ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೬೭
ಟ್ರಾನ್ಸಿಲೈಟಿಸ್ ಗಂಟಾಲ ನಡುವಿನ ದ್ವಾರದಲಿ ಟಾನ್ಸಿಲ್ ಗಳು ಒಂದನ್ನೋಂದು ಸಂಧಿಸುವಷ್ಟು ದಪ್ಪನಾಗಿ ಊದಿಕೋಂಡಿರುವುದು ಉಂಟು.ಗ್ರಂಥಿಯ ಹಾಲೆಗಳೂ ಪ್ರತ್ಯೇಕವಾಗಿ ಊದಿಕೊಂಡಿರುತ್ತವೆ.ಅವುಗಳ ನಡುವಿನ ಆವಿಗಳಲ್ಲಿ ಕೀವು ಮತ್ತಿತರೆ ಪದಾರ್ಥಗಳು ತುಂಬಿಕೊಂಡಿರುವುದನ್ನು ನೋಡಬಹುದು.ಮುಂದುವರೆದ ಪ್ರಕರಣಗಳಲ್ಲಿ ಕತ್ತಿನ ಹೂರಭಾಗದ ಹಾಲ್ರಸ ಗ್ರಂಥಿಗಳೂ ಊದಿಕೋಡು ವಿಪರೀತ ಬೇನೆಯನ್ನುಂಟು ಮಾಡುತ್ತವೆ. ನೆಗಡಿ,ಶೀತ,ಜ್ವರ ಬರುವುದು ಈ ವಯಸ್ಸಿನ ಮಕ್ಕಳಲ್ಲಿ ತೀರಾ ಸಾಮಾನ್ಯವಾಗಿದ್ದು.ಪೋಷಕರು ಬೇನೆಯುಂಟಾಗಿರುವುದನ್ನು ಮೊದಲು ಶಂಕಿಸಲಾರರು.ಬೇನೆಯಿಂದ ಬಳಲಿ ಹಾಸಿಗೆ ಹಿಡಿಯುವಂಟಾದಾಗಲೆ ಬಹಳಷ್ಟು ಮಂದಿ ಮಕ್ಕಳನ್ನು ವೈದ್ಯರಲ್ಲಿಗೆ ಕರೆತರುತ್ತಾರೆ.ಬಾಲ್ಯದ್ಲ್ಲಿ ಮಕ್ಕಳನ್ನು ಸಾಮಾನ್ಯವಾಗಿ ಕಾಣುವ
ಡಿಪ್ತೀರಿರಿಯ,ವಿನ್ಸೆಂಟ್ ಮತ್ತಿತರೆ ಬೇನೆಗಳಿಂದ ಟ್ರಾನ್ಸಿಲೈಟಿಸ್ ನ್ನು ಬೇರ್ಪಡಿಸಬೇಕಾಗುತ್ತದೆ.ಆ ಬಗೆಗೆ ವಿಶೆಷ ರೀತಿಯ ಪರೀಕ್ಷೆಗಳನ್ನು ನಡೆಸಬೇಕಾಗಬಹುದು. ತೊಡಕುಗಳು
ಗೋಣ್ಕುರು(Quinsy):ಶೀಘ್ರಗತಿಯ ಟಾನ್ಸಿಲೈಟಿಸ್ಗೆ ಸೂಕ್ತ ಸಮಯದಲ್ಲಿ ಸರಿಯಾದ್ ಚಿಕಿತ್ಸೆ ದೊರೆಯದಿದ್ದರೆ,ಇಲ್ಲವೆ ನೀಡಿದ ಮದ್ದುಗಳಿಗೆ ರೋಗಾಣುಗಳು ಮಣಿಯದಿದ್ದಾಗಲೂ ಸಹ,ಟ್ರಾನ್ಸಿಲ್ ಗಳ ಸುತ್ತಮೂತ್ತಲ ಅಂಗಾಂಶಗಳಿಗೂ ಕೀವು ತುಂಬಿಕೊಂಡು ಬಾವು-ಗೋಣ್ಕುರು-ಕೆಲವರಲ್ಲಿ ಉದ್ಭವಿಸುತ್ತದೆ.ಈ ಪರಿಸ್ಥಿತಿಯಲ್ಲಿ ಅತಿಯಾಗಿ ಏರಿದ ಜ್ವರ, ಮತ್ತು ನುಂಗುವಾಗ ತೀವ್ರ ಬೇನೆ ಇಲ್ಲವೆ ನುಂಗುವುದಕ್ಕೆ ಸಾಧ್ಯವಾಗಲಾರದು.ಪರಿಸ್ಥಿತಿಯನ್ನು ಶುರುವಿನ್ನಲ್ಲೇ ಗುರುತಿಸಿವೀಶಾಲ ಕಕ್ರಿಯಾಶಕ್ತಿಯ ಜೀವಿರೋಧಕ ಮದ್ದುಗಳನ್ನು ನೀಡಬೇಕು.ಆದರೂ ಬಹಳಷ್ಟು ಗೊಣ್ಕುರುಗಳನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಕೀವನ್ನು ಹೂರಬಿಟ್ಟಾಗಲೇ ರೋಗಿ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ. ಕಿವಿ ಸೋರುವುದು:ಪದೇ ಪದೇ ಟ್ರಾಂನ್ಸಿಲೈಟಿಸ್ ಬಳಲುವ ಕೆಲವು ಮಕ್ಕಳಲ್ಲಿ ಕಿವಿ ಸೋರುವುದಕ್ಕೆ ನಾಂದಿಯಾಗುತ್ತದೆ.
ಹಾಲ್ರಸ ಗ್ರಂಥಿಗಳ ಊತ: ಕೆಲಸಾರಿ ಶೀಘ್ರಗತಿಯ ಟ್ರಾಂನ್ಸಿಲೈಟಿಸ್ ಉಪಶಮನವಾದಂತೆ ಕಂಡರೂ ಕತ್ತಿನ ಹಾಲ್ರಸ ಗ್ರಂಥಿಗಳು ಬಹಳ ಸಮಯ