ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಗಲಿರುಳು. ೧೧. = 4 - --- ಆರ್ಯ:-(ತನ್ನವರನ್ನು ಉದ್ದೇಶಿಸಿ) ಪ್ರಿಯ ಬಂಧುಗಳೆ, ನಿಮಗೆಲ್ಲರಿಗೂ ಸುಖ ವಾಗಲಿ, ನಿಮ್ಮ ಪ್ರಯತ್ನವು ಸತ್ಕಾವ್ಯದಂತೆ, ಅನಾವಶ್ಯಕಶಬ್ದಾಡಂಬರ ವಿಲ್ಲದೆ, ಸಾರ್ಥವಾಗಿರಲಿ, ಅದರಿಂದಲೆ, ಮೈಮರೆತ ಲೋಕವು ಎಚ್ಚತ್ತು ಕಣ್ಣೆರೆದು, ತನ್ನ ಕಾಲಲ್ಲಿ ತಾನು ನಿಲ್ಲುವುದು, 'ಮೈಯೆಂಬುದು ಆಶಾ ಶ್ವತವು; ಸತ್ಕರ್ಮವೆ ಎಂದೆಂದೂ ನಿಲ್ಲುವುದು.' ಎಂಬುದನ್ನರಿತು, ನನ್ನ ಈಗಿನ ಅವಸ್ಥೆಗಾಗಲಿ, ಮುಂದೆ, ನಿಮ್ಮ ಮೇಲೆ ಮೀಸಲಾಗಿರುವ, ಹಗೆಗಳ ಭೇದೋ ಪಾಯಕ್ಕಾಗಲಿ ಕೈಗೆಡದೆ ಪ್ರಯತ್ನಿಸಿರಿ, ಬಂಗಾರಕ್ಕಾದರೂ, ಒರೆದು ನೋಡದೆ, ಬೆಲೆಗಟ್ಟಬೇಡಿರಿ, ಅರಸನ ಅಪ್ಪಣೆಯಿಂದಲೇ ಆದರೂ, ನ್ಯಾಯ ನಿರ್ಣಯಮಾಡುವುದು, ಅಧಿಕಾರಿಯಾದುದರಿಂದ, ಆ ಸಾಮಾನ್ಯ ವ್ಯಕ್ತಿಯ ಎಣಿಕೆಗೆ ಅನುಗುಣವಾಗಿ, ತೀರ್ಪಿನಲ್ಲಿ ತ ಒಷ್ಟೂ ಬೆರೆತುಹೋಗುವುದು ಸ್ವಭಾವವು. ಹಾಗೆಯೆ, ಎಲ್ಲ ವೂ ಪರಮಾತ್ಮನ ಉದ್ದೇಶಾನುಸಾರವಾಗಿಯೆ ನಡೆವುದಾದರೂ, ಮಾಯಾದೇವಿಯ ಮೇಲುವಿಚಾರಣೆಯಿಂದಾಗಿ, ನ್ಯಾಯವು ಅಡಿಮೇಲಾಗಬಹುದು, ಆದರೆ, ಆ ತಪ್ಪೋಪ್ಪುಗಳನ್ನು, ಜಗತ್ಪತಿಯ ಮುಂದೆ ಡ್ಡಿದರೆ, ಆಗಲೆ, ತಪ್ಪಿನ ಜಳ್ಳು ಹಾರಿ ಹೋಗುವುದು, ಅದರಿಂದ, ಬತ್ತದ ತೆನೆ, ಅನ್ನವಾಗಬೇಕಾದರೆ, ಬಹಳ ಕಷ್ಟವನ್ನು ಅನುಭವಿಸುವಂತೆ, ನೀವೂ, ನೀತಿ ಮಾತ್ರದ ಲಾಭಕ್ಕಾಗಿ, ನಿಸ್ವಾರ್ಥತೆಯಿಂದ, ನ್ಯಾಯಮಾರ್ಗದಲ್ಲಿ ಹೆಣಗಾಡ ಬೇಕಾಗುವುದು. 'ಕರ್ಮತ್ಯೇವಾಧಿಕಾರಸ್ತೆ' ಎಂಬ ಪರಮಾತ್ಮನ ಮಾತಿನಲ್ಲಿ ಮನಮೆಚ್ಚಿ, ಸತ್ಕಾರ್ಯಗಳನ್ನ ಮಾಡಿರಿ, ಫಲವನ್ನೊದಗಿಸುವದು ನನ್ನ ಕರ್ತ ವ್ಯವು' ಎಂಬ ಅರ್ಥವಿದೆ. ಕರ್ತವ್ಯ ಸಾಧ್ಯವೆಂದರೆ, ಅತಿ ಕಷ್ಟವಲ್ಲವೆ?” ಎಂಬ ಪ್ರಶ್ನೆಗೆ, ಹಿರಿಯರ ಉತ್ತರ ಹೀಗೆ-'ಬಿತ್ತಿ ಬೆಳೆಯಿಸದೆ ಬತ್ತ ಬಾಯಿಗೆ ಬರು ವುದೆ?” ಕೇಳಿರಿ, ಸನ್ಮಾರ್ಗಾನುಯಾಯಿಯಾದ ಈ ತೇಜಸ್ವಿ ನಿಮಗೆಲ್ಲ ದಾರಿ ತೋರಿಸುವನು, ಅವನನ್ನು ಸರಿಯಾಗಿ ನಡೆಯಿಸುವುದು ನಿಮ್ಮ ಕರ್ತವ್ಯವು. ತೇಜಸ್ಥೆ:- ನಿನ್ನ ಅಪ್ಪಣೆಯಂತೆ, “ಕಬ್ಬಿನ ಹೋಲಿಕೆ ಬಿದಿರ' ಎಂಬ ಹಾಗೆ, ಕೈಲಾಗುವಷ್ಟು ಪ್ರಯತ್ನಿಸುತ್ತೇನೆ. ಆದರೆ, ಮೇಲಿನ ಹೋಲಿಕೆ ಹೇಗಿದ್ದರೂ ಒಳಗಿನ ಸವಿ ಸರಿಯಾಗುವದು ಹೇಗೆ? ಅದರಿಂದ, ನನ್ನ ಅಧಿಕಾರವು, ನಿನ್ನ ಬದಲಾಗಿ, ಸ್ವಲ್ಪ ಕಾಲಕ್ಕೇ ಇರತಕ್ಕುದೆಂದೂ, ಲೋಕೋದ್ಧಾರಕ್ಕಾಗಿ, ನೀನು ಇನ್ನೂ, ಉದಯಿಸಬೇಕೆಂದೂ, ಪರಮಾತ್ಮನನ್ನು ಪ್ರಾರ್ಥಿಸುತ್ತೇನೆ