ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೭೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೮

                                         ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು
        ಮದ್ದುಗಳನ್ನು ನಿಡಿ,ಜೋಪಸಾನಿಕ ಚಿಕಿತ್ಸಾ ಕ್ರಮಗಳಿಂದ ಪರಿಸ್ಥಿತಿಯನ್ನು
ನಿಭಾಯಿಸಬಹುದು.
        ಕರುಳು-ತಡೆ ಅಥವಾ ಇನ್ನಾವುದೇ ಕಾರಣಗಳಿಂದ ಹೊಟ್ಟೆಯುಬ್ಭರ,
ನೋವು,ವಾಂತಿಗಳಿಂದ ಬಳಲುವವರಿಗೆ ರೋಗಿ ಅಥವಾ ವೈದ್ಯರು ಮಾಡದೇ
ಇರಬೇಕಾದ ಕೆಲವು ಕ್ರಮಗಳಿವೆ.ಅಂಥ ಅನುಮಾನವಿರುವವರಿಗೆ ಬಾಯಿ
ಮೂಲಕ ಯಾವುದೇ ವಿರೇಚಕ ಮದ್ದುಗಳನ್ನು ನೀಡಬಾರದು.ಅಂಥ ಮದ್ದುಗಳ
ರಭಸದ ಕಾರ್ಯಾಚರಣೆಯಿಂದ ಕರುಳು ಒಡೆದು ಅಪಾಯ ಉಂಟಾಗುತ್ತದೆ.

'ಭಟ್ಟಿ ಜಾರಿದ' ಎಂದು ಹೊಟ್ಟೆಯ ಭಿತ್ತಿಯನ್ನು ಎಣ್ಣೆಯಿಂದ ತೀಡುವುದು,

ಉರಿಯುವ ಹಣತೆಯನ್ನಿಟ್ಟು ಲೋಟ ಇತ್ಯಾದಿಗಳನ್ನು ಮಗುಚಿ ಹಾಕಿ ನಿರ್ವಾತ
ಸ್ಥಿತಿಯನ್ನುಂಟುಮಾಡುವ ಅಭ್ಯಾಸ ಇನ್ನೂ ಪ್ರಚಲಿತವಿದೆ.ಇಂಥ ಕ್ರಮಗಳಿಂದ 
ಹೊಟ್ಟೆಯ ಚರ್ಮ ಸುಟ್ಟು ಬೊಬ್ಬೆಗಳಾಗುವುದೇ ಅಲ್ಲದೆ,ಎಷ್ಟೋ ಸಾರಿ
ಕರುಳಿನ ಸುರುಳಿ ಒಡೆದು ತೂತಾಗಿ ಜೀವಕ್ಕೆ ಅಪಾಯವಾದ ನಿದರ್ಶನಗಳಿವೆ.
    ಕರುಳು ತಡೆ -ವಯಸ್ಸಾದಂತೆಲ್ಲಾ ಹೆಚ್ಚಾಗುವ ಒಂದು ಕ್ಲಿಷ್ಟ ಶಸ್ತ್ರ 
ವೈದ್ಯದ ಸಮಸ್ಯೆ,ಅದನ್ನು ಆರಂಭದಲ್ಲೇ ಗುರುತಿಸಿ,ಅಡನಾಡಿ ಚಿಕಿತ್ಸಾ ವಿಧಾನಗಳಿಗೆ
ಮರುಳಾಗದೆ,ಸೂಕ್ತ ಚಿಕಿತ್ಸಾ ಕ್ರಮಗಳನ್ನು ಜಾರಿಗೊಳಿಸುವುದರಿಂದ,ಮುಂದಿನ
ಅನಾಹುತಗಳನ್ನು ಮಿತಿಗೊಳಿಸಬಹುದು.
              
                       ****