ಈ ಪುಟವನ್ನು ಪ್ರಕಟಿಸಲಾಗಿದೆ
ಸುಶೀಲೆ
೫೯

ವಿನೋದನು ಉನ್ಮತ್ತನಂತೆ ವಿಕಾರವಾಗಿ ನಕ್ಕು ತಂತ್ರನಾಥಸ ಬಾಹುಬಂಧನದಿಂದ ಸುಲಭವಾಗಿ ಬಿಡುಗಡೆ ಹೊಂದಿ, ಕಯ್ಯಲ್ಲಿದ್ದ ಕತ್ತಿಯಿಂದ ತಂತ್ರನಾಥನ ತೋಳನ್ನು ತಿವಿದು ಕೆಳಗುರುಳಿಸಿದನು; ಮತ್ತೆ ಚಪಲೆಯ ಜಡೆಯನ್ನು ಎಡಗಯ್ಯಿಂದ ಹಿಡಿದೆಳೆದು - ಚಪಲೆ! ನಿನ್ನ ದುರ್ಭೋಧನೆಯಿಂದ ನಾನು ಕುಲ, ಮಾನ, ಧನ, ಕೀರ್ತಿ, ಗೌರವ, ಸುಖ ಭೋಗಗಳೆಲ್ಲವನ್ನೂ ಕೆಡಿಸಿಕೊಂಡುದಲ್ಲದೆ, ಆನಂದಕ್ಕೆ ಆಧಾರವಾಗಿದ್ದ ಆರಾಮವನ್ನೂ ಹಾಳುಮಾಡಿದೆನು! ನಿನ್ನ ಕುಟಿಲಪ್ರೀತಿಯನ್ನು ನಿಜವೆಂದೇ ನಂಬಿ, ನಿನ್ನ ಮುಖೋಲ್ಲಾಸಕ್ಯಾಗಿ, ಎಷ್ಟೋ ಕೆಟ್ಟ ಕೆಲಸಗಳನ್ನು ಮಾಡಿಬಿಟ್ಟೆನು! ಅಷ್ಟಕ್ಕೂ ತಣಿಯದೆ ನೀನು ನನ್ನ ಪತ್ನಿಯ ಮೇಲೆ ಮಿಥ್ಯಾಪವಾದವನ್ನು ಹೊರೆಯಿಸಿ, ಅವಳ ಪ್ರಾಣವನ್ನು ನನ್ನ ಕಯ್ಯಿಂದೆ ತೆಗೆಯಿಸಲು ಪ್ರಯತ್ನ ಪಟ್ಟೆ | ಆಗಲಿ; ಈಗ ಆ ಕರ್ಮಗಳಿಗೆ ಫಲವನ್ನು ಅನುಭವಿಸು!” ಎಂದು ಹೇಳುತ್ತಿದ್ದಂತೆಯೇ ಒಮ್ಮೆ ಚಪಲೆಯ ಮುಖವನ್ನು ನೋಡಿದನು, ಈತನ ಕ್ರೂರ ದೃಷ್ಟಿಗೆ ಚಪಲೆಯು ಗದಗದಿಸುತ್ತೆ ತಪ್ಪಿಸಿಕೊಳ್ಳಲು ಪ್ರಯತ್ನಪಟ್ಟ ಳು; ಸಾಧ್ಯವಾಗಲಿಲ್ಲ ಇವಳ ಪ್ರಯತ್ನದಿಂದ ಮತ್ತೂ ಕುಪಿತನಾದ ವಿನೋದನು 'ಮರುಳೆ ನೀನೀ ಅಂತಕನ ಕಯ್ಯಿಂದ ಬಿಡಿಸಿಕೊಳ್ಳಬಲ್ಲೆಯಾ? ನಿನ್ನಿ೦ದಾದೀತೇ? ಎಂದಿಗೂ ಸಾಗದು!.........

ವಿನೋದನ ಮಾತು ಮುಗಿವುದಕ್ಕೆ ಮೊದಲೇ, ಪೆಟ್ಟು ತಿಂದು ನೆಲದ ಮೇಲೆ ಬಿದ್ದಿದ್ದ ತ೦ತ್ರನಾಥನು ಮೇಲಕ್ಕೆದ್ದು ಬಂದು ತಾನೇ ಕೊಡಲಿಯನ್ನು ತಂದುದಲ್ಲದೆ; ಅದನ್ನೇ ವಿನೋದನ ತಲೆಯ ಮೇಲೆ ಗುರಿಯಿಟ್ಟು ಹೊಡೆಯಲೆತ್ತಿದನು.

ವಿನೋದನು ಈ ಸುಳಿವನ್ನು ಮುಂದಾಗಿ ತಿಳಿದು, ಕೊಡಲಿಯೇಟು ತನ್ನ ಕಡೆಗೆ ಬೀಳುವ ವೇಳೆಗೆ ಸರಿಯಾಗಿ ಬಲಗಡೆ ಸರಿದನು;