ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೬೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿರಾಪಘಾತಗಳು ಅತ್ಯಂತ ಒಳಗಿನ ಪರೆ-ಮಿದುಳು ಮತ್ತು ಆದರ ಸುರುಳಿಗಳೇ ಅಲ್ಲದೆ ಹಾಲೆಗಳ ಒಳಗೂ ಸರಿ ಹೊಂದಿಕೊಂಡಿರುವ ಪರೆಗೆ "ಪೈಯಾ ಮ್ಯಾಟರ್" ಎಂದು ಹೆಸರು. ಇದು ತೆಳುವಾಗಿದ್ದು ಅಷ್ಟೇನೂ ಗಡಸಾಗಿರುವುದಿಲ್ಲ. ಇವೆರಡೂ ಪರೆಗಳ ನಡುವಿನ ಆಂತಃಸ್ಥ ಜಾಗದಲ್ಲಿ ಜಾಳು ಜಾಳಾಗಿ ಬಲೆಯಂತೆ ಹರಡಿಕೊಂಡಿರುವ ಅತೀ ತೆಳುವಾದ ಪರೆಗೆ "ಅರೆಕ್ನಾಯಿಡ್ ಮ್ಯಾಟರ್" ಎಂದು ಹೆಸರು. ಮಿದುಳನ್ನು ಆವರಿಸಿಕೊಂಡಿರುವ ಡ್ಯೂರಾ ಮತ್ತು ಪೈಯ ಪರೆಗಳ ಕೋಶದಲ್ಲಿರುವ ಮಿದುಳಿನ ದ್ರವದಲ್ಲಿ ಅರೆಕ್ನಾಯಿಡ್ ಪೊರೆಯ ಬಲೆ ತೇಲಿಕೊಂಡಿತ್ತದೆ. ಮಿದುಳು ಮತ್ತು ಡ್ಯೂರಾ ಪರೆಗೆ ಸಂಪರ್ಕ ಕಲ್ಪಿಸುವ ಕಿರಿಯ ರಕ್ತನಾಳಗಳು ಈ ಬಲೆಯ ಮೂಲಕವೇ ಸೇರಿಕೊಂಡಿರುತ್ತದೆ.

   ಮಿದುಳಿನ ದ್ರವ್ಯದಲ್ಲಿ ಅಸಂಖ್ಯಾತ ಅತೀ ಸಣ್ಮ  ನರಕಣಗಳಿವೆ. ಅವುಗಳಿಂದ ಹೊರಡುವ ನರದೆಳೆಗಳು ಮಿದುಳು ಬಳ್ಳಿಯ ಮೂಲಕ ಪ್ರವಹಿಸು ದೇಹದಲ್ಲಿನ ಪ್ರತಿಯೊಂದು ಭಾಗದ ಜೀವಕಣಗಳಿಗೆಲ್ಲಾ ಮಿದುಳಿನೊಡನೆ ಸಂಪರ್ಕ ಕಲ್ಪಿಸಿವೆ. ಮಿದಿಳಿನಿಂದ ಹೊರಡುವ ಚಾಲಕ  ಸಂದೇಶಗಳು ಇವುಗಳ  ಮೂಲಕವೇ ಸಂಚರಿಸಿ ವಿವಿಧ ಅಂಗಗಳಿಗೆ ತಲ್ಪಿ ಅವು ಕಾರ್ಯೊನ್ಮುಖವಾಗುವಂತೆ ಮಾಡುತ್ತದೆ  : ಈ ಅವಯಗಳಿಂದ ಬರುವ ಸಂದೇಶಗಳೂ ಈ ನರದೆಳೆಗಳ ಮುಖಾಂತರವೇ ಸಂಚರಿಸುತ್ತದೆ, ಜೊತೆಗೆ ಜೀವಧಾರವಾದ  ಹೃದಯ ಬಡಿತ, ಉಸಿರಾಟ, ಕೈಕಾಲುಗಳು ಚಲನ ವಲಯ ಇತ್ಯಾದಿಗಳನ್ನು ನಿರ್ವಹಿಸುವ ಕೇಂದ್ರ "ಕಛೇರಿ"(ಬಿಂದುಗಳು)ಗಳೂ ಮಿದುಳಿನ ವಿವಿಧ ಭಾಗಗಳಲ್ಲಿದ್ದು ನಮಗರಿವಿಲ್ಲದಂತೆಯೇ ಅವುಗಳ ಕಾರ್ಯಗಳು ನಿರಂತರವಾಗಿ ನಡೆದುಕೊಂಡು ಹೋಗುವ ಏರ್ಪಾಡಿದೆ.
   ಮಿದುಳಿನ ಎಡೆಬಿಡದೆ ಕಾರ್ಯ ಕಲಾಪಗಳ ನಿರ್ವಹಣೆಗೆ ಬೇಕಾಗುವ ಇಂಧನಗಳಾದ ಆಮ್ಲಜನಕ, ಗ್ಲುಕೋಸ್ ಮುಂತಾದವುಗಳನ್ನೊದಗಿಸಲು ನಾನಾ ಮಾರ್ಗಗಳಿಂದ ಅವುಗಳನ್ನು ಸಾಗಿಸುವ ರಕ್ತದ ಹರಿವು ಸಮ್ರುದ್ದವಾಗಿದೆ. ಯಾವುದೇ ವಿಭಾಗಕ್ಕೆ ಕೇವಲ ೪-೫ ನಿಮಿಷಗಳು ರಕ್ತ ಸರಬರಾಜಿನ ಕೊರತೆಯುಂಟಾದರೆ ಮಿದುಳಿನ ಆ ಭಾಗಕ್ಕೆ ರಕ್ತ ಸರಬರಾಜು ಹಠಾತ್ತಾಗಿ ನಿಂತು ಹೋಗುವುದರಿಂದ, ಅಲ್ಲಿ ಮಿದುಳಿನ ದ್ರವ್ಯ ನಾಶವಾಗುತ್ತದೆ. ಅದು ಮತ್ತೆ ಚೇತರಿಸಿಕೊಳ್ಳವುದಿಲ್ಲ ; ಆ ವಲಯದ ನಿಯಂತ್ರಣದಲ್ಲಿರುವ ಕೈಕಾಲುಗಳಿಗೆ ಮಿದುಳಿನಿಂದ ಸಂದೇಶಗಳು    ಹೋಗುವುದಿಲ್ಲ ; ಆ ಪ್ರದೇಶಗಳಿಂದ ಬರುವ