ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಪೆಂದಡಿಸೈಟಿಸ್

ಎರಡು ಪೊದರುಗಳಾಗಿ ಬೇರ್ಪಡಿಸಿ,ಅವನ್ನು ಜೋಡಿಸಿ ಹೊಲಿಸಯುವ ಅವರ ವಿಧಾನ ಎಲ್ಲಾ ಕಡೆ ಜಾರಿಗೆ ಬರುವ ಸಾಧ್ಯತೆ ಇದೆ.ಪಿತ್ತಕೋಶವನ್ನು ಉರದರ್ಶಕ ದುರ್ಬೀನಿನ ಸಹಾಯದಿಂದ ಹೊರತೆಗೆಯುವಂತೆಯೇ ಅಪೆಂಡಿಕ್ಸನ್ನೂ ಅಂತಹದೇ ವಿಶೇಷ ತರಹೆಯ ಸಲಕರಣೆಯನ್ನು ಬಲ ಕಿಬ್ಬೊಟ್ಟೇಯಲ್ಲಿ ತೂರಿಸಿ ಅಪೆಂಡಿದಸೆಕ್ಟಮಿ ಮಾಡುವ ಕಾರ್ಯ ಈಗ ಜಾರಿಗೆ ಬರುತ್ತೆದೆ.ಹುಬ್ಬಳ್ಳಿಯ ಶಸ್ತ್ರ ವೈದ್ಯರಾದ ಡಾ| ಎಚ್.ಟಿ.ಗಂಗಲ್ ಪ್ರಪಂಚದಲ್ಲೇ ಮೊಟ್ಟ ಮೊದಲ ಸಾರಿ ಈ ಕ್ರಮವನ್ನು ೧‍೯‍೮‍೨‍ ರಲ್ಲಿ ಜರುಗಿಸಿ ದಾಖಲೆ ಸ್ಥಾಪಿಸಿರುವುದು ಕನ್ನಡಿಗರಿಗೆಲ್ಲಾ ಹೆಮ್ಮೆಯ ವಿಷಯ.