ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- ೧೬ – ಶಿಸುತ್ತವೆ. ಇವು ಎಷ್ಟು ಹೆಚ್ಚಿನ ಬೆಳಕನ್ನು ಹೊಂದಿದ್ದರೂ ಇವು ಮಿರುಗುವ ನಭೋಮಂಡಲದಲ್ಲಿ ಕಾಣುವ ಚಿಕ್ಕೆಗಳಲ್ಲಿ ಮಿರುಗುವ ಚಿಕ್ಕೆಗಳನ್ನು ನಕ್ಷತ್ರ ಗಳೆಂತಲೂ, ಚಂದ್ರನನ್ನು ಹೋಲುವ ಚಿಕ್ಕೆಗಳನ್ನು ಗ್ರಹಗಳೆಂತಲೂ ಕರೆಯುವ ರೂಢಿಯಿರುತ್ತದೆ. ನಕ್ಷತ್ರಗಳಿಗೂ ಗ್ರಹಗಳಿಗೂ ಪ್ರಕಾಶದಲ್ಲಿ ಮಾತ್ರವಲ್ಲದೆ ಗತಿ ಯಲ್ಲಿ ಸಹ ವ್ಯತ್ಯಾಸವಿರುತ್ತದೆ. ನಕ್ಷತ್ರಗಳ ಗತಿಯನ್ನು ಲಕ್ಷ ವಿಘ್ನ ನೋಡಿದರೆ ಅವು ಪ್ರತಿರಾತ್ರಿಯಲ್ಲಿಯೂ ಮೊದಲು ಪೂರ್ವದಿಕ್ಕಿನಲ್ಲಿ ಕಂಡು ಬಂದು ಅನಂತರ ಆಕಾಶದ ಮಧ್ಯಕ್ಕೂ ಕಡೆಗೆ ಪಶ್ಚಿಮದಿಕ್ಕಿಗೂ ಹೋಗುವಂತೆ ಕಾಣುತ್ತವೆ ಅವುಗಳಲ್ಲಿ ಪರಸ್ಪರವಿರುವ ಅಂತರಗಳಲ್ಲಿ ಯಾವ ಹೆಚ್ಚು ಕಡಿಮೆಯ ಕಾಣುವದಿಲ್ಲ. ಗ್ರಹಗಳ ಗತಿಯು ಬೇರೆ ಪ್ರಕಾರದ್ದಾಗಿರುತ್ತದೆ. ಅವುಗಳಿಗೆ ಸೂರ್ಯ, ನಕ್ಷತ್ರ ಇವುಗಳ ಹಾಗೆ ಪ್ರತಿರಾತ್ರಿಯ ಪೂರ್ವದಿಂದ ಪಶ್ಚಿಮದ ಕಡೆಗೆ ಹೋಗುವ ಚಲನೆಯಲ್ಲದೆ ಮತ್ತೊಂದು ಚಲನೆಯ ಕಂಡುಬರುತ್ತದೆ. ಅವುಗಳಲ್ಲಿ ಯಾವದಾದರೂ ಒಂದೆರಡನ್ನು ಗುರ್ತಿಸಿ ಕ್ರಮವಾಗಿ ನೋಡುತ್ತಿದ್ದರೆ ಅವು ಕಾಲಕ್ರಮದಲ್ಲಿ ಚಂದ್ರನ ಹಾಗೆ ಮುಂದಕ್ಕಾಗಲಿ ಹಿಂದಕ್ಕಾಗಲಿ ಸರಿಯ ವದನ್ನು ನಾವು ನೋಡಬಹುದು, ಅವು ಹೀಗೆ ಸರಿಯುವಾಗಿ ಕೆಲವು ತಿಂಗಳಲ್ಲಿ ನಮಗೆ ಗೋಚರವಾಗದೆ ಹೋಗಿ ಪುನ: ಬರುವದುಂಟು. ಈ ಗ್ರಹಗಳಲ್ಲಿ ನಾಲ್ಕನನ್ನು ನಾವು ಬರೇ ಕಣ್ಣಿನಿಂದಲೂ ನೋಡಬಹುದು. ಇವುಗಳಲ್ಲಿ ಬಹಳ ಪ್ರಕಾಶವುಳ್ಳದ್ದು ಶುಕ್ರ, ಈ ಗ್ರಹವು ಕೆಲವು ತಿಂಗಳಲ್ಲಿ ಸೂರ್ಯೋದಯವಾಗ ವದಕ್ಕೆ ಸ್ವಲ್ಪ ಹೊತ್ತಿಗೆ ಮುಂಚೆ ಪೂರ್ವ ಕ್ಷಿತಿಜದಲ್ಲಿ ಪ್ರಕಾಶಿಸುತ್ತಿರ ವದುಕೆಲವು ತಿಂಗಳಲ್ಲಿ ಸೂರ್ಯಾಸ್ತಮಾನವಾದ ಕೂಡಲೆ ಪಶ್ಚಿಮ ದಿಕ್ಕಿನಲ್ಲಿ ಕಾಣ ತಿರುವದು. ಒಂದು ಗ್ರಹವು ಸ್ವಲ್ಪ ತಾಂಬ್ರ ವರ್ಣವುಳ್ಳದಾಗಿರುವಂತೆ ಕಾಣಿ ಸುವುದು; ಇದೇ ಮಂಗಳ ಗ್ರಹವೆನ್ನಿಸುವದುಉಳಿದ ಎರಡು ಗ್ರಹಗಳಲ್ಲಿ ಹೆಚ್ಚು ಪ್ರಕಾಶವುಳ್ಳದ್ದು ಗುರು ಅಥವಾ ಬೃಹಸ್ಪತಿ ಎಂಬ ಹೆಸರುಳ್ಳದ್ದು, ವು ತೊಂದು ಶನಿ ಎಂದು ಕರೆಯಲ್ಪಡುತ್ತದೆ. ಧ್ರುವನಕ್ಷತ್ರವೂ ಅದರ ಸಮೀಪದಲ್ಲಿರುವ ನಕ್ಷತ್ರಪುಂಜಗಳೂ ಪುರಾತನ ಕಾಲದಿಂದ ನಭೋಮಂಡಲದಲ್ಲಿರುವ ನಕ್ಷತ್ರಗಳಲ್ಲಿ ಬೇರೆ ಬೇರೆ ಭಾಗಗಳನ್ನು ಕಲ್ಪಿಸಿ ಒಂದೊಂದು ಭಾಗಕ್ಕೆ ಒಂದು ಪ್ರಾಣಿಯ ಅಥವಾ ಪೌರತ