ಈ ಪುಟವನ್ನು ಪ್ರಕಟಿಸಲಾಗಿದೆ

22

ತಿಳಿಯಿತೆ? ಎಲ್ಲಿ, ಈಗ ಮನಃಪೂರ್ವಕವಾಗಿ ಹೇಳು. ಈ ಸುವರ್ಣಸ್ಪರ್ಶವು ಹೋದರೆ ಸಾಕೆಂದು ನಿನಗೆ ಅಭಿಪ್ರಾಯವಿದೆಯೆ?" ಎಂದು ಕೇಳಿದನು. ಅದಕ್ಕೆ ಸುವರ್ಣಶೇಖರನು, "ಸುವರ್ಣಸ್ಪರ್ಶವೆಂಬ ಮಾತ ಕೇಳಿದರೆ ನನಗೆ ಸಹಿಸದಂತಾಗಿದೆ" ಎಂದನು. ಅಷ್ಟು ಹೊತ್ತಿಗೆ ಸುವರ್ಣಶೇಖರನ ಮೂಗಿನ ಮೇಲೆ ಒಂದು ನೊಣವು ಬಂದು ಕುಳಿತುಕೊಂಡು ಕೂಡಲೆ ಕೆಲಕ್ಕೆ ಬಿದ್ದಿತು. ಅದೂ ಚಿನ್ನವಾಗಿ ಬದಲಾಯಿಸಿದ್ದುದರಿಂದ ಸುವರ್ಣಶೇಖರನಿಗೆ ಮೈನಡುಕ ಹತ್ತಿತು. ಇದನ್ನು ನೋಡಿ ಆ ಮಹಾನುಭಾವನು, "ಎಲೈ ಸುವರ್ಣಶೇಖರನೆ ನಿನಗ ಈ ಸುವರ್ಣಸ್ಪರ್ಶವು ಬೇಡದಿದ್ದರೆ ನಿನ್ನ ತೋಟದ ಮಗ್ಗುಲಲ್ಲಿ ಹರಿಯುವ ನದಿಯಲ್ಲಿ ಹೋಗಿ ಮುಳುಗು. ಸ್ನಾನವಾದ ತರುವಾಯ ಆ ಜಲವನ್ನು ಒಂದು ಪಾತ್ರೆಯಲ್ಲಿ ಮನೆಗೆ ತಂದು ನಿನಗ ಯಾವ ಯಾವ ಪದಾರ್ಥಗಳು ಪುನಃ ಪೂರ್ವದ ಸ್ಪಿತಿಗೆ ಬರಬೇಕೆಂದು ಇಷ್ಟವಾಗುತ್ತದೆಯೋ ಅವುಗಳ ಮೇಲೆ ನೀರನ್ನು ಪ್ರೋಕ್ಷಿಸು. ಇದನ್ನು ನೀನು ಭಕ್ತಿ ಪುರಸ್ಸರವಾಗಿ ಮಾಡಿದೆಯಾದರೂ ನಿನ್ನ ದುರಾಸೆಯಿಂದುಂಟಾದ ಸಂಕಟಕ್ಕೆ ಪ್ರತೀಕಾರವಾಗಬಹುದು ಎಂದು ಹೇಳಿದನು. ಸುವರ್ಣಶೇಖರನು ನಾಚಿಕೆಯಿಂದ ತಲೆಯನ್ನು ತಗ್ಗಿಸಿ ಪುನಃ ಮೇಲಕ್ಕೆ ಎತ್ತಿ ನೋಡಲಾಗಿ ಆ ಸೂರ್ಯ ದೃಶನಾದ ಅಪರಿಚಯಸ್ಥನು ಅದೃಶ್ಯನಾಗಿದ್ದನು.

ಏಳನೆಯ ಪ್ರಕರಣ.

ಸುವರ್ಣಶೇಖರನು ಕೂಡಲೆ ಗಡಬಡಿಸಿಕೊ೦ಡು ಎದ್ದು ಒಂದು ಮಣ್ಣಿನ ಹೂಜೆಯನ್ನು ಕೈಯಲ್ಲಿ ಹಿಡಿದು ನದಿಯ ಬಳಿಗೆ ಹೊರಟನು ಆ ಹೂಜಿಯೂ ಸಹ ಚಿನ್ನದ ಹೂತಿಯಾಯಿತು. ದಾರಿಯಲ್ಲಿ ಅವನ ಕೈಕಾಲಿಗೆ ತಗಲಿದ ಗಿಡಮರಗಳಲ್ಲವೂ ಚಿನ್ನ