ಈ ಪುಟವನ್ನು ಪ್ರಕಟಿಸಲಾಗಿದೆ
೬೪
ಸತೀಹಿತೈಷಿಣಿ

ನೀತಿ, ತತ್ವಗಳನ್ನು ತೊರೆದು, ದುರ್ಮಾರ್ಗದಲ್ಲಿ ಬಿದ್ದು ಅತ್ಯುತ್ತಮವಾದ ಸುಖಾನಂದಕ್ಕೆ ಬಾಹಿರೆಯಾಗುವಂತಹ ದುರಾಶೆಯು ನನಗೆ ಕನಸಿನಲ್ಲಿಯಾದರೂ, ಎಳ್ಳಷ್ಟೂ ಉಂಟಾಗದೆಂದು ತಿಳಿದಿರು; ಹುಚ್ಚ! ಸಾರಿ ಸಾರಿ ಹೇಳುವೆನು. ಒಂದು ವೇಳೆ, ನನ್ನ ಸ್ವಾಮಿಗೆ ಮದಣದಂಡನೆಯೇ ವಿಧಿಸಲ್ಪಟ್ಟರೂ ನನಗೂ ಮರಣವು ಮುಂದಾಗಿಯೇ ಲಭಿಸುವುದು. ನನಗದರಿಂದ ದುಃಖವಾಗುವಂತಿಲ್ಲ. ನಿನ್ನ ದುರಾಶೆ ಸ್ವಪ್ನದಲ್ಲಿಯೂ ಸಫಲವಾಗದೆಂದು ನಂಬಿ ಹೊರಟುಹೋಗು.

ತಂತ್ರ - ಸುಶೀಲೆ! ಹಟಮಾಡಿ ಕೆಡಬೇಡ!! ಇದರಿಂದ ಮತ್ತಷ್ಟು ಕಷ್ಟವುಂಟಾಗುವುದು. ನನ್ನ ಮನಸ್ಸ೦ತೋಷಪಡಿಸದೆ ಇದ್ದರೆ, ನಿನಗೆಂದಿಗೂ ಸುಖವುಂಟಾಗಲಾರದೆಂದು ನಂಬಿರು. ನೀನು ಇಷ್ಟು ಕಾಠಿಣ್ಯವನ್ನು ಸಹಿಸಿ ನಿಷ್ಠುರವಾಡುತ್ತಿದ್ದರೂ ನಿನ್ನ ಮೇಲಿರುವ ಅಭಿಮಾನದಿಂದ ಅವೆಲ್ಲವನ್ನೂ ಸಹಿಸಿ, ನಿನ್ನನ್ನೂ ಜೀವಸಹಿತ ಬಿಟ್ಟಿರುವೆನಲ್ಲದೆ ಬೇರೆಯಿಲ್ಲ, ಈಗಳೂ ನನ್ನ ಮಾತನ್ನು ಕೇಳಿದರೆ ಬದುಕುವೆ, ಇಲ್ಲವಾದರೆ ಸಾಯುವೆ.

ಸುಶೀಲೆ - ತಿರಸ್ಕಾರದಿಂದ, - ಉನ್ಮತ್ತ! ನಿನ್ನಿ ಉನ್ಮಾದಪ್ರಲಾಪವಿನ್ನು ಸಾಕು! ತೊಲಗು. ನನ್ನನ್ನು ನೀನು, ಈಗಲೇ ಕೊ೦ದರೂ ಸರಿಯೆ, ನಾನೆಂದೂ ನಿನಗೆ ಒಳಗಾಗಲೊಲ್ಲೆನು. ವಿಚಾರಮಾಡದೆ ನೀನು ದುಡುಕಿ ನನ್ನನ್ನು ಮುಟ್ಟಬಂದರೂ ಹಾನಿ ತಪ್ಪದು ನನ್ನ ಸ್ವಾಮಿ ದುಃಖಕ್ಕಾಗಿ ನನ್ನ ಸ್ವಾಮಿಗೆ ಸುಖವೇ ಆದೀತು. ಹೊರಟುಹೋಗು, ನಿಲ್ಲಬೇಡ.

ತಂತ್ರನಾಥನಿಗೆ ಕ್ರೋಧವು ಮಿತಿಮೀರಿತು. ಅಭಿವಾನವೊಂದೆಡೆಯಲ್ಲಿಯೂ ಶೋಕವು ಮತ್ತೊಂದೆಡೆಯಲ್ಲಿಯೂ, ಆಗ್ರಹ