ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೨ ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು


ಅರಿವಳಿಕೆ ಮದ್ದನ್ನು ಇಂಜಕ್ಷನ್ ಮಾಡಿದರೆ ಹೆಚ್ಚು ನೋವಾಗದಂತೆ ಶಸ್ತ್ರಚಿಕಿತ್ಸೆ ಮಾಡಬಹುದು. ಟಾನ್ಸಿಲೆಕ್ಟಮಿಗೊಳಗಾಗುವವರನ್ನು ಹಿಂದಿನ ದಿನವೇ ಆಸ್ಪತ್ರೆಗೆ ಸೇರಿಸಿ ಅವರ ಸಾಮಾನ್ಯ ಆರೋಗ್ಯದ ಸ್ಥಿತಿಯನ್ನು ಪರೀಕ್ಷಿಸಲಾಗುತ್ತದೆ. ರಕ್ತಗರಣೆಗಟ್ಟುವ ವ್ಯವಸ್ಥೆಗಳಲ್ಲಾಗಿರಬಹುದಾದ ಬಗೆಗೂ ಶೋಧನೆ ನಡೆಯುತ್ತದೆ. ಅರಿವಳಕಾ ತಜ್ಞರೂ ಹಿಂದಿನ ದಿನವೇ ರೋಗಿಯನ್ನು ಪರೀಕ್ಷಿಸಿ ಬಳಸಬಹುದಾದ ಅರಿವಳಿಕೆಯ ವಿಧಾನದ ಬಗೆಗೂ ನಿಧಾ೯ರ ಮಾಡಿಕೊಳ್ಳುತ್ತಾರೆ.

ಶಸ್ತ್ರ ಚಿಕಿತ್ಸೆ ಸಂಪೂಣ೯ ಅರಿವಳಿಕೆಗೊಳಗಾದ ರೋಗಿಯ ಬಾಯಿಯನ್ನು ತೆರೆಸಿ ಅದು ಹಾಗೇ ತೆರೆದುಕೊಂಡಿರಲು "ಬಾಯಿ ತೆರಕ" ಉಪಕರಣವೊಂದನ್ನು ಅಳವಡಿಸುತ್ತಾರೆ. ಉದ್ದನೆಯ ಇಕ್ಕಳದಿಂದ ಒಂದು ಕಡೆಯ ಟಾನ್ಸಿಲನ್ನು ಹಿಡಿದೆಳೆದು ಅದರ ತಳದಲ್ಲಿ ಕತ್ತರಿಕೆಯನ್ನು ಆರಂಭಿಸುತ್ತಾರೆ. ಮುಂದೆ ಅದರ ಸುತ್ತಲ ಹಿಡಿತಗಳನ್ನು ನಿಧಾನವಾಗಿ ಕೊಯ್ದು, ಬಿಡಿಸಿ, ಟಾನ್ಸಿಲನ್ನು ಹೊರತೆಗೆಯುತ್ತಾರೆ. ತಳದಲ್ಲಿ ಬಿರುಸಿನ ರಕ್ತಸ್ರಾವವಾಗುತ್ತಿದ್ದರೆ, ರಕ್ತನಾಳವನ್ನು ಇಕ್ಕಳದಿಂದ ಹಿಡಿದು, ದಾರದಿಂದ ಬಿಗಿದು ಕಟ್ಟುತ್ತಾರೆ. ಎರಡೂ ಕಡೆಯ ಟಾನ್ಸಿಲುಗಳನ್ನು ಇದೇ ರೀತಿಯಲ್ಲಿ ತೆಗೆದು ನಂತರ, ರಕ್ತಸ್ರಾವ ನಿಂತಿರುವುದನ್ನು ಖಚಿತಪಡಿಸಿಕೊಂಡು, ಬಾಯಿ ತೆರಕವನ್ನು ಹೊರಗೆ ತೆಗೆದು, ಬಾಯಿ ಮುಚ್ಚುತ್ತಾರೆ.

ಅಡಿನಾಯಿಡ್ಸ್ ಟಾನ್ಸಿಲ್ ಗ್ರಂಥಗಳಲ್ಲಿ ಉರಿಯೂತ ಉಂಟಾದಾಗಲೆಲ್ಲಾ ಅಡಿನಾಯಿಡ್ಸ್ ಗಳಲ್ಲೂ ಅದೇ ರೀತಿಯಾಗುವುದುಂಟು. ಅವುಗಳು ಊದಿಕೊಂಡಾಗ ಕಷ್ಟವಾಗುವುದರಿಂದ ಬಾಯಿ ಮೂಲಕ ಉಸಿರಾಡುವುದು, ರಾತ್ರಿ ಕೆಮ್ಮುವುದು, ಗೊರಕೆ ಹೊಡೆಯುವುದು, ಧ್ವನಿ ವ್ಯತ್ಯಾಸ, ತಲೆನೋವು, ಕಿವಿ ನೋವು, ಮುಂತಾದ ತೊಂದರೆಗಳು ಆಗಾಗ್ಗೆ ಕಾಣಿಸಿಕೊಳ್ಳುತ್ತವೆ. ಅದರಿಂದಲೇ ಟಾನ್ಸಿಲೆಕ್ಟಮಿ ಮಾಡುವಾಗಲೇ ಸಾಮಾನ್ಯವಾಗಿ ಅವುಗಳನ್ನು ತೆಗೆದು ಹಾಕುತ್ತಾರೆ. ನೇರವಾಗಿ ಕಣ್ಣಿಗೆ ಗೋಚರಿಸಿದ ಅಡಿನಾಯಿಡ್ಸ್ ಗಳನ್ನು ಬಾಗಿದ ಉಪಕರಣಕ್ಕೆ ಅಳವಡಿಸಿದ ಕನ್ನಡಿಯಲ್ಲಿ ನೋಡಬಹುದು. ಇನ್ನೊಂದು ವಿಶಿಷ್ಟ