ಈ ಪುಟವನ್ನು ಪರಿಶೀಲಿಸಲಾಗಿದೆ

೨೧೦

ಸ್ವಾಮಿ ಅಪರಂಪಾರ

೭೫

ಶಂಕರಪ್ಪನ ಮನೆಯಲ್ಲಿ ಅವನ ಹೆಂಡತಿ, "ಎಸರಿಡತೀನಿ” ಎಂದಳು.
ಅಪರಂಪಾರನೆಂದ :
“ಇಡು ತಾಯಿ. ಆದರೆ ಉಂಡೇನು ಅಂತ ಭರವಸೆ ಇಲ್ಲ.”
ಶಂಕರಪ್ಪನನ್ನು ಆತ ಕೇಳಿದ:
“ಕೊಳ್ಳಲು ಕಾಸಿಲ್ಲ. ಕಡಲೆ ಪುರಿ ಕೊಡತೀಯೇನಪ್ಪ ?”
“ಅಯ್ಯೋ ಸ್ವಾಮಿಯೊರೆ !”
ಶಂಕರಪ್ಪ ಮೂಟೆಯನ್ನೇ ಅಪರಂಪಾರನ ಮುಂದಿರಿಸಿದ,
ಒಂದಿಷ್ಟನ್ನು ಜಗಿದು ಅಪರಂಪಾರನೆಂದ:
“ರುಚಿಯಾಗಿದೆ, ಆದರೆ ಕಡಲೆಪುರಿ ತಿನ್ನುವ ಕಾಲ ಕಳೆಯಿತು. ನಾನು ಮುದುಕ,
ಅಲ್ಲವಾ ? ಹಲ್ಲುಗಳು ಕಡಮೆಯಾಗಿವೆ.”
ಶಂಕರಪ್ಪ ಗಹಗಹಿಸಿ ನಕ್ಕ. ಸ್ವತಃ ಅವನ ಬಾಯಲ್ಲೇ ಎಷ್ಟು ಉಳಿದಿದ್ದುವು ?
ನಕ್ಕಾಗ ಸ್ಪಷ್ಟವಾಗುತ್ತಿತ್ತು. ಆದರೆ ಅಪರಂಪಾರ ಕಾಣಲಾರ.
... ಉಣ್ಣಲು ಕುಳಿತಾಗಲೂ ಅಷ್ಟೆ, ಅಪರಂಪಾರನ ಬೆರಳುಗಳು ಎಲೆಯ ಮೇಲೆಲ್ಲ
ಓಡಾಡಿದುವು. ಗಂಟಲೊಳಗಿಳಿದುದು ಒಂದೇ ತುತ್ತು.
“ಸಾಕು ಶಂಕರಪ್ಪ, ಸವಿಯಾದ ಅಡುಗೆ, ಆದರೆ ನಾ ಉಣ್ಣಲಾರೆ, ಈ ದೇಹ ಬೇಡ
ಅನುತಿದೆ.”
...ಆದರೆ ಒಂದನ್ನು ಮಾತ್ರ ಆ ಜೀವ ಕೇಳುತ್ತಿತ್ತು. ತಾನು ಕೊಡಗಿಗೆ ಹೋಗ
ಬೇಕು ಎಂಬುದನ್ನು
“ನಾನು ಕೊಡಗಿಗೆ ಹೋಗಬೇಕು, ಶಂಕರಪ್ಪ, ಮುಂದಣೂರಿಗೆ ಬಟ್ಟೆ ಇದೆ
ಹೋಗಂದಡೆ ಅಂಧಕನೇನು ಬಲ್ಲ ಹೇಳು ? ಅಲ್ಲಿ ತನಕ ಬರತೀಯಾ ?”
“ಬರದೆ ಉಂಟೆ ಸ್ವಾಮಿಯೋರೆ ? ಈ ದೇಹದಲ್ಲಿ ಉಸಿರಿರುವವರೆಗೂ ನಿಮ್ಮ ನಾನು
ಬಿಟ್ಟಿರುತೀನಾ ?”
“ನಾಳೆ ನಸುಕಿನಲ್ಲಿ ಹೊರಡೋಣವಾ ?”
“ಹೇಗೆ ಅಂತೀರೋ ಹಾಗೆ.”
“ನಿನ್ನ ಹೆಂಡತಿ__”
“ಮಕ್ಕಳ ಮನೆಯಲಿರುತಾಳೆ, ತಿಳೀದಾ ? ನಾನು ಚಾವಡಿಕಾರ ಅಲ್ಲವಾ ?”
ಅಪರಂಪಾರ ಶಂಕರಪ್ಪನ ಪತ್ನಿಯನ್ನು ಉದ್ದೇಶಿಸಿ ಅಂದ :
“ಕರಕೊಂಡು ಹೋಗಲಾ, ತಾಯಿ ?”
“ಹೋಗಿ, ಸೋಮಿಯೋರೆ, ನಾನು ಬೇಡ ಅಂದೇನಾ ?”
...ಮಾರನೆಯ ದಿನ ನಸುಕಿನಲ್ಲಿ ಶಂಕರಪ್ಪನೂ ಅಪರಂಪಾರನೂ ಕೊಡಗಿಗೆಂದು
ಬೆಂಗಳೂರಿನಿಂದ ಪಯಣ ಬೆಳೆಸಿದರು. ನಡಿಗೆ ಸುಲಭವಾಗಿರಲಿಲ್ಲ. ಅಪರಂಪಾರನ
ಕಾಲುಗಳಿಗೆ ರೆಕ್ಕೆ ಹುಟ್ಟಲಿಲ್ಲ.
ಅವನೆಂದ: