ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಗಲಿರುಳು. ತ್ರ ತೀಯಾಂ ಕ. -+- ಕತ್ತಲೆ:-(ಪ್ರವೇಶಿಸಿ) ಆ8, “ಯಾವ ರಾಯನಿಗೆ ರಾಜ್ಯ ಹೋದರೂ, ನನಗೆ ರಾಗಿ ಬೀಸುವುದು ತಪ್ಪುವುದಿಲ್ಲ' ಎಂಬಂತೆ ನನಗೆ ಇನ್ನೂ ಈ ಗತಿ! ಆರ್ಯನ ಮೈ ಅಳಿಯಿತು, ಹಗೆಗಳಲ್ಲಿ ಯ ಇತ್ತಂಡಕ್ಕ ಹೊಯ್ಕೆಯಾಗಿ, ಎರಡೂ ನಾಮಾವಶೇಷವಾದಂತೆಯೆ ಆಯಿತು, ಆದರೇನು? ನಮ್ಮವನೆಂದು, ಈ ನಕ್ಷತ್ರ ಪತಿಯನ್ನು ಬಯಸುತ್ತಿದ್ದರೆ, ಎಲ್ಲವೂ ಕನ್ನಡಿಯ ಗಂಟೆ ಸರಿ, ಈಗಿನ ಕಾಲದಲ್ಲಿ ನಮ್ಮವನೆಂದು ಹೊರೆ ಹೊರೆಯ ಫಲವು, ಅದರಿಂದ, ಇಕ್ಕಡೆಯ ಹೊಡೆ ದಾಡಿಕೊಂಡಿದ್ದರೇ ನನ್ನಂಥವರಿಗೆ ಕೈ, : ಇಬ್ಬರ ನ್ಯಾಯ, ಮೂರನೆಯವನ ಆಯ' ಎಂಬ ಸೂತ್ರವನ್ನೆ ಇಲ್ಲಿ ಸುರಿಯ ಬೇಕು, ಆದರೆ, ಇನ್ನಾದರೂ, ಎಡೆಯರಿತೆ ಸುರಿಯತಕ್ಕದ್ದು, ಹೀಗೆ ಯೋಚಿಸುತ್ತ ಕತ್ತಲೆ ಹೊರಟಿತು. ಎಲ್ಲೆಲ್ಲಿ ಯ ಬೆಳಕಿನ ಸಂಚಿಕೆಯ ಮಿಂಚೂ ಇಲ್ಲ. ಲೋಕವಂತೂ, ಮೂರು ಮುಕ್ಕಾಲು ಪಾಲು ಇಹಲೋಕದ ವ್ಯಾಪಾರವನ್ನು ಮರೆತು ಬಿಟ್ಟಿದೆ. ಅದರಿಂದ ಎತ್ತೆತ್ತಲೂ ಶಾಂತತೆಯೆ ತಾನು ತಾನಾಗಿದ್ದು, ಒಂದು ಕಡ್ಡಿ ವಿಳ್ಳೆ'ಂದು ಮುರಿದರೂ ಕಿವಿಗೆ ಕೇಳಿಸುವಂತಿತ್ತು. ಆದರೆ, ನೀಚನಾದ ಸದಾಗತಿಯನ್ನು ನಿಶ್ವಾಸಮೂಲಕವಾಗಿ, ಲೋಕವು ಹೊರದೂಡುತ್ತಿದ್ದುದು ರಿಂದ, ಆ ಗಾಳಿಯ ಬಸಬಸಾವಣೆ ಮಾತ್ರ ಆ ಶಾಂತತೆಗೆ ಅಷ್ಟಿಷ್ಟು ಭಂಗ ಮಾಡುತ್ತಿತ್ತು. ಹೊರಹೊರಗೆ, ಹಾದಿಬೀದಿಗಳಲ್ಲಿ ಮಾಡಮೈದಾನುಗಳಲ್ಲಿ, ನಕ್ಷತ್ರಪತಿಯ ಕೈಯಾಟ, ಒಳಗೊಳಗೆ, ಓಣಿಕೋಣೆಗಳಲ್ಲಿ ಮರೆಮಲೆ ಗಳಲ್ಲಿ ಕತ್ತಲೆಯ ಮಸಮಾಟ, ಒಟ್ಟಿಗೆ ಹೇಳುವುದಾದರೆ, ಊರು, ವಂಚಕ ನಂತೆ, ಒಳಗೊಂದು ಹೊರಗೊಂದು, ಸುಳ್ಳಿನ ನಾಣ್ಯಕ್ಕೆ ಸತ್ಯದ ಮುದ್ರೆ. ಇಲಿಗಳು ದಾರಿಯಲ್ಲಿ ತಲೆಯೆತ್ತಿ ಹರಿದಾಡುತ್ತಿದ್ದವು. ಬೆಕ್ಕುಗಳು ಮೂ' ಎಂಬ ಸಿಳ್ಳಿನೊಡನೆ, ಅಲ್ಲಲ್ಲಿ ತಳವಾರಿಕೆಯ ಸೋಗಿನಿಂದ ಹೊಂಚುಹಾಕು ತಿದ್ದುವು. ಹಕ್ಕಿಯೊಂದು ಟ್ರಂಕು ಡ್ರಿಂಕು' ಎಂದು ಏನೋ ಒಂದು ಲಕ್ಷಣವನ್ನು ಹೇಳಿ ವಾಯುಮಂಡಲದಲ್ಲಿ ತೇಲಿಕೊಂಡು ಹೋಯಿತು. ಅದಕ್ಕೆ ಗೂಗೆ ಹೂಂ ಹೂಂ' ಎಂದುದು ನರಸಣ್ಣನ ಚಿಟ್ಟಿಗನ ಹೌದಣ್ಣ ಹೌದು' ಆಗಿರಬಹುದು, ಆಗ ನಡುವಿರುಳ ಕೋಳಿ ಕೋ ಕೋ' (ಯಾರು ಯಾರು) ಎಂದು ಕೇಳಿತು, ಅದಕ್ಕೆ ಮತ್ತೊಂದು, ಗೂಗೆ ಅಹಂ ಅಹಂ'