ಈ ಪುಟವನ್ನು ಪರಿಶೀಲಿಸಲಾಗಿದೆ



೧೬೦

ಸ್ವಾಮಿ ಅಪರಂಪಾರ

ಮಂಜಣ್ಣನೆಂದ:
“ಬರತಾರೆ, ಬರತಾರೆ. ಇಲ್ಲಿನ ಕಾಡುಮೃಗಗಳು ಸಾಧುಪ್ರಾಣಿಗಳ ಹಾಗಿರತವಂತೆ.
ದನ ಮೇಯಿಸೋರು ಯೋಳಿದ್ದು ಕೇಳಿವ್ನಿ, ಆಕಳ ಬಂದರೆ ಹುಲಿ ಅದನ್ನ ತಿನ್ನಾ
ಕಿಲ್ವಂತೆ."
ಅಪರಂಪಾರ ಉದ್ಗರಿಸಿದ:
“ಅದ್ಭುತ! ಇದು ಮಹಾದೇವನ ಮಾಯಾಸೃಷ್ಟಿ!"
ಅವರು ಕೆರೆಯನ್ನು ಸಮಿಾಪಿಸಿದರು.
ನೀರು ಸ್ವಚ್ಛವಾಗಿತ್ತು, ನಾಲ್ಕಾಳು ತಬ್ಬಿದರೂ ಮುಚ್ಚಲಾಗದಂತಹ ಬಲಿಷ್ಟ ಕಾಂಡ
ಗಳ ಆಲದ ಮರಗಳು ಕೆರೆಯ ದಂಡೆಯುದ್ದಕ್ಕೂ ನಾಲ್ಕಾರು ಕಡೆ ಇದ್ದುವು. ಯಾರೋ
ಇತ್ತೀಚೆಗೆ ಬಂದು ವಿಶ್ರಮಿಸಿ, ಅಡುಗೆ ಬೇಯಿಸಿ ಉಂಡು ಹೋಗಿದ್ದರೆಂಬುದಕ್ಕೆ ಸಾಕ್ಷಿ
ಯಾಗಿ, ಕಲ್ಲುಗಳನ್ನು ಜೋಡಿಸಿ ಮಾಡಿದ ಎರಡು ಒಲೆಗಳಿದ್ದುವು, ಕೆದರಿದ ಬೂದಿಯೂ
ಅರ್ಧ ಸುಟ್ಟ ಸೌದೆಗಳೂ ಅಲ್ಲಿದ್ದುವು.
ನಕ್ಕು ಅಪರಂಪಾರಸ್ವಾಮಿಯೆಂದ :
“ನೋಡಿದೆಯಾ ಶಂಕರಪ್ಪ ? ಮಹಾದೇವ ಮುಂಚಿತವಾಗಿ ವಿಭೂತಿ ಕಳಿಸಿದಾನೆ."
ಅವರು ಕುದುರೆಗಳಿಂದ ಇಳಿದರು. ಮಂಜಣ್ಣ ಮೂರು ಅಶ್ವಗಳನ್ನೂ ಸಣ್ಣದೊಂದು
ಗಿಡಕ್ಕೆ ಕಟ್ಟಿದ.
ಅಪರಂಪಾರ ಜೋಳಿಗೆಯನ್ನು ದಂಡೆಯ ಮೇಲಿರಿಸಿ ನೀರಿನ ಬಳಿ ಸಾರಿದ.
ಮಂಜಣ್ಣ ಅತ್ತಿತ್ತ ಅಲೆಯುತ್ತ ಒಂದು ಮರದ ಕೆಳಗೆ ನಿಂತು, ಮೇಲೆ ನೋಡಿದ.
ಉತ್ಸಾಹದ ಧ್ವನಿಯಲ್ಲಿ ಅವನೆಂದ:
"ಶಂಕರಣ್ಣ. ಬಿರ್ರನೆ ಬಾ. ಕೆಂಪು ಮೋರೆಯ ಒಂದು ಮುಜು ಕುಂತದೆ. ಮನುಷ್ಯನ
ಹಂಗೇ ಅದೇ. ಬಾ, ಬಾ !"
ನೀರಲ್ಲಿ ಪಾದಗಳನ್ನು ತೋಯಿಸಿಕೊಂಡಿದ್ದ ಅಪರಂಪಾರ ಗಟ್ಟಿಯಾಗಿ ಅಂದ ;
“ಆ ಕೋತಿ ಸಾಕ್ಷಾತ್ ಹನುಮಂತ. ಇದು ಕಿಪ್ಕಿಂಧೆ. ಸಂಶಯವಿಲ್ಲ. ಬಂದೂಕು
ಎತ್ತಬೇಡ, ಶಂಕರಪ್ಪ."
ಮಂಜಣ್ಣನ ಬಳಿಗೆ ಬಂದು ಮೇಲಕ್ಕೆ ನೋಡಿ ಶಂಕರಪ್ಪ ಕೇಳಿದ:
"ಎಲ್ಲಿ ? ಕಾಣಿಸೋದಿಲ್ಲ."
“ಅಕಾ_ಅಲ್ಲಿ."
ಕ್ಷಣಾರ್ಧದಲ್ಲಿ ನಡೆದ ಘಟನೆ. ಮಂಜಣ್ಣ ಶಿಳ್ಳು ಹಾಕಿದ. ಶಂಕರಪ್ಪ ಹುಬ್ಬು ಗಂಟಿಕ್ಕಿ
ತಿರುಗುವುದರೊಳಗೆ, ತನ್ನ ತೋಳುಗಳಿಂದ ಅವನನ್ನು ಮಂಜಣ್ಣ ಬಲವಾಗಿ ಬಳಸಿ
ಹಿಡಿದುಕೊಂಡ
"ಬಿಡು ! ಬಿಡು ! ಸೋಮಿಯೋರೆ ! ಘಾತ ! ಘಾತ !"
-ಶಂಕರಪ್ಪ ಕೂಗಿ ನುಡಿದ.
ಹೌಹಾರಿದ ಅಪರಂಪಾರ, ದಂಡೆಯ ಮೇಲೆ ಬಿಟ್ಟು ಬಂದಿದ್ದ ಜೋಳಿಗೆಯತ್ತ
ಧಾವಿಸಿ, ಸೂರಪ್ಪನಾಯಕ ಕಾಣಿಕೆಯಾಗಿ ಕೊಟ್ಟಿದ್ದ ಬಂದೂಕಿಗೆ ಕೈಹಾಕಿದ.
ಅಷ್ಟರಲ್ಲೇ ಆರು ಜನ ಮರ ಪೊದೆಗಳಿಂದ ಹೊರಕ್ಕೆ ಬಂದಿದ್ದರು. ಮೂವರು