ಈ ಪುಟವನ್ನು ಪ್ರಕಟಿಸಲಾಗಿದೆ
೫೪
ಸತೀಹಿತೈಷಿಣಿ

ಶ್ರೀ.

ಅಷ್ಟಮ ಪರಿಚ್ಛೇದ.

_________

(ಪಾಪಪಂಕ)

ಲೆಯಪುರದ ಮಂಗಳವಾರಪೇಟೆಗೆ ಸೇರಿದ ಓಣಿ ಬೀದಿಯಲ್ಲಿಯ ಒಂದು ಮನೆ. ಮನೆಯೇನೂ ಅಷ್ಟು ದೊಡ್ಡದಲ್ಲ. ಮಹಡಿಯ ಮನೆಯಾದುದರಿಂದ ನೋಡಲಿಕ್ಕೆ ಇಕ್ಕಾಗಿ ಕಾಣುತ್ತಿಲ್ಲ. ಮನೆಯ ಹೊರಗಡೆ ಶೂನ್ಯಾಂತರಂಗದ ಮಲಿನತೆ ತೋರಿಬರುತ್ತಿರುವಂತೆ ಅವಳ ಮನೆಯೂ ಕಾಂತಿಹೀನವಾಗಿತ್ತೆಂದರೆ ಸಾಕು.

ಚಪಲೆ, ಬೀದಿಯ ಬಾಗಿಲ ನಡುವೆ ಕಿರುಮನಯಲ್ಲಿ, ತಂತ್ರನಾಥನೊಡನೆ ಲಲ್ಲೆಯಲ್ಲಿದ್ದಳು. ತಂತ್ರನಾಥ-ಚಪಲೆ-ಇಬ್ಬರ ಮುಖಗಳಲ್ಲಿಯೂ ಉತ್ಸಾಹವು ಹೊರಹೊಮ್ಮುತಿತ್ತು. ಈ ಕೂರ್ಮೆಗಾರರ ಕುಹುಕವೇನೆಂಬುದನ್ನು ನಮ್ಮ ವಾಚಕವರ್ಗವು ಚೆನ್ನಾಗಿ ತಿಳಿದಿರುವುದೊಳ್ಳಿತಲ್ಲವೆ?

ಚಪಲೆ; - ನೀವು ನನ್ನ ಮಾತನ್ನು ಮೀರುವುದಿಲ್ಲವಷ್ಟೆ?

ತಂತ್ರ - ಎಂದೂ ನಿನ್ನ ಮಾತನ್ನು ಮೀರುವುದಿಲ್ಲ. ನೀನು ನನ್ನ ಕೋರಿಕೆಯನ್ನು ನೆರವೇರಿಸಿಕೊಟ್ಟರೆ...............

ಚಪಲೆ - ನಗುತ್ತ - "ಆ ವಿಷಯದಲ್ಲಿ ಪ್ರಾರ್ಥಿಸಬೇಕಾದುದಿಲ್ಲ. ಅದಿರಲಿ; ನೀವು ಪುನಃ ಸಂಸಾರಕ್ಕೆ ಸಿಕ್ಕಿ. ಕಡೆಗೆ ನನ್ನನ್ನು ಮರೆತರೂ ಮರೆಯಬಹುದು! ನಿಮ್ಮ ಹೆಂಡತಿ ಇನ್ನೂ ಹುಡುಗಿ, ಆದರೂ ಅವಳು ಪ್ರಾಯಸಮರ್ಥೆಯಾದ ಬಳಿಕ ನೀವು ನನ್ನ ಕೈಬಿಟ್ಟರೆ ನಾನು ಮಾಡುವುದೇನು? ಈಗ ನೋಡಿರಿ! ವಿನೋದನು ನನ್ನಿಂದ ಎಷ್ಟೋ ಸುಖವನ್ನು ಅನುಭವಿಸಿರುವನು.