ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಗಲಿದ್ದು,

r+ * = = +- # → - - .: - -.- ..........' ಅದಕ್ಕೂ ತಕ್ಕ ನಿವೃತ್ತಿಯುಂಟು, ಅಧ್ಯಕ್ಷನಾಗುವ ಜಲಧರನ ಸಿಂಹಾಸನ ವನ್ನು ಸ್ವಲ್ಪ ಚದರಿಸಿ ಆ ಮಹನೀಯರಿಗೆ, ಮೇಲೆಯೆ ಎಡೆಮಾಡಬಹುದು. ಹಾಗಾದರೆ, ಯಾರಿಗೂ ಅಮಾನ್ಯತೆ ಇಲ್ಲ ನಷ್ಟೆ, ಆ *ದೋಷಾವಿಷ್ಟನಾದ ನಕ್ಷತ್ರಪತಿ ಎದುರಲ್ಲಿ ಬಿಳಿನಗೆ ನಕ್ಕುದು ಕಂಕುಳಲ್ಲಿ ದೊಣ್ಣೆ, ಕೈಯಲ್ಲಿ ಸಲಾಂ' ಎಂಬಂತೆಯೆ, ಅಲ್ಲವಾದರೆ ಈ ಕತ್ತಲೆಯ ಪಿಶಾಚಿಯನ್ನು ಕಳು ಹಿದುದೇಕೆ ? ಇರಲಿ, ಅದು ಆ ದೋಷಿಯ ಲಕ್ಷಣವೆ, ಕುಗ್ಗಿ ದರೆ, ಕೊಂಕಿನ ಕೊಲಾಗಿ, ಉಬ್ಬಿ ದರೆ, ಕಳಂಕದ ಕುಂಬಳಕಾಯಿಯಂತಾಗು ವುದು ಅವನ ಹುಟ್ಟುಗುಣವು. ಆದರೆ, ಲೋಕದ ಇಂಗಿತವನ್ನು ಅರಿತು ಕೊಳ್ಳದೆ, ಜಲಧರನೂ ಈಸ್ವಾಭಿಮಾನಘಾತುಕವಾದ ಹೀನಕೃತ್ಯಕ್ಕೆ ಅಸ್ತು ಕೊಟ್ಟುದು ಹೇಗೆ ? ಇರಲಿ, ಸಭೆಗೆ ಬರುವ ಪ್ರತಿನಿಧಿಗಳೆಂದರೆ, ಆಮಂತ್ರಣದ ಅತಿಥಿಗಳಂತೆ, ಮನ್ನಣೆಯಿಂದಿರಬೇಕಲ್ಲದೆ, ಈ ಕತ್ತಲೆಯಂತೆ ಆಕ್ರಮಪ್ರವೇಶಮಾಡಬಹುದೆ ? ನೋಡು, ಎತ್ತೆತ್ತಲೂ ಕತ್ತಲೆಯ ಕಂಬಳಿ ಯಿಂದಾಗಿ ನಮ್ಮವರ ಪೀತಾಂಬರಕ್ಕೂ ಎಡೆಯಿಲ್ಲ, ಹೆಚ್ಚೇಕೆ ? ಆ ಕತ್ತಲೆ ಸಂಧಾನದ ನಿಯಮವನ್ನು, ತನ್ನ ಮಾನದೊಡನೆ ಬಿಟ್ಟು, ಊರಿಗೆ ಊರನ್ನೆ ಕಣ್ಣುಗಟ್ಟಿ ಸೂಲೆಮಾಡುವಂತಿದೆ. ಸದಾಗತಿ:- ಅ..., ಹೀಗೆ, ನಮ್ಮವರಲ್ಲಿ ನಂಬಿಕೆ ನಾಸ್ತಿಯಾದರೆ, ಹೇಗೆ ನಡೆ ದೀತು, ಪ್ರಬಲರಾದ ಹಗೆಗಳ ಎತ್ತಿದ ಕೆನೆದಲಿಗೆ ಕಲ್ಲಿಡಲಿಕ್ಕೆ, ಅಡಿ ಯಲ್ಲಿ ಹರಿಯುವ ಹುಳುಗಳಂತಿರುವ ನಮಗೆ, ಈಗಲೆ ಸಾಧ್ಯವೆ ? ಅದ ರಿಂದ, ನಾವು ಬಗ್ಗೆ ಪೋಣಿಸಿದರೆ, ಕೆಲಸದ ಬಟ್ಟೆ ನೆಗ್ಗಿ ಕಾಣಿಸುವುದು.' ಎಂಬುದನ್ನು ನೆನಪಿನಲ್ಲಿಡಬೇಕು, ತಂತಮ್ಮ ಮನೆಗಲ್ಲದೆ, ಲೋಕಕ್ಕೆ ಬೇಲಿ ಹಾಕಲಿಕ್ಕೆ ಯಾರಿಂದಲೂ ಸಾಗದು, ನಮ್ಮ ಕೆಲಸದ ಕಾಲು, ಇಷ್ಟರ ವಟ್ಟಿಗೆ ಊರಿದುದೆ ಪುಣ್ಯವೆನ್ನಬೇಕು. ಯಾರು ಬಂದರೇನು ? ನಿನ್ನ ಅಮೌಲ್ಯಾಭಿಪ್ರಾಯವನ್ನು ಹೇಳಬಹುದಷ್ಟೆ, ಕಂಬಳಿಯಿಂದಾಗಿ ಪೀತಾಂಬರದ ಬೆಲೆ ತಗ್ಗದು. ತೇಜಸ್ವಿ - ಇದೇನು, ನೀನು ಕಂಡೂ ಕಾಣೆನೆನ್ನುತ್ತಿರುವುದು ! ನಕ್ಷತ್ರಪತಿಗೂ ಲೋಕಕ್ಕೂ ಇರುವ ವಿರೋಧವೆಂದರೆ, ಈ ಕತ್ತಲೆಯ ವಿಷಯವಾಗಿಯೆ *ದೋಷ= ರಾತ್ರಿ, ದುರ್ಗುಣ.