ಈ ಪುಟವನ್ನು ಪ್ರಕಟಿಸಲಾಗಿದೆ
-೪೨-
ತಾರೀಖು | ಗಾಳಿಯು ಬೀಸುವ ದಿಕ್ಕು | ಗಾಳಿಯ ವೇಗ | ಮೋಡಗಳ ಪ್ರಮಾಟಣ ಮತ್ತು ವಿಧ | |
---|---|---|---|---|
೧. | ೨೫-೭-೧೬ | ನೈರುತ್ಯ | ಮಂದಮಾರುತ | |
೨. | ||||
೩. |
ಎಂಟನೇ ಅಧ್ಯಾಯ.
ಹವೆಯ ಉಷ ಮಾನ
[ಸೂಚನೆ-ಹವೆಯ ಚಲನೆಯಲ್ಲಿರುವ ವ್ಯತ್ಯಾಸಗಳನ್ನು ಕೆಲವು ದಿನಗಳು ನಿರೀಕ್ಷಿಸಿದನಂತರ ಹವೆಯಲ್ಲಿ ಎಷ್ಟು ಅಂಶಗಳ ಉಷ್ಣವಿರುತ್ತದೆಂಬುದನ್ನು ಗೊತ್ತು ಮಾಡಬೇಕು. ಹವೆಯ ಸೆಕೆಯನ್ನು ಅಳೆಯುವದಕ್ಕೆ ಅವಶ್ಯವಾದ ಯಂತ್ರಗಳನ್ನು ಒಂದೊಂದು ಶಾಲೆಯಲ್ಲ ತರಿಸಿಟ್ಟಿರಬೇಕು. ಈ ಅಧ್ಯಾಯದಲ್ಲಿ ಸೂಚಿಸಲ್ಪಡುವ ನಿರೀಕ್ಷಣೆಗಳಿಗೆ ಅವಶ್ಯವಾದ ಉಷ್ಣಮಾಪಕ ಯಂತ್ರಗಳು ಯಾವವೆಂದರೆ:-
(೧) ಸಾಧಾರಣ ಉಷ್ಣ ವಾಪಕಯಂತ್ರ, (೨) ಒಂದೊಂದು ದಿನದಲ್ಲ. ಹವಯ ಉಷ್ಣದ ಪರಮಾವಧಿ ಮತ್ತು ಕನಿಷ್ಟಾವಧಿ ಇವೆರಡನ್ನೂ ತೋರಿಸುವ ಉಷ್ಣಮಾಪಕ ಯಂತ್ರ]
ಬಿಸಲು ಬಹಳ ಹೆಚ್ಚಾಗಿರುವಾಗ ನಾವು ಮನೆಗಳಲ್ಲಿದ್ದರೂ ಸೆಕೆಯ ತಾಪವು ಹೆಚ್ಚಾಗಿರುವಂತೆ ತೋರುವದು. ಆಗ ಬೀಸುವ ಗಾಳಿಯು ನಮ್ಮ ಮೈಗೆ ಸೋಕಿದರೆ ಉಷ್ಣವಾಗಿರುವಂತೆ ಕಂಡುಬರುವದು. ಚಳಿಗಾಲದಲ್ಲಿ ಮನೆಯಿಂದ