ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಗಲಿರುಳು, ೭ ಹನಿಗಳ ಈಟಗಳು ಮಾಡಸಂದುಗಳಲ್ಲಿ ಯೂ, ಗಿಳಿಬಾಗಿಲುಗಳ ವಿಡಗಳ ಆಯೂ ನುಸುಳಿ, ಸಮಾಧಿಭಂಗಕ್ಕೆ ಪ್ರಯತ್ನಿಸಹತ್ತಿದುವು, ಅವರಿಂದೇನು ? ಮೂಗಿನಲ್ಲಿ ಉಂಡರೆ ಹೊಟ್ಟೆ ತುಂಬುವುದೆ? ಆ ಒತ್ತಾಯವು, ಕುಂಭಕರ್ಣ ನಿಗೆ ಇರುವ ಚುಚ್ಚಿದಂತೆ, ಲವಲೇಶವಾದರೂ ಫಲಕಾರಿಯಾಗಲಿಲ್ಲ. ಹೊರಗೆ ಅಂತೂ, ಜಲಧರನ ವಾಹಿನಿಯ ಕೋಲಾಹಲಕ್ಕೆ ತೆರವೇ ಇದ್ದಿಲ್ಲ. ಗೆರಸೆ ಬಡಿದು ಇಲಿಯನ್ನು ಅಟ್ಟುವ ಆಯೆಣಿಕೆಯಾದರೂ, ಈ ಮಹತ್ಕಾ ರ್ಯದಲ್ಲಿ ಗುರಿಮುಟ್ಟುವುದು ಹೇಗೆ ? ಕಂದ || ವನಮಧ್ಯದಲಿ ಸಮಾಧಿಯೊ | ಆಣೆಗೊಂಡಿಹಮುನಿಯ ನಗಲಿಸುವಖಳಜನವು || ದಣಿವುತಧೋಗತಿ' ಗಿಳಿವೊಲು | ವನವಾಹಿನಿ ಕೀಳುನೆಲೆಗೆ ಹರಿಯುತ್ತಿತ್ತು ||೧|| ಲೋಕದ ಸಮಾಧಿಗೆ ಒಂದಿಷ್ಟೂ ಭಂಗವಾಗಲಿಲ್ಲ, ದೃಢನಿಶ್ಚಯದ ಕೋಟೆಯನ್ನು ಒಡೆಯಲಿಕ್ಕೆ ಯಾವ ಗುಂಡುಗಳಿಗೂ ಸಾಧ್ಯವೆ? : ಅಹಂಕಾರಕ್ಕೆ ಔದಾಸೀನ್ಯವೆ ಮದ್ದು' ಎಂಬಂತೆ, ಲೋಕದ ಅಲಕ್ಷತೆಯಿಂದಾಗಿ, ಸ್ವಲ್ಪ ಕಾಲದಲ್ಲಿ ಜಲಧರನು ಜೀವನರಹಿತನಾಗುವ ಕಾಲಬಂತು. ನಕ್ಷತ್ರಪತಿಯೂ, ನಿರ್ಧನರನ್ನು ಬಿಟ್ಟುಬಿಡುವ ಆಶ್ರಿತನಂತೆ, ಜಲಧರನನ್ನು ಮೆಲ್ಲನೆ ತೊರೆಯತೊಡಗಿದನು. ಎಲೆ, ಜಗತ್ತೆ, ತಿಳಿ ವಿನ ಕಣ್ಣನ್ನು ತೆರೆದು, ಒಮ್ಮೆ ಈ ಚಿತ್ರವನ್ನು ನೋಡು, ಭಾಮಿನಿ || ಜೀವನವು ತುಂಬಿರಲು ಮೋರೆಯೊ | ೪ಾವರಿಸಿತೆ ಕಪ್ಪು ನಕ್ಷ ಶ್ರಾವಳಿಯಪತಿಗೆಡೆಗೊಡುತ ತನ್ನಡಿಯ ಲೋಕಕ್ಕೆ | ನೋವನೊದಗಿಸಿ ಕಣ್ಣು ಕತ್ತಲೆ | ತೀವಿಸಿದ ಮೋಡಕ್ಕೆ ಪಾಪದಿ. ಜೀವನವು ಕಡೆಯಾಗಲಾಶ್ರಿತರೇ, ನಗುವರದಕ || ೧ || ಕಷ್ಟ ಬಂದಿರೆ ಬಗ್ಗಿ ಬೀಳದೆ | ಇಷ್ಟ ಚಿಹ್ನೆಗೆ ಹಿಗ್ಗಿ ಹೆಚ್ಚಿದೆ ನೆಟ್ಟ ತನ್ನ ಸಮಾಧಿಯನ್ನಾರ್ಯೋದಯಕ್ಕೆ ಮುನ್ನ ಗಿ' ಬಿಟ್ಟು ಬಿಡೆನೆನ್ನುತ್ತ ಲೋಕವು / ಕಟ್ಟು ಮಾಡಿದೆ, ನೋಡಿ 'ಸ್ವಜನರ ಮೆಟ್ಟಿದಿರಿ, (ಮರಕೇರಿ ಬುಡವನು ಕಡಿಯಲೆಣಿಸದಿರಿ) | ೨ | “ಸರ್ವಜನಾಸ್ಸು ಖಿನೋಭವಂತು' || ತನ್ನ ಮನೆ ತನ್ನವರು ನೆರೆಯವ 1 ರಿನ್ನು ಹುಟ್ಟಿದ ಮಾತೃ ದೇಶವು ಎನ್ನುತಲಿ ಅಭಿಮಾನದಡಿಗಟ್ಟಿಂದ ಮೇಲೇರಿ || ತನ್ನ ಬೆಳಕನು ಬೀರಬೇಹುದು 1 ಮುನ್ನವೇ ನೆಲದಿಂದ ಬಾನಿಗೆ ಸನ್ನೆಗೆದರೆ ಸಾಗದೆಂಬುದನರಿತು ಕೈಗೊಡಿರಿ ೧ 4 |