ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೮೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಟಾನ್ಸಿಲೈಟಿಸ್ ೯೫

     ಬೀಜಗಳನ್ನು ಹೋಲುವ ಈ ಗ್ರಂಥಿಗಳು ಗಂಟಲ ದ್ವಾರಪಾಲಕದರ ಹಾಗೆ

ಕಂಡೂ ಕಾಣದಂತೆ ಹುದುಗಿಕೊಂಡಿವೆ!ಅವು ಬಹುಪಾಲು ಹಾಲ್ರಸ ಕೋಶಿಕೆಗಳ ಗುಂಪುಗಳಿಂದ ತುಂಬಿಕೊಂಡಿವೆ.ದೇಹದ ರೋಗ ನಿರೋಧಕ ವ್ಯವಸ್ದೆಯ ಬೆಳವಣಿಗೆಯಲ್ಲಿ ಅವು ಪ್ರಮುಖ ಪಾತ್ರ ವಹಿಸುತ್ತವೆನ್ನಲಾಗಿದೆ.

     ಇದೇ ತೆರನ ಹಾಲ್ರಸ-ಕೋಶಿಕೆಗಳ ಇನ್ನೊಂದು ಗುಂಪು ಮೂಗು 

ಮತ್ತು ಬಾಯಿಯನ್ನು ಪ್ರತ್ಯೇಕಿಸುವ ಮೆದು-ಅಂಗುಳು-ಪರೆಯ ಮೇಲ್ಭಾಗದಲ್ಲಿ ನೆಲೆಗೊಂಡಿವೆ.ಅವುಗಳಿಗೆ 'ಅಡಿನಾಯಿಡ್ಸ್' ಎಂದು ಹೆಸರು.ನಾಸಿಕ ದ್ವಾರದ ಹಿಂದಿನ ತುದಿಯಲ್ಲಿರುವ ಅಡಿನಾಯಿಡ್ಸ್ ಗಳು ಕಣ್ಣಿಗೆ ಕಾಣಿಸುವುದಿಲ್ಲ.ರೋಗಾಣು ಸೋಂಕಿನಿಂದ ಊದಿಕೊಂಡು ಆಗಾಗ್ಗೆ ಉಸಿರಾಟಕ್ಕೆ ಅಡಚಣೆಯುಂಟುಮಾಡಿ ತಮ್ಮ ಇರುವಿಕೆಯನ್ನು ಸಾದರಪಡಿಸುತ್ತವೆ.

      ಹಿನ್ನಾಲಿಗೆಯ ಮೇಲ್ಭಾಗದಲ್ಲೂ ಕೆಲವು ಹಾಲ್ರಸ-ಕೋಶಿಕೆಗಳ ಸಣ್ಣ

ಸಣ್ಣ ಗುಂಪುಗಳು ಅಲ್ಲಲ್ಲೇ ಹರಡಿ ನೆಲೆಯಾಗಿರುತ್ತವೆ.ಅವು ಸಹಾ ಉರಿಯೂತಕ್ಕೊಳಗಾಗಿ ಗಂಟಲ ನೋವಿಗೆ ಕಾರಣವಾಗುತ್ತವೆ.

  ಟಾನ್ಸಿಲ್ಲೂ ಸೇರಿದಂತೆ ಗಂಟಲಿನ ಒಳಾವರಣದಲ್ಲಿ ನೆಲೆಗೊಂಡಿರುವ

ಹಾಲ್ರಸ-ಕೋಶಿಕೆಗಳ ಗುಂಪುಗಳು ವ್ಯಕ್ತಿಯ ರೋಗನಿರೋಧಕ ಶಕ್ತಿಯ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ರೋಗನಿರೋಧಕ ರಕ್ಷಣಾ ವ್ಯವಸ್ಥೆ ಇನ್ನೂ ಸರಿಯಾಗಿ ಪ್ರವೃರ್ಧಮಾನಕ್ಕೆ ಬಂದಿರುವ ಬಾಲ್ಯಾವಸ್ಥೆಯಲ್ಲಿ ಈ ಗ್ರಂಥಿಗಳು ಪ್ರಮುಖ ಪಾತ್ರ ವಹಿಸುತ್ತವೆನ್ನಲಾಗಿದೆ.ಆಹಾರ ಪಾನೀಯಗಲಳೊಡನೆ ಕಲುಷಿತವಾಗಿ ಸಂಚರಿಸುವ ಬಹಳಷ್ಟು ರೋಗಾಣುಗಳನ್ನು ಅವು ನೇರವಾಗಿ ತಡೆಹಿಡಿಯುವ ದ್ವಾರಪಾಲಕರ ಕೆಲಸ ಮಾಡುತ್ತವೆ.ಆಯಕಟ್ಟಿನ ಹಾಗೂ ಜವಾಬ್ದಾರಿಯ ಸ್ಥಾನದಲ್ಲಿರುವ ಟಾನ್ಸಿಲ್ ಗಳು ಆಗಾಗ್ಗೆ ರೋಗಪೀಡಿತವಾಗುವುದು ಆಶ್ಚರ್ಯವೇನಲ್ಲ.

        ಶೀಘ್ರಗತಿಯ ಟಾನ್ಸಿಲೈಟಿಸ್

ಶೈಶಾವಸ್ಧೆಯಲ್ಲಿ ಗಾತ್ರದಲ್ಲಿ ಬಹಳಷ್ಟು ಚಿಕ್ಕದಾಗಿರುವ ಟಾನ್ಸಿಲ್ ಗ್ರಂಥಿಗಳು ಸಾಮಾನ್ಯವಾಗಿ ಕಣ್ಣಿಗೆ ಗೋಚರಿಸುವುದಿಲ್ಲ.ಮಕ್ಕಳಿಗೆ ೪-೫ ವರ್ಷಗಳಾಗಿ ನರ್ಸರಿ ಹಾಗೂ ಪ್ರೈಮರಿ ಶಾಲೆಗಳಿಗೆ ಹೋಗಲು ಪ್ರಾರಂಭಿಸಿದಾಗ ಮೊಟ್ಟ ಮೊದಲು ಅವು ಉರಿಯೂತಕ್ಕೊಳಗಾದಾಗ ಪೋಷಕರ ಗಮನ ಸೆಳೆಯುವಂತಾಗುತ್ತದೆ.ನಾನಾ ರೋಗಗಳಿರಬಹುದಾದ ಇತರ ಮಕ್ಕಳ ಸಂಪರ್ಕ,