ಈ ಪುಟವನ್ನು ಪರಿಶೀಲಿಸಲಾಗಿದೆ

ఆ 55o535 ರೀವಿಗಳೊಂದೂ ಇಲ್ಲದೆ ಇಲ್ಲಿ ಜನ ಸರಳವಾಗಿ ವರ್ತಿಸುತ್ತಿದ್ದರು. ಪ್ರಾಚೀನ ಸೌಧಗಳು, ಅನೇಕ ಅರಮನೆಗಳು, ದೇವಾಲಯಗಳು, ಸಾಮಾನ್ಯ ವಸತಿ ಗಳು-ಒಂದು ಚೂರು ನೆಲವೂ ಹಾಳಾಗದಂತೆ ಆ ನಗರವನ್ನು ನಿರ್ಮಿಸಿದ್ದರು, ಸಮುದ್ರ ದಿಂದ ಸುತುವರಿಯಲ್ಪಟ್ಟ ಆ ದ್ವೀಪವಾಸಿಗಳು. ವಿಶ್ವದ ಹತು ಮೂಲೆಗಳಿಂದ ಅವರು ಕೊಳ್ಳೆ ಹೊಡೆದು ತಂದ ಸಂಪತು ಆ ನಗರದಲ್ಲಿ ಮೈಮುರಿದು ಬಿದ್ದಿತು. ಸಾರೋಟಿನಲ್ಲಿ ಬೀದಿಗಳುದ್ದಕ್ಕೂ ಹೋಗುತ್ತ ಮೇಗ್ ಲಿಂಗ್ ಅನ್ನುತ್ತಿದ್ದ: "ಇದು ಹೈಡ್ ಪಾರ್ಕ್, ಮಹಾಸಾಮಿಾ, ನಮ್ಮ ನಗರದ ಪ್ರಖ್ಯಾತ ಉದಾನ... ಅಕೋ, ಅದು ವೀರರ ಸೇತುವೆ-ನೈಟ್ಸ್ ಬ್ರಿಜ್...ಇದು ಕೆನ್ಸಿಂಗ್ಟನ್ ರಸ್ತೆ, ಅದು ಪುಷ್ಟೋದಾನ. ಹಿಂದೆ ಈ ವಿಸಾರ ಪ್ರದೇಶ ಚಕ್ರವರ್ತಿಗಳ ಸೊತಾಗಿತು, ಅವರ ಲೋಬ್ಬರು ಸಾರ್ವಜನಿಕರ ಉಪಯೋಗಕ್ಕಿರಲಿ ಅಂತ ಬಿಟ್ಟುಕೊಟ್ಟರು." ಕ್ಲಿಫ್ಟನ್ ವಿಲಾ ಚಿಕವೀರರಾಜನಿಗೆ ಮೆಚ್ಚುಗೆಯಾಯಿತು. ಬಿಳಿಯ ಅಡುಗೆಯವ ರಿದ್ದರು, ನೀಗ್ರೋ ಆಳುಗಳಿದ್ದರು. ಲಾಯದಲ್ಲಿ ಕುದುರೆಗಳಿದುವು. ಸಾರೋಟು ಸೊಗ నౌగిల్కే. పోుర్రిగా లింగా అండా : "ಇಲ್ಲೇ ಸಮೀಪದಲ್ಲೇ ನನ್ನ ಮನೆ." ಕಿರಿಯ ಗೌರಮ್ಮನ ಕಡೆ ನೋಡಿ ಅವನೆಂದ: "ನಿಮ್ಮ ದೇಶಕ್ಕೆ ನಾನು ಮೊದಲು ಬಂದಾಗ ಎಲಾ ಚಿತ್ರವಿಚಿತ್ರವಾಗಿ ಹೇಗೆ ನನಗೆ ಅನಿಸಿತ್ತೊ, ಈಗ ರಾಜಕುಮಾರಿಗೆ ಹಾಗೆಯೇ ಅನಿಸುತ್ತಿರಬಹುದು." ಕಿರಿಯ ಗೌರಮ್ಮ ಮುಗುಳುನಕು ಇಂಗ್ಲಿಷಿನಲ್ಲಿ ಅಂದಳು : "ಲಂಡನ್ ನಗರದ ವಿಷಯ ನಾನು ಕೇಳಿ ಬಲ್ಲೆ, ಓದಿ ತಿಳಕೊಂಡಿದ್ದೇನೆ. ಬಾಲ್ಯದಲ್ಲಿ ನೋಡಿ ಮರೆತುಹೋದ ಊರಿಗೆ ಪುನಃ ಬಂದಹಾಗೆ ಅನಿಸತಾ ಇದೆ." "ಓ! ಎಷ್ಟು ಸೊಗಸಾಗಿ ಅಂದಿರಿ!" ಎಂದ ಮೇಗ್ಲಿಂಗ್. ಚಿಕವೀರರಾಜ ಹೆಮ್ಮೆಯಿಂದ ಮಂದಸ್ಮಿತನಾದ. .ಒಂದಷ್ಟು ತಿಂಗಳು ವಿಹಾರದಲ್ಲಿ ಪ್ರೇಕ್ಷಣೀಯ ಸ್ಥಳಗಳ ಸಂದರ್ಶನದಲ್ಲಿ ಪ್ರತಿಷ್ಠಿತರ ಪರಿಚಯ ಮಾಡಿಕೊಳ್ಳುವುದರಲ್ಲಿ ಭೇಟಿ, ಮರುಭೇಟಿಗಳಲ್ಲಿ ಕಳೆಯಿತು. ಈಸ್ಟ್ ಇಂಡಿಯಾ ಕಂಪೆನಿಯ ಪ್ರತಿನಿಧಿಗಳು ಚಿಕವೀರರಾಜನ ಮೇಲೆ ಕಣ್ಣಿಟ್ಟರು. ಲಾರ್ಡ್ ಎಲೆನ್ಬರೋ ತೀರಿಕೊಂಡಿದ್ದ. ಲೆಫಿನೆಂಟ್ ಕರ್ನಲ್ ಕಾರ್ಪೆಂಟರ್ ಚಿಕವೀರರಾಜ ಬಂದುದಕ್ಕೆ ಸಂತೋಷ ವ್ಯಕ್ತಪಡಿಸಿದ. ನೇಮಕ ಪತ್ರಗಳನ್ನು ಪಡೆದು ಹಿಂದೂಸ್ಥಾನಕ್ಕೆ ಹೊಸದಾಗಿ ಹೋಗುವವರಿಗೂ ಅಲ್ಲಿಂದ ಹಿಂತಿರುಗುವವರಿಗೂ ವಾರ್ ವಿಕ್ ರಸ್ತೆಯ ಕ್ಲಿಫ್ಟನ್ ವಿಲಾ ಯಾತಾ్కుళ ವಾಯಿತು. ಚಿಕವೀರರಾಜನ ಆತಿಥ್ಯ ಲಂಡನ್ನಿನ ಮನೆಮಾತಾಯಿತು. && ಚಿಕವೀರರಾಜನನ್ನು ಕುರಿತು ಆಳುವ ವೃತ್ತಗಳಲ್ಲಿ ಸದಭಿಪಾಯ ಮೂಡುವಂತೆ ಮೇಗ್ ಲಿಂಗ್ ಹೃತ್ಪೂರ್ವಕವಾಗಿ ಶ್ರಮಿಸಿದ. ಪ್ರಮುಖ ವ್ಯಕ್ತಿಗಳಿಗೆಲ್ಲ ಮೂರು ಪತ್ರ ಗಳನ್ನು ಆತ ತೋರಿಸುತ್ತಿದ್ದ.