ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಗಲಿರುಳು, ಟ ಈಗಿನ ಕಾಲಕ್ಕೆ ತಕ್ಕಂತೆ ಸುಧಾರಿಸಬೇಕೆಂಬುದಾಗಿ ಇದ್ದಿರಲಿಲ್ಲವೆ? ಅದಕ್ಕಾಗಿ ತೇಜಸ್ವಿಯ ಅವಿಚಾರಿತ ಭುರಭುರಾವಣೆಯ ಭುಸ್ಸಿನ ಬೆಂಕಿಯ ಬೂದಿಯನ್ನು ಅರಿತೆ ನಮ್ಮನ್ನು ಅಧಿಕಾರಿಗಳನ್ನಾಗಿ ಆರಿಸಿದುದು. ಲೋಕ:-ಓಹೋ, ನೀವೂ ಮೇಲಧಿಕಾರಿಗಳೊ ? ಈಗಲೆ ಸ್ವಷ್ಟವಾಯಿತು. ಹಾಗಾದರೆ, ಅಂಗಾರಕಾದಿಗಳತೆ, ಅಧಿಕಾರಿ (ಬಹುವಿರೋಧಿ) ಯಾದ ನಕ್ಷತ್ರಪತಿಯನ್ನು ಹಿಂಬಾಲಿಸುವವರೆ ಆಯಿತು, ಕೇಳು; ಆರ್ಯನ ಆ ನುಡಿಗಟ್ಟಿನ ಮಟ್ಟು, ನಿನ್ನೊಬ್ಬನ ಒಂದು ಮನಸ್ಸಿಗೆ ಮುಟ್ಟದೆ ಮರೆತು ಹೋದರೂ, ನಮ್ಮ ಕೋಟ್ಯಂತರದ ಮನಸ್ಸಿಗೆ ಗಟ್ಟಿಯಾಗಿ ಅಂಟಿಕೊಂಡೇ ಇದೆ, ನಮ್ಮ ಈ ಲೋಕದ ಎಣಿಕೆಗೆ ಅಡ್ಡ ಬಂದರೆ ಮಾತ್ರವೆ, ತೇಜಸ್ವಿ ಯನ್ನು ಆತಂಕಿಸುವ ಹಕ್ಕು ನಿಮಗೆ ಇರಬೇಕೆಂದು, ಆರ್ಯನ ಕಟ್ಟು, ನಮ್ಮ ಮತವೆ ತೇಜಸ್ವಿಯ ಮಾತಿನಲ್ಲಿ ಅಚ್ಚಾಗಿರುವಾಗ, ನಿನ್ನ ಈ ಹೊಣೆ ಗಾರಿಕೆಯ ಮಾತಿಗೆ ಬಣ್ಣವೆಲ್ಲಿ೦ದ ? ನೀವು ನಮ್ಮ ಜೀವನಪ್ರಾಣಾಧಾರ ರೆಂಬುದು ಸರಿಯಾದರೂ, ನಿಮ್ಮ ಸ್ವಾಭಿಮಾನ ಧರ್ಮ ಹೀನತೆಗಳಿಂದಾಗಿ, ಆ ಅನುಕೂಲತೆಗಳನ್ನು ತೃಣವನ್ನಾಗಿ ಭಾವಿಸುತ್ತೇವೆ. ತೇಜಸ್ಟೀ:- ಲೌಕಿಕರೆ, ಈ ಗಾಳಿಯ ಗಂಟು, ಇನ್ನಾದರೂ, ಸಡಿಲಿಹೋಗ ಬಾರದೆಂದು ಇನ್ನೊಮ್ಮೆ ಎಚ್ಚರಿಸಿರಿ. ಯಾವಾಗಲೂ, ಸ್ವಾರ್ಥಿಗಳಾದ ಅಹಂಮನ್ಯರಿಗೆ ಧರ್ಮದ ದಾರಿಯ ಹೊತ್ತು ಕಡಮೆ, ಅದರಿಂದ, ಚರ್ವಿತ ಚರ್ವಣದಿಂದ ಹದಮಾಡಿ ನಯವಾದ ನಮ್ಮ ಎಣಿಕೆಯ ತುತ್ತು, ಇವನ ಬಾಯಲ್ಲಿದ್ದರೆ, ಸುಲಭವಾಗಿ ಗಂಟಲಿಗಿಳಿದು ಇವನ ಈ ರೋಗವನ್ನು ವಾಸಿಮಾಡಬಹುದು, ಈ ಸ್ವಾರ್ಥಿಯ ಹೇಳಿಕೆಯಂತೆ, ಆಶ್ರಯದಾತರಾದ ನಿಮ್ಮ ಏಳಿಗೆಯಲ್ಲಿ ಆಶೆಯಿರುವುದರಿಂದಲೆ ಹೇಳಿಕೊಂಡಿರುವೆ. 4 ಸದಾಗತಿ:- ಎಲೆ ತೇಜಸ್ವಿ, ಈ ನಿನ್ನ ಈ ಪರಿ, ನಮ್ಮ ಸ್ನೇಹದ ಸೇತುವನ್ನು ಎಂದೆಂದಿಗೂ ಮುರಿದಿಡುವಂತಿದೆ. ನನ್ನ ನಿನ್ನ ಅಭಿಪ್ರಾಯಗಳೆಂಬ ಬಂಧು ಗಳು, ಅನ್ನೋನ್ಯರ ಕಿವಿಬಾಗಿಲನ್ನು ಒಳಹೊಕ್ಕು, ಮನಸ್ಸಿನ ಮನೆಯಲ್ಲಿ ಸಮ್ಮಾನವನ್ನುಂಡು ಬಳೆದು ಬಾಳುವ ಏಳಿಗೆಯನ್ನು ಕಳೆದುಕೊಳ್ಳುವಂತಿವೆ. ಹೆಚ್ಚೇನು ? ಮೂರು ಮೂರು ಬಾರಿಗೂ ಸಾರಿಹೇಳುತ್ತೇನೆ. ಇಂಥ ಅಹಂಕಾ ರವು ಸಲ್ಲದು. ದಾರಿಗಿಂತ ಅಗಲವಾದ ತೇರು ಮುಂದುವರಿಯದು.