ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರುಳು ಕೆರಳಿಕೆ

ಕರುಳು ಅಥವಾ ಇನ್ನಾವುದೇ ಜೀರ್ಣಾಂಗದ ಅವಯವಗಳಲ್ಲಿ ಗುರುತಿಸಬಹುದಾದ ಬದಲಾವಣೆಗಳು ಕಂಡುಬರುವುದಿಲ್ಲ .ಆದರೂ ಇಂತಹವರಲ್ಲಿ ಅತಿಸಾರ ,ಆಮಶಂಕೆ ,ಕರುಳುರಿತ ,ಹಾಲ್ಸಕ್ಕರೆ ಒಗ್ಗದಿಕೆ ,ಕ್ಯಾನ್ಸರ್ ಗಳಲ್ಲಿ ಪ್ರಕಟವಾಗುವ ಚಿಹ್ನೆಗಳು ಕೆಲಸಾರಿ ವ್ಯಕ್ತಪಡುವುದರಿಂದ ಈ ಕಾಯಿಲೆಗಳನ್ನು ಹೊರತು ಪಡಿಸಲು ಕೆಲವು ವಿಶೇಷ ಪರೀಕ್ಷೆಗಳನ್ನು  ಕೈಗೊಳ್ಳಬೇಕಾಗುತದೆ .ರಕ್ತ , ಮಲಗಳ ಪರೀಕ್ಷೆ ,ಬೀರಿಯಂ ಉಣಿಸು ,ಬೀರಿಯಂ ಎನಿಮಾ. ಕರುಳು ದರ್ಶಕ ದುರ್ಬಿನ್ನಿನ ಪರೀಕ್ಷೆ ಮುಂತಾದವುಗಳ್ಳನ್ನು ಜರಗಿಸುವುದು ಅನಿವಾರ್ಯವಾಗಬಹುದು .ಈ ಎಲ್ಲಾ ಪರೀಕ್ಷಾ ವಿಧಾನಗಳಿಂದ ಆ ರೋಗಗಳ ಚಿಹ್ನೆಗಳು ಗೋಚರವಾಗದಿದ್ದಾಗ ಕರುಳು ಕೆರಳಿಕೆಯೇ ಕಾರಣವೆಂದು ನಂಬಬೇಕಾಗುತದೆ .ಕೆಲಸಾರಿ  ಕೋಲಿನ್ ಧಮನಿಕ ಮದ್ದುಗಳನ್ನು ಪ್ರಾಯೋಗಿಕವಾಗಿ ನೀಡಿದಾಗ ಒಳ್ಳೆಯ ಫಲಿತಾoಶ ದೊರೆತರೆ ಈ ವ್ಯಾಧಿಯ ರೋಗ ನಿರ್ಣಯಕ್ಕೆ ಇಂಬುಕೊಟಂತಾಗುತದೆ.ಜೊತೆಗೆ ರೋಗಿಯ ಮಾನಸಿಕ ಪರಿಸ್ಥಿತಿ ಮಾತು ರೋಗದ ಇತಿಹಾಸದ ಬಗೆಗೆ ವಿವರವಾದ ಮಾಹಿತಿ ದೊರಕಿಸಿಕೊಳ್ಳಬೇಕಾಗುತದೆ.

ಚಿಕಿತ್ಸಾ ವಿಧಾನಗಳು

     ಕರುಳು ಕೆರಳಿಕೆಗೆ ಖಚಿತವಾದ ಕಾರಣಗಳು ಇನ್ನೂ ಶ್ರುತಪಟ್ಟಿಲ್ಲವಾದರೂ  ,ಒಗ್ಗದ ಆಹಾರ ವಸ್ತುಗಳು ಚಲಿಸುವಾಗ ಕರುಳಿನಲ್ಲಿ ವಿಲಕ್ಷಣ ಪ್ರತಿಕ್ರಿಯೆಗಳ್ಳನ್ನು ಪ್ರಕಟಿಸುವೆನೆಂಬುದಕ್ಕೆ ಈಗ ಸಾಕಷ್ಟು ಪುರಾವೆಗಳಿವೆ .ಕೆಲವರಲ್ಲಿ ಮಾನಸಿಕ ದುಗುಡ -ದುಮ್ಮಾನಗಳು ಈ ಲಕ್ಷಣಗಳು ಉತ್ಪ್ರೇಕ್ಷೆಯಾಗುವಂತೆ ಪ್ರಚೋದಿಸುತವೆನ್ನಲೂಬಹುದು .ಆದುದರಿಂದ ಯಾವುದೇ ಚಿಕಿತ್ಸಾ ವಿಧಾನವನ್ನು ಅನುಸರಿಸುವುದಾದರೂ ಈ ಎರಡೂ ಕಾರಣಗಳ ಪ್ರಭಾವಗಳನ್ನು ತಟಸ್ಥಗೊಳಿಸುವಂತಿರಬೇಕು .
          ಮಲಬದ್ಧತೆ ಮಾತು ಭೇದಿಯ ಪ್ರಕರಣಗಳನ್ನು ಹತೋಟಿಯಲ್ಲಿಡಲು ಆಹಾರದಲ್ಲಿ ಸಾಕಷ್ಟು ನಾರು ,ತವುಡು ,ಹುರಬುರುಕುಗಳು ಯಥೇಚ್ಛವಾಗಿರುವಂತೆ ನೋಡಿಕೊಳ್ಳಬೇಕು. ಹಸಿರು ತರಕಾರಿ ,ಹಣ್ಣು,ಹಂಪಲುಗಳನ್ನು ಹೆಚ್ಚಾಗಿ ಸೇವಿಸಬೇಕು . ಕರುಳನ್ನು ಕೆರಳಿಸಿ ಉದ್ರೇಕಿಸುವಂಥ ಖಾರ ,ಮಸಾಲೆ,ಕರಿದ ಪದಾರ್ಥಗಳನ್ನು ಆದಷ್ಟು ದೂರ ಮಾಡಬೇಕು.ಒಗ್ಗದಿರುವ ಆಹಾರ  ಪದಾರ್ಥಗಳನ್ನು ಗುರುತಿಸಿ ,ಡೈರಿಯಲ್ಲಿ ಪಟ್ಟಿ  ಮಾಡಿಟ್ಟುಕೊಂಡು ಮುಂದೆ