ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- ೪೮ – ಉಷ್ಣ ಮಾನದ ಪರಮ ಮತ್ತು ಕನಿಷ್ಟ ಅವಧಿಗಳು, ನಾವು ಇಲ್ಲಿಯವರೆಗೆ ಯಾವದಾದರೂ ಒಂದು ಪ್ರದೇಶದಲ್ಲಿ ಒಂದು ನಿ ಯಮಿತ ವೇಳೆಯಲ್ಲಿ ಹವೆಯ ಉಷ್ಣವನ್ನು ಸರಿಯಾಗಿ ಗೊತ್ತು ಮಾಡುವ ಕ್ರಮ ವನ್ನು ತಿಳಿದೆವು. ಒಂದು ದಿನದ ಎಲ್ಲಾ ವೇಳೆಗಳಲ್ಲಿ ಉಷ್ಣಮಾನವು ಒಂದೇ ವಿಧವಾಗಿರದೆ ಹೊತ್ತು ಹೊತ್ತಿಗೆ ವ್ಯತ್ಯಾಸವಾಗುತ್ತಿರುವದು, ಆದ್ದರಿಂದ ನಾವು ನಿರೀಕ್ಷಣೆಗೆ ಗೊತ್ತು ಮಾಡುವ ವೇಳೆಯು ಇತರ ವೇಳೆಗಳಿಗಿಂತ ಹೆಚ್ಚು ಅಥವಾ ಕಡಿಮೆ ಸೆಕೆಯುಳ್ಳದ್ದಾಗಿರಬಹುದು. ಆಯಾ ದಿನದಲ್ಲಿ ಬಹಳ ಹೆಚ್ಚಾದ ಉಷ್ಣ ವು ಅಥವಾ ಉಷ್ಣಮಾನದ ಪರಮಾವಧಿಯು (ಮ್ಯಾಕ್ಸಿಮರ್-Maximum) ಹಾಗೆಯೇ ಬಹಳ ಕಡಿಮೆಯಾದ ಉಷ್ಣವು. ಅಥವಾ ಉಷ್ಣಮಾನದ ಕನಿಷ್ಠಾವ ಧಿಯು (NIinimum-ಮಿನಿಮಮ್) ಎಷ್ಟು ಇರುತ್ತದೆಂಬುದನ್ನು ಗೊತ್ತು ಮಾ ಡುವದು ಉಷ್ಣ ಮಾಪಕ ಯಂತ್ರದ ಮುಂದಿನ ನಿರೀಕ್ಷಣೆಯು, ನಾವು ಇಲ್ಲಿಯ ವರೆಗೆ ವಿವರಿಸಿದ ಸಾಧಾರಣ ಉಷ್ಣ ಮಾಪಕಯಂತ್ರದಿಂದ ಈ ಅಂಶಗಳನ್ನು ನಿರ್ಣಯಿಸಬೇಕಾದರೆ, ಈ ಯಂತ್ರವನ್ನು ಸರ್ವಕಾಲಗಳಲ್ಲಿಯೂ ಎಡಬಿಡದೆ ನೋಡುವ ಕಾವಲುಗಾರರನ್ನು ಏರ್ಪಡಿಸಬೇಕು, ಈ ಯಂತ್ರದಲ್ಲಿ ಪಾರಜವು ಏರುವದನ್ನೂ ಇಳಿಯುವದನ್ನೂ ಇವರು ನೋಡಿ ಗುರ್ತುಮಾಡಿದರೆ ಆಯಾ ದಿನದ ಹವೆಯ ಉಪ್ಪಮಾನದ ಪರಮಾವಧಿಯನ್ನು ಮತ್ತು ಕನಿಷ್ಠಾವಧಿಯು ನ್ಯೂ ನಾವು ಅರಿಯಬಹುದು. ಈ ವಿಧವಾದ ಏರ್ಪಾಡು ಸಾಧ್ಯವಲ್ಲ. ಆಯಾದಿನದ ಉಷ್ಣವನದ ಈ ಅವಧಿಗಳನ್ನು ತಾವಾಗಿಯೇ ತಿಳಿಸುವ ಉಷ್ಣ ಮಾಪಕಯಂತ್ರಗಳನ್ನು ಮಾಡಿರುತ್ತಾರೆ. ನಾವು ದಿನಕ್ಕೆ ಒಂದೇಸಾರೆ ನೋಡುವದರಿಂದ ಹಿಂದಿನ ದಿನದ ಉಷ್ಣಮಾನದ ಪರಮಾವಧಿಯನ್ನೂ ಕನಿಷ್ಣಾ ವಧಿಯನ್ನೂ ತಿಳಿಯಬಹುದು, ಈ ಯಂತ್ರಗಳಲ್ಲಿ ಎರಡು ಬಗೆಯಾದವು ಇರುತ್ತ ನೆ:- (೧) ಪರಮಾವಧಿ ಮತ್ತು ಕನಿಷ್ಟಾವಧಿ ಇವೆರಡರಲ್ಲಿ ಒಂದೊಂದನ್ನು ಮಾತ್ರ ತಿಳಿಸುವ ಪ್ರತ್ಯೇಕ ಯಂತ್ರಗಳು, (೨) ಇವೆರಡನ್ನೂ ಒಂದರಲ್ಲೇ ತಿಳಿಸುವ ಯಂತ್ರ ಗಳು, ಇವುಗಳಲ್ಲಿ ಎರಡನೇ ವಿಧದ ಯಂತ್ರವು* ವಿಶೇಷವಾಗಿ ರೂಢಿಯಲ್ಲಿರುತ್ತದೆ. ಇಂಥ ಒಂದು ಯಂತ್ರದರಚನೆಯು ಕೆಳಗೆ ಬರೆದಂತಿರುತ್ತದೆ. ಒಂದು ಕಾಜಿನ ಕೊಳ ವೆಯು U ಆಕಾರದಲ್ಲಿ ಬಗ್ಗಿ ಸಲ್ಪಟ್ಟಿದ್ದು ಅದರ ಎರಡೂ ತುದಿಗಳಲ್ಲಿ ಗೋಲಗಳಿರು

  • ( ಚಿತ್ರದಲ್ಲಿ ತೋರಿಸಲ್ಪಟ್ಟಿರುವ ಯ೦ತ್ರ ಎರಡನೇ ವಿಧದ್ದು )