ಈ ಪುಟವನ್ನು ಪರಿಶೀಲಿಸಲಾಗಿದೆ

ಅಪರಂಪಾರ ನನ್ನು-ಕಾಣುವ ಕುತೂಹಲ ಕಾಂಪ್ಬೆಲ್ ಗೂ ಇತು, ವಿಚಾರಣೆಯ ವೇಳೆ ಆತ ಒಬ್ಬ ಪ್ರೇಕ್ಷಕನಾದ. ಆದರೆ ಕೊನೆಯ ಅಂಕದ ಸಿದ್ಧತೆ ಕಂಡಾಗ, ಅವನು ತಲ್ಲಣಿಸಿ ಹೋದ. ಈಗಲೂ ಹೊರಬರಲಾರೆ, ಎಂದು ಮೋಡಗಳ ಮರೆಯಲ್ಲೇ ಸೂರ್ಯ ನಿಂತ. “అ83(నా-క్రానాణా !" ಹಿಮ್ಮಡಿಗಳ ಸಪ್ಪಳಗಳ ಬಳಿಕ– "ಜಾಕ್ಷನ್-ಮಾರ್ಚ್!" ಒಂದು ಬಯನೆಟ್ಟ ಅಲುಗದೆ ನಿಂತ ಅಪರಂಪಾರನ ಎಡಗಣ್ಣನ್ನು ತಿವಿಯಿತು. “ಮಹಾದೇವ! ಎಂದು ಅಪರಂಪಾರ ಉದ್ಗರಿಸಿದ. ಪ್ರೇಕ್ಷಕನಾಗಿದ್ದ ಒಬ್ಬ ಆಂಗ್ಲಸಿಪಾಯಿ ಮಗುಲಲ್ಲಿದ್ದವನೊಡನೆ ಪಿಸುದನಿಯಲ್ಲಿ ಅಂದ “ಸತುಹೋದನಲ್ಲ ಆ ಸೈನಿಕ? ಅವನನ್ನು ನೆನಸುತಿದ್ದಾನಾ?" - ಅವನ ಬಂಧು ನುಡಿದ : "ಇಲ್ಲ, ಅದು ಅವರ ದೇವರ ಹೆಸರು." ಆಜ್ಞೆ ಮತ್ತೆ ಕೇಳಿಸಿತು: "ಜೋನ್ಸ್–ಮಾರ್ಚ್!" ಕಣಾಲಿ ಹೊರಬಂದು ಎಡಗಡೆಯೊಂದರಿಂದಲೇ ರಕ್ತ ಧುಮ್ಮಿಕುತ್ತಿದ್ದ ಅಪೂರ್ಣ ಚಿತ್ರ. ಇನ್ನೊಂದು ಬಯನೆಟ್ಟ ಬಲಗಣ್ಣನ್ನು ತಿವಿದು, ಆ ಚಿತ್ರವನ್ನು ಪೂರ್ಣಗೊಳಿಸಿತು.

  • ప్పాడాడ్వావా !” ಕಾಂಪ್ಬೆಲ್ ದೃಶ್ಯ ನೋಡಲಾರದೆ ತನ್ನ ಕಣ್ಣುಗಳನ್ನು ಮುಚ್ಚಿಕೊಂಡ. ಆ ಗಾಯಗಳಿಗೆ ಪಟ್ಟಿ ಕಟ್ಟಬೇಕೆಂದು ಡಾಕ್ಟರ್ ಕಾಂಪ್ಬೆಲ್ಗೆ ಸೂಚಿಸಲಾಯಿತು. ಆ ಅಸಹಾಯತೆಯಲ್ಲರೂ ಎಂಥ ಗಾಂಭೀರ್ಯವಿತು ಅಪರಂಪಾರನ ನಿಲುವಿನಲ್ಲಿ! శ్మాంచాబిలో ఆందో : “ರೋಗಿ ಕೂತುಕೊಳ್ಳಬೇಕು." ಸಿಪಾಯಿಯೊಬ್ಬ ಪೀಠ ತಂದು, "ಕೂತ್ಕೋಳ್ಳಿ” ಎಂದ. ಅವನ ಅರಿವಿಲ್ಲದಂತೆಯೇ ಬಹುವಚನದ ಆ ಪದ ತುಟಿಗಳಿಂದ ಹೊರಬಿದ್ದಿತು.

ಇಬ್ಬರು ಸಿಪಾಯರು ಅಪರಂಪಾರನ ರೆಟ್ಟೆಗಳನ್ನು ಹಿಡಿದು ಪೀಠಕ್ಕೆ ಜಗ್ಗಿದರು. "ಶಿವ! ಶಿವ! ಶಿವ !" ಕಾಂಪ್ಬೆಲ್ ಆತನ ಬಳಿ ಸಾರಿ, ಹಿಂದೂಸ್ಥಾನಿಯಲ್ಲಿ అండా : "ನಾನು ಡಾಕ್ಟರ್, ವೈದ್ಯ, ನನ್ನ ಕರ್ತವ್ಯ ಮಾಡುತೇನೆ. ಕಣ್ಣುಗಳಿಗೆ ಔಷಧಿ ಹಾಕುತೇನೆ.' ಈಗ ಅಪರಂಪಾರ ಮುಂಗೈಗಳೆರಡನ್ನೂ ಎತ್ತಿ ಅದುರುವ ಕಂಠದಲ್ಲಿ ನುಡಿದ : "ಔಷಧಿ ? ಹುಣ್ಣಿನ ಮೇಲೆ ಬರೆ?ಕುರುಡನ ಮಾಡಿದ ಬಳಿಕ ಪಾದಪೂಜೆ? ಮರುಳೆ ಸರಿಯತ್ರ !" ಅಪರಂಪಾರ ಏಳಲೆತ್ನಿಸಿದ, ಅವನನ್ನು ಬಲಾತ್ಕಾರವಾಗಿ ಪೀಠಕ್ಕೆ ಒತ್ತಿ ಹಿಡಿದಾಗ. ぐ33 引J○ric@C3: