ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಅಪರಂಪಾರ ೮೫

ತನ್ನ ದಿವಾಣಕಖಾನೆಯಲ್ಲಿ ಉತ್ಕ೦ಠಿತನಾಗಿ ನಿ೦ತ ಆರಸ ಗಡಸು ಸ್ವರದಲ್ಲಿ ಅ೦ದ :            
 "ಒಳಕ್ಕೆ ಹೋಗಿ.ಎಲ್ಲಾ ಆಮೇಲೆ ಹೇಳತೀನಿ.ಅವನು ಯಾರು ಅನೋದು

ಮೊದಲು ಗೊತ್ತಾಗಲಿ.

 ಆತ ಬಂಗಾರದಂಚಿನ ನಿಲುವಂಗಿಯನ್ನು ಅವಸರದಲ್ಲಿ   ತೊಟ್ಟಿದ್ದ, ಕೆಂಪು ಬಣ್ಣದ 

ರೇಶಿಮೆಯ ಶಾಲನ್ನು ಸೊಂಟಕ್ಕೆ ಬಿಗಿದಿದ್ದ, ನುಣುಪು ತಲೆಗೂದಲನ್ನು ಹಿಂದಕ್ಕೆ ಬಾಚಿತ್ತು.

   ಎತ್ತರದ ಪೀಠದ ಮೇಲೆ ಚಿಕವೀರರಾಜೇಂದ್ರ ಕುಳಿತ.
   ಸ್ವಾಮಿ ಬಂದಾಗ ತಾನು ಎದ್ದು ನಿಲ್ಲಬೇಕೆ? ಪ್ರಣಾಮ ಮಾಡಬೇಕೆ?
   ಇಲ್ಲವೆ, ಅಪರಾಧಿಯಂತೆ ಆತನನ್ನು ನಡೆಸಿಕೊಳ್ಳಬೇಕೆ? ಆತ ವೀರಪ್ಪನಲ್ಲದೇ 

ಹೋದರೆ, ಹೀಗೆ ತಾನು ಮಾಡುವುದು ತಪ್ಪಾಗುವುದಲ್ಲ ?

 ಕುಳಿತವನ್ನು ಏಳುವುದಕ್ಕಿಂತ ಮೊದಲೇ ನಿಂತಿರುವುದು ಮೇಲು--ಎಂದು ಚಿಕವೀರ
ರಾಜೇಂದ್ರನೆದ್ದು ಅಸಹನೆಯಿಂದ ಆಚೆಗೆ ಈಚೆಗೆ ನಡೆದ. ಹಾವುಗೆಯ ಸದ್ದು ಸಮೀಪಕ್ಕೆ
ಬರತೊಡಗಿದಂತೆ, ಬಾಗಿಲಿಗೆ ಬೆನ್ನು ಮಾಡಿ, ಗೋಡೆಯ ಮೇಲಿದ್ದ ದೊಡ್ಡ ವೀರರಾಜೇಂದ್ರ
ಹಾಗೂ ಲಿಂಗರಾಜೇಂದ್ರರ ತೈಲಚಿತ್ರಗಳನ್ನು ನೋಡುತ್ತ ನಿಂತ.
  ಮೂವರೂ ದಿವಾಣಖಾನೆಯ ಬಾಗಿಲನ್ನು ತಲಪಿದರು. ಐಯಣ್ಣ ಅರಸನ ಗಮನ 

ಸೆಳೆಯಬೇಕು ಅನ್ನುವಷ್ಟರಲ್ಲೆ, ಉಚ್ಚಕಂಠದಲ್ಲಿ ಅಪರಂಪಾರನೆಂದ:

 "ನಾವು ಬಂದಿದೇವೆ !"
 ಚಕಿತನಾದ ರಾಜ ಥಟ್ಟನೆ ತಿರುಗಿದ. ಎದುರು ನಿಂತಿದ್ದ ಭವ್ಯಾಕೃತಿಯ ಮು೦ದೆ

ಅವನ ದರ್ಪದ ಠೀವಿ ಶಿಥಿಲಗೊಂಡಿತು. ಅವನಿಗರಿಯದಂತೆಯೇ ಕೈಗಳು ಮೇಲಕ್ಕೆ ಸರಿದು ಒಂದನ್ನೊಂದು ಮುಟ್ಟಿದುವು.

   ಅಪರಂಪಾರನ ಮನಸ್ಸಿನ ಸ್ಥೈರ್ಯ ಲವಲೇಶವಾದರೂ ಕುಸಿಯಲಿಲ್ಲ, ಆಶೀರ್ವದಿ

ಸುವವನಂತೆ ಆತ ಬಲ ಅಂಗೈಯನ್ನು ತುಸು ಮೇಲಕ್ಕೆತ್ತಿ, ವಿಜೇತನ ಠೇಂಕಾರದಂತಿದ್ದ ಸ್ವರದಲ್ಲಿ ಅಂದ :

 "ಅರಸ, ಯಾಕೆ ಕರೆಸಿದೆ ?"
  ಏಕವಚನದ ಸಂಬೋಧನೆ ಕೇಳಿದ ಚಿಕವೀರರಾಜನಿಗೆ ಹಾವಿನ ಹೆಡೆಯನ್ನು ಮೆಟ್ಟಿ 

ದಂತಾಯಿತು. ಅಪರಂಪಾರನಿಗೆ ಕರೆಕಳುಹಿದ ಮೊದಲ ಉದ್ದೇಶದ ನೆನಪು ಜಾಗೃತ ವಾಯಿತು. ಕೈಬೆರಳುಗಳು ಸಡಿಲಗೊಂಡು, ತೋಳುಗಳು ಎಡಬಲಗಳಲ್ಲಿ ಜೋತುವು. ನೆಟ್ಟದೃಷ್ಟಿಯಿಂದ ಆತ ಅಪರಂಪಾರನನ್ನು ನೋಡಿದ.

  ಒಳಬಾಗಿಲ ತೆರೆಯ ಹಿಂಬದಿಯಿಂದ ರಾಣಿ ಗೌರಮ್ಮನೂ ಆಕೆಯ ಮಗಳೂ ಅಸ್ಪಷ್ಟ

ವಾಗಿ ಕಾಣಿಸುತ್ತಿದ್ದ ಸ್ವಾಮಿಯ ಆಕೃತಿಯನ್ನು ಕಂಡರು. ಸಂವಾದವನ್ನು ಆಲಿಸಿದರು.

  ಚಿಕವೀರರಾಜನೆ೦ದ :
 "ಕೊಡಗಿನ ಸಿಂಹಾಸನಾಧೀಶ್ವರರಾದ ನಾವು ನಿಮ್ಮನ್ನು ಕುರಿತು ಕೆಲವು ಪ್ರಶ್ನೆ ಕೇಳ

ಬೇಕಾಗಿದೆ."

"ಉತ್ತರ ಕೊಡಲು ಸಿದ್ಧವಾಗಿದೇವೆ" ಎಂದ ಅಪರಂಪಾರ.

ಆರಸ ಕೇಳಿದ: