ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮ ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು


        ೨. ಶಸ್ತ್ರ ಚಿಕಿತ್ಸಾ ಕಾಯ೯ಕ್ರಮಗಲಳ ರೀತಿ ನೀತಿಗಳು
      
   ಇತೀಚಿನ ವಷ್೯ಗಳಲ್ಲಿ ಬಹುಪಾಲು ಶಸ್ತ್ರ ಚಿಕಿತ್ಸೆಗಳು ಸೂಕ್ತ ಅರಿವಳಿಕಾ ಸಾಧನಗಳ ನೆರವಿನಿಂದ ನೋವಿಲ್ಲದೆ ಜರುಗುತ್ತವೆ. ಆದರೂ ಈ ದಿಸೆಯಲ್ಲಿ ನೋವಿನ ಭಯ ಜನರ ಮನಸ್ಸಿನಲ್ಲಿ ದೂರವಾಗಿಲ್ಲ. ಶಸ್ತ್ರ ಚಿಕಿತ್ಸೆಯ ಸೂಚನೆ ಪರೋಕ್ಷವಾಗಿ ತಿಳಿದರೂ ಭಯ, ಆತಂಕಗಳಿಂದ ತತ್ತರಿಸುವವರು ಈಗಲೂ ಇದ್ದಾರೆ. ಜೊತೆಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡವರು ಬದುಕುವುದೇ ಅಪರೂಪ, ಬದುಕಿದರೂ ಅವರು ದೈಹಿಕವಾಗಿ ಮೊದಲಿನ ಆರೋಗ್ಯದ ಸ್ಥಿತಿಗೆ ಮರಳಾಲಾರರೆಂಬ ನಂಬಿಕೆ ಜನರಲ್ಲಿರುವಂತಿದೆ. "ಆಪರೇಷನ್ ಸಫ಼ಲವಾಯಿತು; ಆದರೆ ರೋಗಿ ಬದುಕಲಿಲ್ಲ!"(Operation Successful; Patient did not Survive!) ಎಂಬ ವ್ಯಂಗ್ಯೋಕ್ತಿ ಈಗಲೂ ಕೇಳಿ ಬರುವುದುಂಟು. ಒಂದು ಆ ಕಾಲದಲ್ಲಿ ಶಸ್ತ್ರ ಚಿಕಿತ್ಸೆಗೊಳಗಾದವರನ್ನು ಶುಶ್ರೂಷೆ ಮಾಡುವ ವಾರ್ಡುಗಳಲ್ಲಿ ಕೊಳೆತು ನಾರುವ ಗಾಯಗಳಿಂದ ತುಂಬಿರುತ್ತಿದ್ದ ದುರ್ಗಂಧ ಮತ್ತು ಗಲೀಜು ವಾತಾವರಣದ ನೆನಪು ಈಗಲೂ ಕೆಲವರಲ್ಲುಳಿದುಕೊಂಡಿದ್ದು, ಆದರಿಂದಲೂ ಜಿಗುಪ್ಸೆಪಟ್ಟುಕೊಳ್ಳುತ್ತಾರೆ.
   ಆದರೆ ಈಗ ಕಾಲ ಬದಲಾಗಿದೆ. ನೋವಾಗದಿರಲು ಅರಿವಳಿಕೆ ನೀಡುತ್ತಾರೆ. ಶುಚಿತ್ವ ಮತ್ತು ಆಂಟಿಸೆಪ್ಟಿಕ್ ನಿಯಮಗಳ ವ್ಯಾಪಕ ಆಚರಣೆಯಿಂದ ಗಲೀಜು ಮತ್ತು ದುರ್ಗಂಧದ ವಾತವರಣ ಆಸ್ಪತ್ರೆಗಳಿಂದ ಬಹುಮಟ್ಟಿಗೆ ತೊಲಗಿದೆ. ಗಾಯಗಳಲ್ಲಿ ಅಕಸ್ಮಾತ್ ಕೀವಾದರೂ, ಅದರ ಯಶಸ್ವೀ ಚಿಕಿತ್ಸೆಗೆ ವಿಶಾಲ ಕ್ರಿಯಾಶೀಲತೆಯ ಜೀವಿರೋಧಕ ಮದ್ದುಗಳಿವೆ.
   ಹಲವು ತೆರನ ಹೊಸ ಹೊಸ ಪರೀಕ್ಷಾ ವಿಧಾನ ಮತ್ತು ಯಾಂತ್ರಿಕ ಸಲಕರಣೆಗಳ ಸಹಾಯದಿಂದ ಈಗ ಖಚಿತ ರೋಗ ನಿರ್ಣಯ ಮಾಡಲು ಸಾಧ್ಯವಾಗುತ್ತಿದೆ. ಶಸ್ತ್ರ ಚಿಕಿತ್ಸೆ ಜರಗಿಸುವ ಮೊದಲು ಮತ್ತು ನಂತರ "ತೀವ್ರಾಸಕ್ಥಿಯ ಬೆಂಬಲೋಪಚಾರ ವ್ಯವಸ್ಥೆಗಳು" (Intensive-care Facility) ಕೆಲವು ಆಸ್ಪತ್ರೆಗಳಲ್ಲಿರುತ್ತವೆ. ಬಹಳ ಗಂಭೀರ ಪರಿಸ್ಥಿತಿಯಲ್ಲಿರುವ ರೋಗಿಗಳಿಗೆ ಇಲ್ಲಿ ೨೪ ಗಂಟೆಗಳೂ ಎಡೆಬಿಡದೆ ಮುತುರ್ಜಿಯಿಂದ ವೀಕ್ಷಿಸಿ ಬದಲಾಗವ.