ಈ ಪುಟವನ್ನು ಪ್ರಕಟಿಸಲಾಗಿದೆ

-೭೫-

ಮುಖ್ಯಾಂಶವಾಗಿರುವ ಆಮ್ಲಜನಕವೂ ಹವೆಯಲ್ಲಿ ಸ್ವಲ್ಪ ಮಟ್ಟಿಗೆ ಸೇರಿರುವ ಅಂಗಾರಾಮ್ಲವಾಯ ಇದರಲ್ಲಿ ಬೆರೆತುಕೊಳ್ಳುವವ, ಮಳೆಯ ನೀರು ಬಂಡೆಗಳ ಮೇಲೆ ಹರಿಯುವಾಗ ಅವುಗಳ ಕೆಲವು ಅಂಶಗಳು ಆಮ್ಲಜನಕದ ಸಂಗಡವಾಗಲಿ ಅಂಗಾರಾಮ್ಲ ವಾಯುವಿನ ಸಂಗಡವಾಗಲಿ ಸಂಯುಕ್ತವಾಗಿ ಬಂಡೆಗಳಿಂದ ಪ್ರತ್ಯೇಕಿಸಲ್ಪಟ್ಟು ನೀರಿನಲ್ಲಿ ಕರಗಿ ಬೇರೆ ಸ್ಥಳಗಳಿಗೆ ಸಾಗಿಸಲ್ಪಡುತ್ತವೆ. ಈ ನೀರು ಬಂಡೆಗಳ ಕರಗಿದ ಅಂಶಗಳನ್ನು ಮಾತ್ರವಲ್ಲದೆ ಕರಗಿಸಲಾಗದ ಮಣ್ಣು, ಕಲ್ಲು ಮೊದಲಾದವುಗಳನ್ನು ಸಹ ಕೊಚ್ಚಿಕೊಂಡು ಹೋಗುತ್ತದೆ. ಹೀಗೆ ನೀರಿನ ಪ್ರವಾಹಗಳಲ್ಲಿ ಹರಿದು ಹೋಗುವ ಕಲ್ಲುಗಳು ತಾವು ಸವೆಯುನವಲ್ಲದೆ ತಮ್ಮ ಘರ್ಷಣದಿಂದ ಬುಡದಲ್ಲಿರುವ ಬಂಡೆಗಳನ್ನು ಸವಿಸಿ ನುಚ್ಚು ಮಾಡುತ್ತವೆ.

ಪ್ರವಾಹದಲ್ಲಿ ಹರಿದು ಹೋಗುವ ಕಲ್ಲುಗಳು ಒಂದನ್ನೊಂದು ಉಜ್ಜುವದರಿಂದ ನುಣುಪಾದ ಗುಂಡು ಕಲ್ಲುಗಳಾಗುತ್ತವೆ. ಗಟ್ಟಿಯಾದ ಬಂಡೆಗಳ ಮೇಲಿನಿಂದ ಹರಿಯುವ ನದಿಗಳತಳದಲ್ಲಿ (ಉ.ತುಂಗಭದ್ರಾ,ಕಾವೇರಿ) ಇಂಥ ಗುಂಡು ಕಲ್ಲುಗಳು ವಿಶೇಷವಾಗಿರುತ್ತವೆ. ನೆಲದ ಮೇಲ್ಬಾಗವು ಮೇಲೆ ವಿವರಿಸಲ್ಪಟ್ಟ ರೀತಿಯಲ್ಲಿ ಸೆಕೆ, ಗಾಳಿ,ನೀರು ಇವುಗಳಿಂದ ನಿರಂತರವಾಗಿ ಸವೆಯುತ್ತಿ ರುವದು,ಭೂದೃಷ್ಟವು ಈ ವಿಧದ ರೂಪಾಂತರವನ್ನು ಹೊಂದುತ್ತಿರುವದರಿಂದಲೇ ಸಸ್ಯಾದಿಗಳ ಉತ್ಪತ್ತಿಗೂ ಪ್ರಾಣಿಗಳ ನೆಲೆಗೂಡತಕ್ಕದ್ದಾಗಿರುತ್ತದೆ.