ಈ ಪುಟವನ್ನು ಪ್ರಕಟಿಸಲಾಗಿದೆ

-೮-

ಗಂಟೆ ಈ ಮೂರೂ ವೇಳೆಗಳಲ್ಲಿ ಸಲಾಕಿಯ ನೆರಳನ್ನು ಪರೀಕ್ಷಿಸಬೇಕು. ಈ ನೆರಳು ವರ್ತುಲದಲ್ಲಿ ಎಲ್ಲಿ ಬೀಳುತ್ತದೆಂದು ತಿಳಿಸಲು ಪೂರ್ವ ಪಶ್ಚಿಮದ ಗೆರೆಯನ್ನಾಗಲಿ ದಕ್ಷಿಣೋತ್ತರದ ಗೆರೆಯನ್ನಾಗಲಿ ಗೊತ್ತುಮಾಡಿಟ್ಟುಕೊಂಡು ಅದರಿಂದ ಎಷ್ಟು ಅಂಶಗಳ ದೂರದಲ್ಲಿ ಸಲಾಕಿಯ ನೆರಳು ಬೀಳುತ್ತದೆಂದು ಹೇಳಬೇಕು. ನಾವು ಸೂರ್ಯನು ಹುಟ್ಟುವ ಸ್ಥಳವನ್ನೂ ಹಾಗೆಯೇ ಅವನು ಮುಳುಗುವ ಸ್ಥಳವನ್ನೂ ಪ್ರತಿ ನಿತ್ಯವೂ ನೋಡುತ್ತಿದ್ದರೆ, ಅವನ ಒಂದು ದಿನದ ಗತಿಗೂ ಮರು ದಿನದ ಗತಿಗೂ ಹೆಚ್ಚು ಕಡಿಮೆ ತೋರುವದಿಲ್ಲ. ಅವನು ಪೂರ್ವದಿಂದ ಆಕಾಶದ ಮಧ್ಯಕ್ಕೂ ಅಲ್ಲಿಂದ ಪಶ್ಚಿಮಕ್ಕೂ ಒಂದೇ ಕಂಸದಲ್ಲಿ ಹೋಗುವಂತೆ ಕಾಣುವನು.

ಅದರೆ ನಾವು ಸಲಾಕಿಯ ನೆರಳನ್ನು ವಾರಕ್ಕೊಂದು ಸಾರೆಯಾದರೂ ಒಂದು ನಿಯಮಿತ ವೇಳೆಯಲ್ಲಿ (ಪ್ರತಿ ಆದಿತ್ಯವಾರ ಬೆಳಿಗ್ಗೆ ೯ ಘ೦ಟಿಯಲ್ಲಿ ಮಧ್ಯಾಹ್ನದ ಮೇಲೆ ೩ ಘಂಟೆಯಲ್ಲಿ ಪರೀಕ್ಷಿಸುತ್ತಿದ್ದರೆ, ಸೂರ್ಯ ನು ನಮ್ಮ ಕಲ್ಪನೆಯಂತೆ ಒಂದೇ ಸ್ಥಳದಲ್ಲಿ ಹುಟ್ಟಿ ಒಂದೇ ಮಾರ್ಗವನ್ನು ಹಿಡಿಯುವದಿಲ್ಲವೆಂದು ತಿಳಿಯಬರುವದು, ಒಂದು ಆದಿತ್ಯವಾರದ ಬೆಳಿಗ್ಗೆ ೯ ಘಂಟೆಗೆ ಸರಿಯಾಗಿ ಸಲಾಕಿಯ ನೆರಳನು ನೋಡಿ ಅದರ ದಿಕ್ಕನ್ನು ಗೊತ್ತು ಮಾಡಬೇಕು. ಮುಂದಿನ ಆದಿತ್ಯವಾರದ ಅದೇ ಹೊತ್ತಿಗೆ ಸಲಾಕಿಯ ನೆರಳನ್ನು ನೋಡಿದರೆ, ಅದು ಹಿಂದಿನ ಆದಿತ್ಯವಾರದಲ್ಲಿದ್ದಲ್ಲಿರದೆ ಸ್ವಲ್ಪ ಉತ್ತರಕ್ಕಾಗಲಿ ದಕ್ಷಿಣ ಕ್ಯಾಗಲಿ ಸರಿದಂತೆ ಕಾಣುವದು, ಅಂದರೆ ಮುಗಿಲಲ್ಲಿ ಸೂರ್ಯನ ದಾರಿಯು ಸ್ವಲ್ಪ ಉತ್ತರಕ್ಕಾಗಲಿ ದಕ್ಷಿಣಕ್ಕಾಗಲಿ ಸರಿದಿರುವಂತೆ ತೋರಿಬರುವುದು.

ದಕ್ಷಿಣ ಇಂಡಿಯಾದಲ್ಲಿ ಡಿಸಂಬರ ೨೧ನೇ ತಾರೀಖಿನ ದಿನ ಸೂರ್ಯನ ಪಥವನ್ನು ನೋಡಿದರೆ, ಅವನು ಪೂರ್ವ ದಿಕ್ಕಿನ ದಕ್ಷಿಣಮೂಲೆಯಲ್ಲಿ ಹುಟ್ಟಿ ದಕ್ಷಿಣದಲ್ಲಿಯೇ ಆಕಾಶಕ್ಕೆ ಹತ್ತಿ ಪಶ್ಚಿಮದಿಕ್ಕಿನಲ್ಲಿಯೂ ದಕ್ಷಿಣ ಮೂಲೆಯಲ್ಲಿ ಅಸ್ತಮಿಸುವನು. ನಾವು ಜನವರಿ ತಿಂಗಳಿನ ಮೊದಲನೇ ತಾರೀಖಿನಿಂದ ಪ್ರಾರಂಭಿಸಿ ಸಲಾಕಿಯ ನೆರಳಿನಿಂದ ಸೂರ್ಯನ ಮಾರ್ಗದಲ್ಲಿ ತೋರುವ ವ್ಯತ್ಯಾಸವನ್ನು ನಿರೀಕ್ಷಿಸುತ್ತಾ ಬರಬೇಕು, ಆದಿತ್ಯವಾರದ ಬೆಳಿಗ್ಗೆ ಸಲಾಕಿಯ ನೆರಳನ್ನು ನೋಡಿದರೆ ಅದು ಪಶ್ಚಿಮಕ್ಕೂ ಉತ್ತರಕ್ಕೂ ನಡುವೆ ಬೀಳುವದು. ಅದು ಪಶ್ಚಿಮದಿಂದ ಎಷ್ಟು ಅಂಶಗಳು ಉತ್ತರಕ್ಕಿರುವ ದೆಂಬದನ್ನು ತಿಳಿದು ಬರೆದಿಡಬೇಕು. ಅದೇ ದಿನ ಸಾಯಂಕಾಲ ಸಲಾಕಿಯ