ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೧೬೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೊಬಗಿನಬಳ್ಳಿ ಇeಮೊದಲನೆ ಮುಗುಳು. ಚೌಪದಿ ಸಿರಿಯರಸ ನಡಿಯಳಿಗವನೆ ಮಾಡುವೆನು | ಕೊರೆವನವನಾನದಕ್ಕೇಕೆ ಬೇಡುವೆನು ? | ಹೊರತೊಮ್ಮೆ ಕೃಷ್ಣನೈದುತ ರುಕ್ಕಿಣಿಯನು | ನಿರುಕಿಸುತ ಸಂದೆಯದೊಳೆಂತು ಪೇಳಿದನು ||೧|| ನಲ್ಲಿ ಕತ್ತಲೆಯ ದಿನಿತಿನಿತಾಗಿ ಮುಸುಕೆ || ಮೆಲ್ಲ ಮೆಲ್ಲನೆ ಮಸುಕುವಾ ಸಂಜೆಯಿರಕೆ | ಕಲ್ಲಾಯ್ತನಹುದು ನಿನ್ನಯ ಮೈಯಿದೇನು | ಸೊಲ್ಲಿಸೆನ್ನೊಡನೆ ಮರೆಮಾಜದೆಲ್ಲವನು ||೨|| ಬೆಳಕಿಂದೆನಸು ಹರಿಯೆ ಕೈಗೆಲಸದವಳು | ಬಳಿವಂದು ಮೆಲ್ಲನೆಂದಳು ಬಗೆಯೊಳಳಲು | ಬೆಳೆಯುತಿಹುದೊಡತಿಗೆಂದುಸುರದೇನಿಂದು | ಪಳವಿರದೆ ಮರುಗಿದರೆ ದೊರೆಯಲೇನಿಹುದು ||೩|| ಬೇರೆಹೆಂಗಳತೆರದಿ ನಿನಗೆ ಸವತಿಯರೊಳ್ | ತೋರದೆಳ್ಳನಿತಾದರುಂ ಮಚ್ಚರಂಗಳ | ಆರಾದರುಂ ಕುನಿಸಿದರೂ ನುಡಿವುದಿದ್ದ೦ | ತಾರೆಸಗುವರು ಕುತ್ತವರಿಯದಿರೆ ಮದ್ದು ||೪|| ಇನಿಯ ನೀಂನಿ ಮಿಡೆ ಬೇರಾವನೋವು | ಎನಗೊದಗಲುಂಟುನೇಹವನಾಂತು ತಾವು | ಇನಿದಾಗಿ ಸವತಿಯರು ಬಾಳ್ಳರಾದರೆ ಕೇಳ | ಕುನಿಪುದದವಳಲೆಂದು ಮುಳುಮೊನೆಯವೊಲು ||೫|| |