ಈ ಪುಟವನ್ನು ಪ್ರಕಟಿಸಲಾಗಿದೆ
೫೬
ಸತೀಹಿತೈಷಿಣಿ

ಗಿರುವ ಚಾತುರ್ಯವು, ಮತ್ತಾರಲ್ಲಿಯೂ ಇರಲಾರದು. ನಿನ್ನನ್ನು ನೋಡಿದಂದಿನಿಂದ ನನಗೆ ಮನ-ಹೆಂಡತಿ-ಮಕ್ಕಳು-ಮರಿಗಳೆಲ್ಲರೂ ಮರೆತೇಹೋಗಿರುವರು. ಯಾವಾಗಲೂ ನಿನ್ನ ಬಳಿಯಲ್ಲಿಯೇ ಇರಬೇಕೆಂಬ ಕುತೂಹಲವುಂಟಾಗಿರುವುದು. ನಿನಗೆ ಏನುಬೇಕಾದರೂ, ಸಂತೋಷವಾಗಿ ಕೊಡಲು ಸಿದ್ದನಾಗಿರುವೆನು' ಎಂದು ಚಪಲೆಯ ಮುಖವನ್ನೇ ನೋಡುತ್ತೆ ಕುಳಿತನು.

ಪಾಠಕವರ್ಗ !

ಇಲಿ, ಹಾವುಗಳು ತಲೆತಪ್ಪಿಸಿಕೊಳ್ಳಬೇಕಾದರೆ, ಬಿಲವನ್ನೂ, ಹುತ್ತವನ್ನು ಹುಡುಕುವುದು ಸ್ವಭಾವವಲ್ಲವೆ? ಕಳ್ಳರಿಗ ಕೊಲೆ ಪಾತಕರಿಗೂ ತಲೆಪ್ಪಿಸಿಕೊಳ್ಳುವುದಕ್ಕೆ ಕೂಡ, ಅಂತಹ ಸ್ಥಳಗಳನ್ನೇ ಹುಡುಕಬೇಕಾದುದೂ ಸಹಜವಾದುದಲ್ಲವೆ? ಪತ್ನೀಘಾತಕನಾದ ವಿನೋದನಿಗಾದರೂ, ಗ್ರಾಮರಕ್ಷಕರ (Police) ಕಯ್ಯಿಂದ ತಪ್ಪಿಸಿಕೊಳ್ಳುವುದಕ್ಕೆ ಚಪಲೆಯ ಮನೆಯೇ ಸರಿಯಾಗಿ ಕಂಡು ಬಂದುದರಿಂದ ಓಡಿಬಂದನು. ಬಂದವನು ಆತುರದಿಂದ ಬಾಗಿಲನ್ನು ಬಲವಾಗಿ ಒದ್ದನು. ಹಳೆಯದಾಗಿದ್ದುದರಿಂದ ಕದವು ಒಡೆದುಹೋಯಿತು. ಒಡನೆ ಒಳಹೊಕ್ಕನು, ನೋಡಿದನು; ಸರಸ ಸಲ್ಲಾಸದಲ್ಲಿದ್ದ ತಂತ್ರನಾಥ-ಚಪಲೆಯರ ತಾತ್ಕಾಲಿಕ ಸ್ಥಿತಿಗತಿಗಳನ್ನು ಕಂಡನು. ಆಗಲೆ ಚಪಲೆಯ ನೈಜ್ಯಭಾವವೂ ಹೃದ್ಗತವಾಯ್ತು. ಆ ವೇಳೆಯಲ್ಲಿ ವಿನೋದನಿಗೆ ಹೇಗಾಗಿರಬೇಕೆಂಬುದನ್ನು ಗ್ರಾಹಕರೇ ಊಹಿಸುವುದು ಲೇಸು! ಹೇಗೂ ಕ್ರೋಧ-ವಿಸ್ಮಯ-ಭಯ-ಶೋಕಗಳಿಂದ ಜಡನಂತಾಗಿ ಅಡ್ಡಗಟ್ಟಿ ನಿಂತನು.

ಚಪಲೆ - ಚಕಿತಭಾವದಿಂದ - ಇದೇನು? ವಿನೋದ! ಇಷ್ಟು ರೌದ್ರಾವೇಶವೇಕೆ? ಏನುಮಾಡಿದೆ? ಮುಗಿಸಿಬಿಟ್ಟೆಯಾ? (ಅತ್ತಿತ್ತ