ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಅಪರಂಪಾರ ಬಳಿಕ ಸಿದ್ಧಲಿಂಗ ವೀರಪಾಜಿಗೆ ಅಂದ:

"ಇನ್ನು ನಾವೂ ನೀವೂ ಬಂದುಗಳು, ಬರ್ರಿ."

"ಬಾ, ಕುಳಿತುಕೋ" ಎಂದರು ಸ್ವಾಮಿಗಳು. ಅವರೆದುರು ತುಸುದೂರದಲ್ಲಿ ವೀರಪಾಜಿ, ಭಕ್ತಿಭಾವದಿಂದ ನೆಲದಮೇಲೆ ಮಂಡಿಸಿದ. ಹಿಂದಿನ ರಾತ್ರೆ ನಿಲ್ಲಿಸಿದ್ದಲ್ಲಿಂದ ಸಂವಾದದ ಎಳೆಯನ್ನು ಸ್ವಾಮಿಗಳು ಎತ್ತಿಕೊಂಡರು.

"ವಿರಕ್ತರ, ಜಂಗಮರ ಜೀವನದಲ್ಲಿ ಅದೇನು ಸುಖ ಕಾಣತೀಯೆ, ವೀರಪಾಜಿ?" ಬಾಲ್ಯದಲ್ಲಿ ಕೇಳಿ ಕಲಿತಿದ್ದ. ತಾಡವೋಲೆ ಪ್ರತಿಗಳಿಂದ ಓದಿ ತಿಳಿದಿದ್ದ ವಚನಗಳ ಲ್ಲೂ೦ದು ವೀರಪ್ಪನ ತುದಿನಾಲಗೆಗೆ ಬಂತು.
"ಚಂದ್ರಮನಂತೆ ಕಳೆ ಸಮನಿಸಿತ್ತೆನಗೆ, ಸಂಸಾರವೆಂಬ ರಾಹು ಸರ್ವಗ್ರಾಸಿಯಾಗಿ ನುಂಗಿತು, ಅಯಾ, ಇಂದೆನ್ನ ದೇಹಕ್ಕೆ ಗ್ರಹಣವಾಯಿತು, ಅಯಾ..."
"ಹುಂ. ಈಗ ರಾಹುಮುಕ್ತನಾಗಬೇಕು ಅನ್ನತೀಯಾ?" 

"ಹೌದು, ಸ್ವಾಮಿಗಳೇ...”

"ಅರಸನ ಮೇಲೆ ನಿನಗೆ ದ್ವೇಷ ಇಲ್ಲ? ರಾಜ್ಯ ಆಳಬೇಕೆಂಬ ಅಭಿಲಾಷೆ ಇಲ್ಲ?” 

“ಇನಿತೂ ಇಲ್ಲ." "ತಮ್ಮ ಸಾನ್ನಿಧ್ಯ ಈ ಜೀವಕ್ಕೆ ನೆಮ್ಮದಿ ನೀಡಿದೆ. ಇನ್ನು ಅಮೃತ ಬೇಡ, ಹಾಲಾ ಹಲವೇ ಇರಲಿ-ಎನ್ನಲೆ? ಗಂಗಾನದಿಯಲ್ಲಿ ಮಿಂದು ಗಂಜಳದಲ್ಲಿ ಹೊರಳುವರೆ? ಚಂದನ ವಿರಲು ದುರ್ಗಂಧವ ಮೈಯಲ್ಲಿ ಪೂಸುವರೆ? ಸುರಭಿ ಮನೆಯಲ್ಲಿ ಕರೆಯುತ್ತಿರೆ ಹರಿವರೆ ಸೂಣಗನ ಹಾಲಿ೦ಗೆ ?"

"ವೀರಪ್ಪಾಜಿ, ಇದನ್ನು ಸ್ವಲ್ಪ ಯೋಚಿಸಿ ನೋಡು : ಬಟ್ಟೆಬಯಲೆಲ್ಲ ಗಟ್ಟಿಗೊಂಡೊಡೆ, ಸ್ವರ್ಗ ಮೃತು ಪಾತಾಳಕ್ಕೆ ಠಾವಿನ್ನೆಲ್ಲಿಹುದು? ಮೇಘ ಜಲವೆಲ್ಲ ಮುತ್ತಾದೊಡೆ ಸಪ್ತ ಸಾಗರಂಗಳಿಗೆ ಉದಕವೆಲ್ಲಿಹುದು?..."   ಸ್ವಾಮಿಗಳಾಡಿದ ವಚನದ ಗೂಢಾರ್ಥವೇನು ಎಂದು ವೀರಪ್ಪ ಚಿಂತಿಸಿದ. ಕ್ಷಣ ತಡೆದು ಅವರೇ ಅಂದರು :
"ರಾಜ್ಯದ ರಕ್ಷಕರಾದವರೆಲ್ಲ ಕೈದು ಕೆಳಗಿಟ್ಟರೆ ಏನಾದೀತು, ವೀರಪ್ಪಾಜಿ?"
"ನನ್ನ ಮುಂದಿರುವುದು ಎರಡು ವಿಷಯ, ಸ್ವಾಮಿಗಳೇ." 

"ಹೇಳು." "ಒಂದು, ಸಂಸಾರಿಯಾಗಿ ಬಾಳುವುದು. ನನಗದು ಇಷ್ಟವಿಲ್ಲ. ಸಂತಾನ ಪಾಪ್ತಿಯಾಗಿ ಆ ಸಂತಾನ ಯಾದವೀಕಲಹದ ಕಥೇನ ಮುಂದರಿಸೋದು ನನಗೆ ಬೇಕಿಲ್ಲ. ಇನ್ನೊಂದು, ದೇಶಕ್ಕೆ ಗಂಡಾಂತರ ಒದಗಿದರೆ ನಾನು ಸಲ್ಲಿಸಬೇಕಾದ ಸೇವೆಯ ಪ್ರಶ್ನೆ."

"ಹ್ಮ, ಆಗೇನು ಮಾಡಬೇಕೆನ್ನುವೆ?ಜಪಮಾಲೆ ಬದಿಗಿರಿಸಿ ಖಡ್ಗಧಾರಿಯಾಗತೀಯೊ?” 

ವೀರಪ್ಪ ಉತ್ತರವೀಯಲಿಲ್ಲ, ಅವನ ಮನಸಿನ ಹೊಯಾಟ ಕಂಡು ಸ್ವಾಮಿಗಳೇ ಅ೦ದರು: