪ್ರಾಯವಾಗಿತ್ತು.ಮುಂದೆ ಲವಣಾಂಶಭರಿತ
               ಗ್ಲೂಕೋಸ್ ದ್ರಾವಣಗಳು ಮತ್ತು ಜೀವಿರೋಧಕ ಮದ್ದುಗಳ ಬಳಕೆಯಿಂದ
               ಈ ವಿಧಾನವನ್ನನುಸರಿಸುವುದರಿಂದ ಇನ್ನೂ ಒಳ್ಳೆಯ ಫಲಿತಾಂಶಗಳುಂಟಾದವು.
               ಸುಧಾರಿತ ಅರಿವಳಿಕಾ ವಿಧಾನಗಳ ಬಳಕೆಯಿಂದ ಶಸ್ತ್ರಚಿಕಿತ್ಸಾ ಪರಿಣಾಮಗಳೂ
               ಉತ್ತಮಗೊಂಡವು.ಆಪೆಂಡಿಸೈಟಿಸ್ ನಿಂದಾಗುತ್ತಿದ್ದ ದುಷ್ಪರಿಣಾಮಗಳೇ ಅಲ್ಲದೆ
              ಮರಣದ ಪ್ರಮಾಣಗಳೂ ತೀವ್ರಗತಿಯಿಂದ ಇಳಿಮುಖವಾದವು.೧೯೬೦
               ರಿಂದ ಮರಣದ ಪ್ರಮಾಣ ಶೇ. ೦.೧ ರಿಂದ ೦.೨ರಷ್ಟು ತಳ ಮುಟ್ಟಿ ಅಲ್ಲೇ    
               ಸ್ಥಗಿತವಾಗಿದೆ.ಅಪೆಂಡಿಸೈಟಿಸ್ ನ ದುಷ್ಪರಿಣಾಮಗಳಿಗೆ ಜನರಲ್ಲಿ ಸರಿಯಾದ
              ಅರಿವು ಮೂಡಿ ಕೂಡಲೇ ವೈದ್ಯರ ಸಲಹೆ ಪಡೆಯುವುದು,ವಿರೇಚಕ ಮದ್ದುಗಳನ್ನು
              ನೀಡುವ,ಭಟ್ಟಿ ಕಟ್ಟುವಂತಹ ಅಡನಾಡಿ ಚಿಕಿತ್ಸಾ ವಿಧಾನಗಳನ್ನು
              ಅನುಸರಿಸದಿರುವುದು,ಮತ್ತು ವೈದ್ಯರೂ ಸಹ  ಸಕಾಲದಲ್ಲಿ ಸೂಕ್ತ ಚಿಕಿತ್ಸೆಗಳನ್ನು
              ಜಾರಿಗೊಳಿಸಿದಲ್ಲಿ ಈಗಿರುವ ಕಿಂಚಿತ್ ಸಾವಿನ ಪ್ರಮಾಣವನ್ನೂ ಇಲ್ಲದಂತೆ
              ಮಾಡಲು ಸಾಧ್ಯ.
                     ಪಸ್ತುತ ಸಮಯದಲ್ಲಿ ಕೆಲವು ಅಪರೂಪದ ಸಂಧರ್ಭಗಳನ್ನು ಬಿಟ್ಟರೆ,
              ಶೀಘ್ರ ಗತಿಯ ಅಪೆಂಡಿಸೈಟಿಸ್ ಗೆ ತುರ್ತು  ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತದೆ.ಅಪೆಂಡಿಕ್ಸ್ ನ
              ಪರಿಸರದಲ್ಲಿ ಮುದ್ದೆಗಟ್ಟಿದ ಸಂಧರ್ಭಗಳಲ್ಲಿ,ಲವಣಾಂಶ ಭರಿತ ಗ್ಲೂಕೋಸ್