ಈ ಪುಟವನ್ನು ಪ್ರಕಟಿಸಲಾಗಿದೆ

-೪೯-

ಇವೆ. ಈ ಕೊಳಿವೆಯ ಅಡಿಯ ಭಾಗದಲ್ಲಿ ಪಾರಜವನ್ನೂ ನಮ್ಮ ಎಡ ಪಾರ್ಶ್ವಕ್ಕೆ ಇರುವ ಭುಜದ ಮೇಲ್ಬಾಗದಲ್ಲಿ ಗೋಲವು ಪೂರ್ಣವಾಗಿ ತುಂಬಿರುವಂತೆಯೂ ಬಲ ಪಾರ್ಶ್ವದ ಭುಜದ ಮೇಲ್ಬಾಗದಲ್ಲಿ ಗೋಲವು ಅರ್ಧ ತುಂಬಿರುವಂತೆಯೂ ಆ ಹಾಲ ಎಂಬ ಮದದ್ರವವನ್ನೂ ಹಾಕಿರುತ್ತಾರೆ. ಒಂದೊಂದು ಭುಜದಲ್ಲಿ ಒಂದು ಕಬ್ಬಿಣದ ತುಂಡು ಪಾರಜದ ಮೇಲ್ಬಾಗದಲ್ಲಿ ಕೊಳವೆಗೆ ಅಂಟಿಕೊಂಡಿರುತ್ತದೆ. ಆಲ್ಕೋಹಾಲವು ಬಹಳ ತೀವ್ರವಾಗಿ ಕಾಯುವ ಸ್ವಭಾವವನ್ನು ಹೊಂದಿರುವದರಿಂದ ಹವೆಯಲ್ಲಿ ಸ್ವಲ್ಪ ಸೆಕೆಯಿದ್ದರೂ ಕೊಳಿವೆಯಲ್ಲಿರುವ ದ್ರವವು ವಿಸ್ತಾರವಾಗುವದು. ಎಡಪಾರ್ಶ್ವದ ಗೋಲದಲ್ಲಿ ದ್ರವವು ವಿಸ್ತಾರವನ್ನು ಹೊಂದಿದರೆ, ಕೊಳಿವೆಯ ಅಡಿಯ ಭಾಗದಲ್ಲಿರುವ ಪಾರಜವನ್ನು ಹೂಡುವುದು. ಈ ಪಾರಜವು ಬಲಪಾರ್ಶ್ವದ ಭುಜದಲ್ಲಿ ಮೇಲಕ್ಕೇರಿ ಅದರಲ್ಲಿರುವ ಕಬ್ಬಿಣದ ತುಂಡನ್ನು ನೂಕುತ್ತ ಹೋಗುವದು. ಹವೆಯ ಉಷ್ಣವು ಕಡಿಮೆಯಾದಾಗ ಬಲಪಾರ್ಶ್ವದ ಭುಜದಲ್ಲಿರುವ ಆಲ್ಕೋಹಾಲವು ಸಂಕುಚಿತವಾಗಿ ಪಾರಜವನ್ನು ಕೆಳಗೆ ಒತ್ತುವದು. ಪಾರಜವು ಇಳಿಯುವಾಗ ಕಬ್ಬಿಣದ ತುಂಡು ಮೇಲೆ ಉಳಿದು ಉಷ್ಣದ ಪರಮಾವಧಿಯನ್ನು ಸೂಚಿಸುವದು. ಬಲಪಾರ್ಶ್ವದಲ್ಲಿ ಪಾರಜವು ಕೆಳಗೆ ಬರುತ್ತಾ ಎಡಪಾರ್ಶ್ವದ ಭುಜದಲ್ಲಿ ಮೇಲಕ್ಕೇರಿ ಅಲ್ಲಿರುವ ಕಬ್ಬಿಣದ ತುಂಡನ್ನು ಮೇಲಕ್ಕೆ ನೂಕುವದು. ಎಡಪಾರ್ಶ್ವದ ಭುಜದಲ್ಲಿ ಆಲ್ಕೋಹಾಲವು ಸಂಕುಚಿತವಾಗುತ್ತಾ ಪಾರಜವು ಮೇಲ ಮೇಲಕ್ಕೆ ಹೋಗುತ್ತಿರುವದು. ಶೀತವು ಕಡಿಮೆಯಾಗಿ ಆಲ್ಕೋಹಾಲವು ವಿಸ್ತಾರವಾಗುವದಕ್ಕೆ ಆರಂಭಿಸಿದರೆ, ಪಾರಜವು ಈ ಪಾರ್ಶ್ವದಲ್ಲಿ ಕೆಳಗೆ ಇಳಿಯುತ್ತಾ ಬರುವದು. ಕಬ್ಬಿಣದ ತುಂಡು ಮಾತ್ರ ಮೇಲೆ ಉಳಿದು ಉಷ್ಣದ ಕನಿಷ್ಟಾವಧಿಯನ್ನು ತಿಳಿಸುವದು. ಒಂದು ಸಾರೆ ನಾವು ಈ ಯಂತ್ರವನ್ನು ನಿರೀಕ್ಷಿಸಿದನಂತರ ಈ ಕಬ್ಬಿಣದ ತುಂಡುಗಳನ್ನು ಲೋಕಚುಂಬಕದಿಂದ (Magnet-ಮ್ಯಾಗ್ನಟ್) ಪಾರಜದವರೆಗೂ ಇಳಿಸಬೇಕು. ಹಾಗೆ ಮಾಡದಿದ್ದರೆ ಪಾರಜವು ಈ ತುಂಡುಗಳನ್ನು ಈ ಅವಧಿಗಳಿಗಿಂತಲೂ ಮೇಲಕ್ಕೆ ದೂಡುವವರೆಗೆ ಇವು ಅಲ್ಲೇ ಉಳಿಯುವವು.

ಇಂಥ ಯಂತ್ರದ ಉಪಯೋಗವನ್ನು ಹುಡುಗರಿಗೆ ತಿಳಿಸಿದನಂತರ, ಅವರು ಅದನ್ನು ಕ್ರಮವಾಗಿ ನೀರಿಕ್ಷಿಸಲುಪಕ್ರಮಿಸಬಹುದು. ಪ್ರತಿನಿತ್ಯವೂ ಬೆಳಿಗ್ಗೆ ೮ ಅಥವಾ ೯ ಘಂಟೆಗೆ ಈ ಉಷ್ಣಮಾಪಕ ಯಂತ್ರವನ್ನು ನೋಡಿ ಹಿಂದಿನ ದಿನದ ಹವೆಯ ಉಷ್ಟಮಾನದ ಪರಮಾವಧಿಯನ್ನೂ ಕನಿಷ್ಟಾವಧಿಯನ್ನೂ ಗುರ್ತು